ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯರಡ್ಡಿ ಪ್ರತಿಕೃತಿ ದಹಿಸಿ ಪ್ರತಿಭಟನೆ

Last Updated 23 ಏಪ್ರಿಲ್ 2017, 5:26 IST
ಅಕ್ಷರ ಗಾತ್ರ

ವಿಜಯಪುರ: ಪ್ರಧಾನಮಂತ್ರಿ ಮೋದಿ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಧೋರಣೆ ಖಂಡಿಸಿ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿಬಿಜೆಪಿ ಪದಾಧಿಕಾರಿಗಳು ಶನಿವಾರ ಸಚಿವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರವಿ ಖಾನಾಪುರ ಮಾತನಾಡಿ ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ ಪ್ರಧಾನಮಂತ್ರಿ ವಿರುದ್ಧ ನೀಡಿದ ಕೀಳುಮಟ್ಟದ ಹೇಳಿಕೆ ಗೌರವ ತರು­ವುದಲ್ಲ. ಕೊಳಕು ಮನಸ್ಥಿತಿ, ಎಲುಬಿಲ್ಲದ ನಾಲಿಗೆಯ ಸಂಸ್ಕಾರ ಹೀನತೆಯಿಂದ ಈ ರೀತಿಯ ಮಾತು ಬರುತ್ತವೆ.

ಯಾವುದೇ ಅಂಜಿಕೆ, ಅಳುಕಿಲ್ಲದೆ ಜೀವನದ ಹಂಗು ತೊರೆದು ಮೋದಿ ಆಡಳಿತ ನಡೆಸುತ್ತಿದ್ದಾರೆ. ಅಂತಹವರ ವಿರುದ್ಧ ಹೇಳಿಕೆ ನೀಡಿರುವುದು ಖಂಡ­ನೀಯ. ಕೂಡಲೇ ಈ ಹೇಳಿಕೆಯಿಂದ ಹಿಂದೆ ಸರಿದು ಸಚಿವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯ­ದರ್ಶಿ ರವಿಕಾಂತ ಬಗಲಿ, ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಮುಖಂಡ ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ ಮಾತನಾಡಿದರು.

ವಿವೇಕ ಡಬ್ಬಿ, ರಾಜು ಮಗಿಮಠ, ಕಾಂತು ಶಿಂಧೆ, ಶ್ರೀಕಾಂತ ರಾಠೋಡ, ಬಸವರಾಜ ಹೂಗಾರ, ಚಿದಾನಂದ ಯಳಮೇಲಿ, ರಾಮು ಅಂಕಲಗಿ, ಮಳುಗೌಡ ಪಾಟೀಲ, ಭೀಮಾಶಂಕರ ಹದನೂರು, ಮಹೇಶ ಒಡೆಯರ, ಪರಶುರಾಮ ಹೊಸಪೇಟೆ, ಪ್ರಶಾಂತ ಅಗಸರ, ಆನಂದ ಮುಚ್ಚಂಡಿ, ಶರಣು ಲಾಳಸಂಗಿ, ಗಣೇಶ ಹಜೇರಿ, ವಿನಾಯಕ ದಹಿಂಡೆ, ವಿಜಯ ಜೋಶಿ, ರಾಜೇಶ ತಾವಸೆ, ಈರಣ್ಣ ಪಟಣಶೆಟ್ಟಿ, ಚಿದಾ­ನಂದ ಅವರಂಗಾಬಾದ, ಪಾಪುಸಿಂಗ ರಜಪೂತ, ಅಲ್ತಾಫ್‌ ಇಟಗಿ, ಚಂದ್ರಕಾಂತ ಮರಡಿ, ಅಶೋಕ ಬೆಲ್ಲದ, ರಾಮು ಹೊಸಪೇಟ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಗೆ ಒತ್ತಾಯ
ತಾಳಿಕೋಟೆ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ­ದ್ದಾರೆ ಎಂದು ಆರೋಪಿಸಿ ಸಚಿವರ ಪ್ರತಿಕೃತಿ ದಹಿಸಿ ಬಿಜೆಪಿ ಕರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ  ಪ್ರಧಾನ ಕಾರ್ಯದರ್ಶಿ ಆರ್.ಎಸ್.­ಪಾಟೀಲ­(ಕೂಚಬಾಳ) ‘ಸಚಿವರು ಕ್ಷುಲ್ಲಕ ಮಾತು ಆಡುತ್ತಿದ್ದಾರೆ. ತಮ್ಮ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದೇಶದ ಪ್ರಧಾನಿ ನರೇಂದ್ರ ಮೋದಿ ಸತ್ತರೆ ಸಾಯಿಲಿ ಎಂಬ ಉಡಾಫೆ ಹೇಳಿಕೆ ನೀಡಿ ದೇಶದ ಪ್ರಧಾನಿಗೆ ಅವಮಾನ ಎಸಗಿದ್ದಾರೆ.  ದೇಶದ ಒಬ್ಬ ಪ್ರಧಾನಿ ಬಗ್ಗೆ ಈ ರೀತಿಯ ನಿರ್ಲಕ್ಷ್ಯದ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಹೇಳಿದರು.

‘ಕೂಡಲೇ ಸಚಿವ ರಾಯರಡ್ಡಿ ಅವರು ಬಹಿರಂಗವಾಗಿ ಪ್ರಧಾನಿ ಕ್ಷಮೆ ಕೋರಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡರಾದ ಕಾಶಿನಾಥ ಅರಳಿಚಂಡಿ,  ರಾಘವೇಂದ್ರ ವಿಜಾಪೂರ ಮಾತಮಾಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಚಿವ ರಾಯರಡ್ಡಿ ಅವರ ಅಣಕು ಶವಯಾತ್ರೆ  ನಡೆಸಿ ದಹನ ಮಾಡಿದರು.  ಪ್ರತಿಭಟನೆಯಲ್ಲಿ  ವಿಶ್ವನಾಥ ಬಬಲೇಶ್ವರ, ಶಂಕರಗೌಡ ಹಿರೇಗೌಡರ, ಪುರಸಭಾ ಸದಸ್ಯ ಅಣ್ಣಪ್ಪ ಜಗತಾಪ, ತಮ್ಮಣ್ಣ ದೇಶಪಾಂಡೆ, ಶಶಿಧರ ಲೋಕರೆ, ಶಶಿಧರ ಡಿಸಲೆ, ನದೀಂ ಕಡು, ಮುತ್ತು ಶೇವಳಕರ, ಕಾಶಿನಾಥ ಮಬ್ರುಂಕರ, ಸಂಗನಗೌಡ ಪಾಟೀಲ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT