ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ಇರಲಿ ಹರಳು

Last Updated 6 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಹರಳುಗಳು (ಕ್ರಿಸ್ಟಲ್) ನಕಾರಾತ್ಮಕ ಶಕ್ತಿಗಳನ್ನು ನಿಯಂತ್ರಿಸುತ್ತವೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ರತ್ನಗಳ ಉಂಗುರ, ಪೆಂಡೆಂಡ್‌ ಧರಿಸುವುದು ಸಾಮಾನ್ಯ. ಆದರೆ ಇತ್ತೀಚೆಗೆ ಮನೆಯ ವಾಸ್ತುವಿನ ಭಾಗವಾಗಿಯೂ ಹರಳುಗಳನ್ನು ಬಳಸಲಾಗುತ್ತಿದೆ.
 
ಮನೆಯ ಹೂಕುಂಡ, ಅಕ್ವೇರಿಯಂ, ಸಣ್ಣ ಬೌಲ್‌ಗಳಲ್ಲಿ ಕ್ರಿಸ್ಟಲ್‌ಗಳ ಬಳಕೆ ಹೆಚ್ಚುತ್ತಿದೆ. ಇವುಗಳಲ್ಲಿ ಹಲವು ಬಗೆಗಳಿದ್ದು, ಬಣ್ಣಗಳಲ್ಲಿಯೂ ವೈವಿಧ್ಯತೆ ಇದೆ. ಮನೆಯ ಅಲಂಕಾರವನ್ನು ಹೆಚ್ಚಿಸುವಲ್ಲಿಯೂ ಇವುಗಳ ಪಾತ್ರ ದೊಡ್ಡದು. ಯಾವ ಬಣ್ಣದ ಹರಳು, ಯಾವ ದಿಕ್ಕುಗಳಲ್ಲಿ ಇದ್ದರೆ ಒಳಿತು ಎಂಬುದಕ್ಕೆ ಇಲ್ಲಿದೆ ಮಾಹಿತಿ.
 
lಪದ್ಮರಾಗ (ಅಮೆಥಿಸ್ಟ್‌): ಈ ಹರಳನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸುವುದರಿಂದ ಮಕ್ಕಳ  ಗ್ರಹಿಕೆ ಶಕ್ತಿ ಹೆಚ್ಚುತ್ತದೆ. ಜೊತೆಗೆ ಮನೆ ಮಂದಿಯ ಒತ್ತಡ ಕಡಿಮೆಯಾಗುತ್ತದೆ.
lಕಡಲನೀಲಿ (ಅಕ್ವಾಮರೆನ್‌): ನೀಲಿ ಬಣ್ಣದ ಈ ಹರಳಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. 
lಹಳದಿ ಬೆಳಚು ಕಲ್ಲು (ಸಿಟ್ರೈನ್‌):   ಸಂಪತ್ತು ಹೆಚ್ಚಲು ಇದು ಸಹಕಾರಿ. ಇದನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು. ಹಣವಿಡುವ ಪೆಟ್ಟಿಗೆಯ ಮೇಲೆ ಇಟ್ಟರೆ ಒಳ್ಳೆಯದು.
lಸ್ಫಟಿಕ ಪಿರಮಿಡ್‌ (ಕ್ವಾರ್ಟ್ಸ್‌): ಮನೆಯ ದಕ್ಷಿಣ ದಿಕ್ಕಿನಲ್ಲಿ ಇದನ್ನು ಇರಿಸುವುದರಿಂದ ಪ್ರಸಿದ್ಧಿ ಮತ್ತು  ಕೆಲಸದಲ್ಲಿ ಉನ್ನತಿ ದೊರಕುತ್ತದೆ.
lಹವಳ (ಕೋರಲ್‌):  ಮನೆ ಮಂದಿಯ ಚಿಂತೆ ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. 
lಗೋಲ್ಡ್‌ ಟೈಗರ್‌ ಐ: ಮನೆಯನ್ನು ಎಲ್ಲಾ ಕೆಟ್ಟ ದೃಷ್ಟಿಗಳಿಂದಲೂ ರಕ್ಷಿಸುವ ಶಕ್ತಿ ಈ ಕಲ್ಲಿಗಿದೆ. ಇದನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸಬೇಕು.
lಮೂನ್‌ ಸ್ಟೋನ್‌: ಸಂಪತ್ತು ಹೆಚ್ಚಲು ಮನೆಯಲ್ಲಿ ಈ ಕಲ್ಲನ್ನು ಬಳಸಬಹುದು. 
lಕಾರ್ನೆಲಿಯನ್‌: ನಸುಗೆಂಪಿನ ಈ ಹರಳು ಮಕ್ಕಳ ಜ್ಞಾನವೃದ್ಧಿಗೆ ಸಹಾಯಕ. ಬೌಲ್‌ನಲ್ಲಿ ಒಂಬತ್ತು ಹರಳನ್ನು ಹಾಕಿ ಈಶಾನ್ಯ ದಿಕ್ಕಿನಲ್ಲಿ ಇದನ್ನು ಇರಿಸಬೇಕು. 
(ಮೂಲ: ವಾಸ್ತು ಕಂಪಾಸ್‌ ಕಮ್ಯುನಿಟಿ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT