ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತವಾಗಿರಲಿ ವೈಫೈ ನೆಟ್‌ವರ್ಕ್‌

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಇತ್ತೀಚೆಗೆ ಕಚೇರಿಗಳಲ್ಲಷ್ಟೇ ಅಲ್ಲ ಮನೆಗಳಲ್ಲೂ ವೈಫೈ ಬಳಕೆ ಹೆಚ್ಚಾಗಿದೆ. ಒಂದೇ ವೈಫೈ ನೆಟ್‌ವರ್ಕ್‌ ಬಳಸಿಕೊಂಡು ಹಲವರು ಲ್ಯಾಪ್‌ಟಾಪ್‌, ಮೊಬೈಲ್‌ಗಳಲ್ಲಿ ಅಂತರ್ಜಾಲ ಬಳಕೆ ಮಾಡುವುದು ಈಗ ಬಹುತೇಕ ಮನೆಗಳಲ್ಲಿ ಸಾಮಾನ್ಯ.

ಕಚೇರಿಗಳಲ್ಲಿ ವೈಫೈ ನೆಟ್‌ವರ್ಕ್ ಬಳಕೆ ಬಗ್ಗೆ ಸಾಕಷ್ಟು ಸುರಕ್ಷತಾ ವಿಧಾನಗಳಿರುತ್ತವೆ. ಆದರೆ, ಮನೆಗಳಲ್ಲಿ ವೈಫೈ ನೆಟ್‌ವರ್ಕ್‌ನ ಸುರಕ್ಷತೆಗೆ ಹಲವರು ಹೆಚ್ಚು ಗಮನ ಹರಿಸಿರುವುದಿಲ್ಲ.
 
ಮನೆಗಳಲ್ಲಿ ವೈಫೈ ಬಳಸುವವರು ಸಾಮಾನ್ಯವಾಗಿ ಮನೆಯ ಯಾರದ್ದಾದರೂ ಹೆಸರನ್ನು ನೆಟ್‌ವರ್ಕ್ ನೇಮ್‌ ಆಗಿ ಕೊಟ್ಟಿರುತ್ತಾರೆ. ಜತೆಗೆ ತಮ್ಮ ಜನ್ಮ ದಿನಾಂಕವನ್ನೋ, ಮದುವೆಯಾದ ದಿನವನ್ನೋ ಅಥವಾ ಹೆಸರಿನ ಜತೆಗೆ @123 ಎಂದೋ ಅಥವಾ ಮೊಬೈಲ್‌ ಸಂಖ್ಯೆಯನ್ನೋ ಪಾಸ್‌ವರ್ಡ್‌ ಆಗಿಸಿಕೊಳ್ಳುವುದು ಹಲವರ ರೂಢಿ. ಆದರೆ, ಈ ರೀತಿ ನೆಟ್‌ವರ್ಕ್ ನೇಮ್‌ ಹಾಗೂ ಪಾಸ್‌ವರ್ಡ್‌ ಕೊಡುವುದು ಸುರಕ್ಷಿತ ವಿಧಾನವಲ್ಲ.
 
ನೀವು ನಿಮ್ಮ ವೈಫೈ ನೆಟ್‌ವರ್ಕ್‌ಗೆ ನಿಮ್ಮ ಹೆಸರನ್ನು, ಉದಾಹರಣೆಗೆ, ಕುಮಾರ್ ಎಂದು ನೆಟ್‌ವರ್ಕ್‌ ನೇಮ್‌ ಕೊಟ್ಟಿದ್ದೀರಿ ಎಂದಿಟ್ಟುಕೊಳ್ಳಿ. ಈ ಹೆಸರನ್ನೇ ಪಾಸ್‌ವರ್ಡ್‌ ಜತೆಗೂ, ಅಂದರೆ ಕುಮಾರ್@123 ಎಂದು ಬಳಸಿದ್ದೀರಿ ಎಂದುಕೊಳ್ಳಿ.
 
ಆಗ ನಿಮ್ಮ ವೈಫೈ ನೆಟ್‌ವರ್ಕ್‌ ಅಸುರಕ್ಷಿತ ಎಂದೇ ಅರ್ಥ. ಇಂತಹ ಸಂದರ್ಭದಲ್ಲಿ ನಿಮ್ಮ ವೈಫೈ ನೆಟ್‌ವರ್ಕ್‌ನ ರೇಂಜ್‌ನಲ್ಲಿ ಯಾರೆಲ್ಲಾ ಬರುತ್ತಾರೋ ಅವರು ಸುಲಭವಾಗಿ ನಿಮ್ಮ ನೆಟ್‌ವರ್ಕ್‌ ದುರುಪಯೋಗಪಡಿಸಿಕೊಳ್ಳಬಹುದು.
 
ಅಲ್ಲದೆ, ನಿಮ್ಮ ನೆರೆಹೊರೆಯವರಿಗೆ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ನಿಮ್ಮ ಜನ್ಮ ದಿನದ ಮಾಹಿತಿ ತಿಳಿದಿದ್ದರೆ ಇಂತಹ ಅಸುರಕ್ಷಿತ ವೈಫೈ ನೆಟ್‌ವರ್ಕ್‌ ಅನ್ನು ದುರ್ಬಳಕೆ ಮಾಡಿಕೊಳ್ಳುವುದು ಅವರಿಗೆ ಇನ್ನೂ ಸುಲಭ.
 
ಹೀಗಾಗಿ ನಿಮ್ಮ ಹೆಸರನ್ನು ನೆಟ್‌ವರ್ಕ್ ನೇಮ್ ಆಗಿ ಹಾಗೂ ಮೊಬೈಲ್ ಸಂಖ್ಯೆ ಅಥವಾ ಹೆಸರಿನ ಮುಂದೆ @123 ಅಥವಾ ಜನ್ಮ ದಿನಾಂಕವನ್ನು ಪಾಸ್‌ವರ್ಡ್‌ ಆಗಿ ಕೊಡುವುದರ ಬದಲು ಸುರಕ್ಷಿತವಾದ ನೆಟ್‌ವರ್ಕ್‌ ನೇಮ್‌ ಹಾಗೂ ಪಾಸ್‌ವರ್ಡ್‌ ನೀಡಿ.
 
ಅಲ್ಲದೆ, ನಿಮ್ಮ ವೈಫೈ ನೆಟ್‌ವರ್ಕ್‌ ಎಲ್ಲರಿಗೂ ಶೋ ಆಗದಂತೆ ಅದನ್ನು ಪರ್ಸನಲೈಸ್‌ ಮಾಡಿ. ನೀವು ಯಾರಿಗೆಲ್ಲಾ ನೆಟ್‌ವರ್ಕ್‌ ನೀಡಬೇಕೆಂದು ಬಯಸುತ್ತೀರೊ ಅವರೊಂದಿಗೆ ಮಾತ್ರ ಪಾಸ್‌ವರ್ಡ್‌ ಹಂಚಿಕೊಳ್ಳಿ.
 
ವೈಫೈ ನೆಟ್‌ವರ್ಕ್‌ ದುರ್ಬಳಕೆ ತಡೆಯಲು ಆಗಾಗ ನಿಮ್ಮ ನೆಟ್‌ವರ್ಕ್‌ ಯಾವೆಲ್ಲಾ ಡಿವೈಸ್‌ಗಳಲ್ಲಿ ಬಳಕೆಯಾಗಿದೆ ಎಂಬ ಮಾಹಿತಿ ತಿಳಿದುಕೊಳ್ಳಿ. ಜತೆಗೆ ಆಗಾಗ ನೆಟ್‌ವರ್ಕ್‌ನ ಪಾಸ್‌ವರ್ಡ್‌ ಬದಲಿಸುತ್ತಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT