ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡು ಸಾಂಸ್ಕೃತಿಕ ಸಂಭ್ರಮ ಇಂದು

Last Updated 25 ಏಪ್ರಿಲ್ 2017, 5:52 IST
ಅಕ್ಷರ ಗಾತ್ರ

ಸಂಕೇಶ್ವರ: ಇಲ್ಲಿನ ಶಿವನಂದಾ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಗಡಿನಾಡು ಸಾಂಸ್ಕೃತಿಕ ಸಂಭ್ರಮ–2017 ಕಾರ್ಯಕ್ರಮ ಇದೇ 25ರಂದು ಸಂಜೆ 4 ಗಂಟೆಗೆ ಇಲ್ಲಿಯ ನದಿ ಗಲ್ಲಿಯಲ್ಲಿರುವ ಚಿತ್ರಸೃಷ್ಟಿ ಹಾಲ ಸಾಂಸ್ಕೃತಿಕ ಭವನ (ರಾಮಚಿತ್ರ ಮಂದಿರ)ದಲ್ಲಿ ಆಯೋಜಿಸಿದೆ.

ಪುರಸಭೆ ಅಧ್ಯಕ್ಷೆ ಧನಶ್ರೀ ಕೊಳೆಕರ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ  ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪುರಸಭಾ ಸದಸ್ಯ ಸಂಜಯ ಶಿರಕೋಳಿ, ಉಪನ್ಯಾಸಕ ಎಸ್.ಡಿ. ಬಾಗೇವಾಡಿ, ಭಾಗವಹಿಸುವರು. ಪ್ರೊ. ಎಲ್.ವಿ. ಪಾಟೀಲ ಅಧ್ಯಕ್ಷತೆ ವಹಿಸುವರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗೀತ ಗಾಯನ, ಕೈವಲ್ಯ ಭಜನೆ, ಸೋಬಾನ ಪದ, ಶಾಸ್ತ್ರೀಯ ಸಂಗೀತ, ಸಮೂಹ ಗಾಯನ, ವೀರಗಾಸೆ ಕುಣಿತ, ತತ್ವ ಪದ, ಭಜನಾ ಪದ, ಭರತನಾಟ್ಯ, ಭಕ್ತಿ ಗೀತೆ, ದಾಸವಾಣಿ, ಭಾವಗೀತೆ, ಏಕಪಾತ್ರಾಭಿನಯ, ವಾದ್ಯ  ಗೋಷ್ಠಿಗಳು ನಡೆಯಲಿವೆ.

ಕರುನಾಡು ಕಲಾ ರತ್ನ ಪ್ರಶಸ್ತಿಯನ್ನು ತ್ಯಂಬಕೇಶ್ವರ ಶಾಸ್ತ್ರಿ ಲಕ್ಷ್ಮಣ ವೈದ್ಯ, ಗೋಪಾಲ ಚಿಪಣಿ, ಮಾಧವಿ ಗುರವ ಹಾಗೂ ಅಕಬರ  ಸನದಿ  ಅವರಿಗೆ ಪ್ರದಾನ ಮಾಡಲಾಗುವುದು.ಸಮಾರೋಪ ಸಮಾರಂಭದಲ್ಲಿ ಕನ್ನಡ ಪರ ಹೋರಾಟಗಾರರಾದ ಕಿರಣ ನೇಸರಿ, ಮಹೇಶ ಹಟ್ಟಿಹೋಳಿ, ದಿಲೀಪ ಹೊಸಮನಿ ಭಾಗವಹಿಸುವರು. ಡಾ. ಶಿ.ಬಾ. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT