ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಪಡೆಯ ಪ್ಲೇಆಫ್ ಹಾದಿ ಕಠಿಣ

ಸಬ್ ಏರ್ ವ್ಯವಸ್ಥೆಗೆ ಸವಾಲೆಸೆದ ಮಳೆರಾಯ
Last Updated 25 ಏಪ್ರಿಲ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ಅತ್ತ ಜೋರಾಗಿ ಬರದ ಇತ್ತ ಸುಮ್ಮನೂ ಇರದ ಮಳೆರಾಯ ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದ ಸಬ್‌ ಏರ್‌ ಸಿಸ್ಟಮ್‌ಗೂ ಸವಾಲೆ ಸೆದ.  ಅಲ್ಲದೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು  (ಆರ್‌ಸಿಬಿ) ತಂಡದ ಪ್ಲೇಆಫ್‌ ಪ್ರವೇಶದ ಹಾದಿಯನ್ನು ಮತ್ತಷ್ಟು  ಕಠಿಣಗೊಳಿಸಿದ.

ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದ ರಾಬಾದ್ ನಡುವಣ ಐಪಿಎಲ್ ಪಂದ್ಯ ದಲ್ಲಿ ಟಾಸ್ ಹಾಕಲು ಕೂಡ ಅವಕಾಶ ಕೊಡದಂತೆ ಮಳೆ ಆಟವಾಡಿತು. ರಾತ್ರಿ 11 ಗಂಟೆಯವರೆಗೂ ತುಂತುರು ಮಳೆಯೇ ಮೇಲುಗೈ ಸಾಧಿಸಿತು.

ಅಂಪೈರ್‌ಗಳಾದ ಮರೈಸ್ ಎರಸ್‌ ಮಸ್, ಸಿ. ಶಂಸುದ್ದೀನ್, ಪಂದ್ಯದ ರೆಫರಿ ಚಿನ್ಮಯ್ ಶರ್ಮಾ ಅವರು ಚರ್ಚಿಸಿ ಪಂದ್ಯವನ್ನು ರದ್ದು ಎಂದು ಅಧಿಕೃತವಾಗಿ ಘೋಷಿಸಿದರು. ಅದರಿಂದಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕ ಹಂಚ ಲಾಯಿತು. ಐಪಿಎಲ್ ಹತ್ತನೇ ಆವೃತ್ತಿ ಯಲ್ಲಿ ಮಳೆಗೆ ಆಹುತಿಯಾದ ಮೊದಲ ಪಂದ್ಯ ಇದಾಯಿತು.

ಒಟ್ಟು ಎಂಟು ಪಂದ್ಯಗಳನ್ನಾಡಿರುವ ಆರ್‌ಸಿಬಿ ಎರಡರಲ್ಲಿ ಮಾತ್ರ ಗೆದ್ದಿದೆ. ಇನ್ನೂ ಉಳಿದಿರುವ ಆರು ಪಂದ್ಯಗಳಲ್ಲಿ ಯೂ ಗೆದ್ದರೆ ಮಾತ್ರ  ನಾಕೌಟ್ ಹಂತ ಪ್ರವೇಶಿಸುವ ನಿರೀಕ್ಷೆ ಜೀವಂತವಿರುತ್ತದೆ. ಆದರೆ ಸನ್‌ರೈಸರ್ಸ್ ತಂಡಕ್ಕೆ ಈ ಚಿಂತೆ ಇಲ್ಲ. ವಾರ್ನರ್ ಬಳಗವು ಆಡಿರುವ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ಆದರೆ, ತವರಿನಿಂದ ಹೊರಗೆ ಆಡಿದ ಮೂರು ಪಂದ್ಯಗಳಲ್ಲಿಯೂ ಸೋತಿದೆ. ಹೋದ ವರ್ಷ ಇಲ್ಲಿ ನಡೆದಿದ್ದ ಫೈನಲ್‌ ನಲ್ಲಿ ಚಾಂಪಿಯನ್ ಆಗಿ ಹೊರಹೊ ಮ್ಮಿದ್ದ ವಾರ್ನರ್‌ ಬಳಗವು ಮತ್ತೊಮ್ಮೆ ಜಯದ ಸವಿ ಉಣ್ಣುವ ನಿರೀಕ್ಷೆಯಲ್ಲಿತ್ತು. ಆದರೆ ಮಳೆ ಅಡ್ಡಿಯಾಯಿತು.

ಸಬ್‌ ಏರ್‌ ವ್ಯವಸ್ಥೆಗೂ ಸವಾಲ್!: ‘ಮನುಷ್ಯ ಚಾಪೆ ಕೆಳಗೆ ನುಸುಳಿದರೆ, ನಿಸರ್ಗ ರಂಗೋಲಿ ಕೆಳಗೆ ನುಸುಳಿತು’ ಎಂಬ ಮಾತು ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ನಿಜವಾಯಿತು.

ಸಂಜೆ 5.30ರಿಂದಲೇ ಬೆಂಗಳೂರಿನ ನೆತ್ತಿಯ ಮೇಲೆ ಬೀಡುಬಿಟ್ಟಿದ್ದ ಮೋಡ ಗಳು ಜೋರಾಗಿ ಮಳೆ ಸುರಿಸಲಿಲ್ಲ. ಆದರೆ ತುಂತುರು ಮಳೆ ಮಾತ್ರ ಹನಿ ಯಿತು. ಜೋರಾಗಿ ಮಳೆ ಸುರಿದು ಹೋಗಿದ್ದರೆ ನೂತನ ಸಬ್‌ ಏರ್ ವ್ಯವಸ್ಥೆ ಮೂಲಕ ಕ್ರೀಡಾಂಗಣದಿಂದ ನೀರನ್ನು ಹೊರಚೆಲ್ಲಿ ಪಂದ್ಯ ನಡೆಯುವಂತೆ ಮಾಡಲು ಕೆಎಸ್‌ಸಿಎ ಸಿಬ್ಬಂದಿ ಸಿದ್ಧವಾ ಗಿತ್ತು.  ಆದರೆ ಹನಿಯುದುರಿಸುತ್ತಲೇ ಇದ್ದ ಮೋಡಗಳು ತಮ್ಮದೇ ಆಟ ನಡೆಸಿದವು.

ಇತ್ತ ಟಿಕೆಟ್‌ಗೆ ದುಡ್ಡು ಸುರಿದು, ಸಂಜೆಯ ವಿಪರೀತ ಸಂಚಾರದಟ್ಟಣೆ ಯನ್ನು ದಾಟಿ ಪಂದ್ಯ ನೋಡಲು ಬಂದಿದ್ದ 20 ಸಾವಿರಕ್ಕೂ ಹೆಚ್ಚು ಪ್ರೇಕ್ಷ ಕರು ಪಿಚ್‌ ಹೊದಿಕೆ ಸರಿಯುವುದನ್ನೇ ಕಾದು ಕುಳಿತಿದ್ದರು. ಮಳೆ ನಿಂತಿತು ಎನಿಸಿದಾಗಲೆಲ್ಲ ಕ್ರೀಡಾಂಗಣ ಸಿಬ್ಬಂದಿ ಹೊದಿಕೆ ಸರಿಸಲು ಬರುತ್ತಿದ್ದರು. ಆಗ ಜನ ಹೋ.. ಎಂದು ಕಿರುಚಿ ಸಂಭ್ರಮಿಸು ತ್ತಿದ್ದರು. ಆದರೆ ವರುಣನ ಚಿನ್ನಾಟವೇ ಮೇಲುಗೈ ಸಾಧಿಸುತ್ತಿತ್ತು. ನಾಲ್ಕು ಹನಿ ಉದುರುತ್ತಿತ್ತು. ಸಿಬ್ಬಂದಿ ತಮ್ಮ ಪ್ರಯತ್ನ ವನ್ನು ಅಲ್ಲಿಗೆ ನಿಲ್ಲಿಸುತ್ತಿದ್ದರು. ಇದರಿಂದ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೌನ ಆವರಿ ಸುತ್ತಿತ್ತು. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್,  ಡಿವಿಲಿಯರ್ಸ್  ಅವರ ಆಟ ನೋಡುವ ನಿರೀಕ್ಷೆ ಮಾತ್ರ ಕುಂದಲಿಲ್ಲ.

ಡಿಜೆ ಸಂಗೀತ ಮಾತ್ರ ಮೊಳಗು ತ್ತಿತ್ತು. ಉಭಯ ತಂಡಗಳ ಚಿಯರ್ ಲೀಡರ್ಸ್‌ಗಳೂ ತೆರೆಮರೆಯಲ್ಲಿ ಆಶ್ರಯ ಪಡೆದಿದ್ದರು.  ಆಟಗಾರರು ಡಗ್‌ಔಟ್‌ ನಲ್ಲಿ ಮಳೆ ನಿಲ್ಲುವುದನ್ನೇ ಕಾಯುತ್ತ ಕುಳಿ ತಿದ್ದರು.  ಅದರೊಂದಿಗೆ ಜನರು ನಿರಾಶೆ ಯಿಂದ ಮಳೆಯಲ್ಲಿ ನೆನೆಯುತ್ತಲೇ ಮನೆಯತ್ತ ಹೆಜ್ಜೆ ಹಾಕಿದರು.

ಮಳೆಯಲಿ...ಜೊತೆಯಲಿ... ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆಟಗಾರ ಯುವರಾಜ್ ಸಿಂಗ್ ಮತ್ತು ಪತ್ನಿ ಹ್ಯಾಜಲ್ ಕೀಚ್ ಅವರು ಮಾತುಕತೆ ನಡೆಸಿದ ಕ್ಷಣ  ಪ್ರಜಾವಾಣಿ ಚಿತ್ರ

ಏಪ್ರಿಲ್ 25 ಮತ್ತು ಮಳೆ!
2012ರಲ್ಲಿ ಏಪ್ರಿಲ್ 25ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು.

ಆಗ ಆರ್‌ಸಿಬಿ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವೆ ಪಂದ್ಯ ಇತ್ತು. ಟಾಸ್ ಆದ ನಂತರ ಮಳೆ ಶುರುವಾಗಿತ್ತು. ನಂತರ ಒಂದೂ ಎಸೆತ ಕಾಣದೆ ಪಂದ್ಯ ರದ್ದಾಗಿತ್ತು. ಆದರೆ ಈ ಬಾರಿ ಟಾಸ್ ಹಾಕುವ ಮುನ್ನವೇ ಮಳೆ ಯ ಆಟ ನಡೆಯಿತು. ಬೆಂಗಳೂ ರಿನಲ್ಲಿ ಕ್ರಿಕೆಟ್ ಪಂದ್ಯ ಇದ್ದರೆ ಮಳೆ ಬರುವುದು ಖಚಿತ ಎಂಬ ಮಾತು ಇದೆ. ಹಿಂದೆಯೂ ಇದು ಹಲವು ಬಾರಿ ಆಗಿದೆ.  ಹೋದ ವರ್ಷ ಎರಡು ಪಂದ್ಯ ಗಳಲ್ಲಿಯೂ ಮಳೆ ಆಗಿತ್ತು.

2015ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣದ ಟೆಸ್ಟ್‌ ಪಂದ್ಯವೂ ಮಳೆಗೆ ಆಹುತಿಯಾ ಗಿತ್ತು.  ಈ ಕ್ರೀಡಾಂಗಣದಲ್ಲಿ ಇಂತಹ ಹಲವಾರು ನಿದರ್ಶನಗಳು ಇವೆ.

ಸಬ್‌ ಏರ್ ವ್ಯವಸ್ಥೆ?
₹ 3.75 ಕೋಟಿ ವೆಚ್ಚದಲ್ಲಿ ಸಬ್ ಏರ್ ತಂತ್ರಜ್ಞಾನವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿದೆ. ಹೋದ ಜನವರಿಯಲ್ಲಿ ಈ ವ್ಯವಸ್ಥೆ ಉದ್ಘಾಟನೆಯಾಗಿತ್ತು.

ಎಷ್ಟೇ ಜೋರಾದ ಮಳೆ ಸುರಿದರೂ ಅರ್ಧಗಂಟೆಯಲ್ಲಿ ನೀರನ್ನು ಕ್ರೀಡಾಂ ಗಣದಿಂದ ಹೊರಗೆ ಹಾಕುವ ನೂತನ ತಂತ್ರಜ್ಞಾನ ಇದಾಗಿದೆ. 

ಟಿಕೆಟ್ ಹಣ ವಾಪಸ್: ಪಂದ್ಯ ರದ್ದಾದ ಕಾರಣ ಪ್ರೇಕ್ಷಕರಿಗೆ ಟಿಕೆಟ್ ಹಣ ಮರು ಪಾವತಿ ಮಾಡುವುದಾಗಿ ಕೆಎಸ್‌ಸಿಎ ತಿಳಿಸಿದೆ. ಪ್ರೇಕ್ಷಕರು ತಮ್ಮ ಬಳಿ ಇರುವ ಅಸಲಿ ಟಿಕೆಟ್‌ಗಳನ್ನು ಸಂಸ್ಥೆಯ ನಿಗದಿತ ಕೌಂಟರ್‌ಗೆ ಮರಳಿಸಬೇಕು. ಅದರ ಬಾರ್‌ಕೋಡ್ ಪರಿಶೀಲನೆ ನಂತರ ಹಣ ಮರಳಿಸಲಾಗುವುದು.

ನಿರಾಶೆ ಕಳೆಯುವ ನಿರೀಕ್ಷೆಗೆ ಮಳೆ ಅಡ್ಡಿ
‘ಕೋಲ್ಕತ್ತದಲ್ಲಿ ಆಗಿದ್ದ ನಿರಾಶೆಯನ್ನು ಇಲ್ಲಿ ಮರೆಯಬಹುದು ಎಂದುಕೊಂಡಿದ್ದೆ. ವಿರಾಟ್ ಬಳಗವು ಗೆಲ್ಲುವ ನಿರೀಕ್ಷೆಯಲ್ಲಿ ಬಂದಿದ್ದೆ. ಆದರೆ ಈ ರೀತಿ ಆಯಿತು’ –ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಚಿಯರ್ ಲೀಡರ್ಸ್‌ನಲ್ಲಿರುವ ಕರಣ್ ಅವರ ಬೇಸರದ ನುಡಿಗಳಿವು.  

ಕೆಂಪು ಕೋಟ್, ಅದೇ ಬಣ್ಣದ ಬ್ರಿಟಿಷ್ ಪೊಲೀಸ್ ಟೋಪಿ, ಕಂಕುಳಲ್ಲಿ ಪುಟ್ಟ ರಿವಾಲ್ವರ್ (ನಕಲಿ), ಹುರಿಮೀಸೆ ತೀಡಿಕೊಂಡು ನಿಂತಿದ್ದ ಅವರ ಮುಖದಲ್ಲಿ ನಿರಾಶೆ ಮನೆ ಮಾಡಿತ್ತು.  ಮೂಲತಃ  ಮುಂಬೈನವರಾದ ಕರಣ್ ಅವರು ವೃತ್ತಿಯಿಂದ ರೂಪದರ್ಶಿ. ಇದೇ ಮೊದಲ ಬಾರಿ ಐಪಿಎಲ್ ತಂಡದ ಚಿಯರ್ ಲೀಡರ್ ಆಗಿದ್ದಾರೆ. ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಅನುಭವ ಇಲ್ಲಿದೆ.

‘ನಾನೊಬ್ಬ ಕ್ರಿಕೆಟ್ ಅಭಿಮಾನಿ. ಈ ತಂಡದಲ್ಲಿ ಇರುವುದು ಖುಷಿ ತಂದಿದೆ. ಎಲ್ಲ ಪಂದ್ಯಗಳಲ್ಲಿಯೂ ಪ್ರದರ್ಶನ ನೀಡುತ್ತಿದ್ದೇನೆ.  ಕೋಲ್ಕತ್ತ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರ್‌ಸಿಬಿ ಚೆನ್ನಾಗಿ ಬೌಲಿಂಗ್ ಮಾಡಿತ್ತು. ನಾವೂ ಮಜಾ ಮಾಡಿದ್ದೆವು. ಆದರೆ ಎರಡನೇ ಇನಿಂಗ್ಸ್‌ ಬಹಳ ಬೇಸರಗೊಂಡೆವು. ಎಲ್ಲವೂ ಅನಿರೀಕ್ಷಿತವಾಗಿತ್ತು. ನಮ ಗಂತೂ ಹೆಚ್ಚು ಕೆಲಸ ಇರಲಿಲ್ಲ. ಹತ್ತು ಓವರ್‌ಗಳ ಒಳಗೆ ಪಂದ್ಯ ಮುಗಿದಿತ್ತು’ ಎಂದು 25ರ ಹರೆಯದ ಕರಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT