ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಕಲಶದ ಮೂಲಕ ಭಗವಂತನಿಗೆ ಅಭಿಷೇಕ ನಡೆಯಲಿ: ಸ್ವಾಮೀಜಿ

Last Updated 16 ಮೇ 2017, 5:36 IST
ಅಕ್ಷರ ಗಾತ್ರ

ಉಡುಪಿ: ‘ಜನರ ಹೃದಯ ಕಲಶದ ಮೂಲಕ ಭಗವಂತನಿಗೆ ಅಭಿಷೇಕವಾಗ ಬೇಕು ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಕೃಷ್ಣ ಮಠದ ನವೀಕೃತ ಸುತ್ತುಪೌಳಿ ಸಮರ್ಪಣಾ ಪೂರ್ವವಾಗಿ ಅಷ್ಟೋತ್ತರ ಸಹಸ್ರ ರಜತ ಕಲಶ ಸಹಿತ ಬ್ರಹ್ಮ ಕಲಶೋತ್ಸವದ ಅಂಗವಾಗಿ ರಾಜಾಂ ಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಒಂದು ಸಾವಿರ ರಜತ ಕಲಶದ ಅಭಿಷೇಕ ಮಾಡುತ್ತಿದ್ದೇವೆ. ಆದರೆ, ಸಹಸ್ರಾರು ಭಕ್ತರು ತಮ್ಮ ಹೃದ ಯಗಳ ಮೂಲಕ ದೇವರಿಗೆ ಕಲಶಾ ಭಿಷೇಕ ಮಾಡಿದರೆ ಆತನ ಅನುಗ್ರಹ ಸಿಗಲಿದೆ. ಅದಕ್ಕೆ ಪ್ರತಿಯಾಗಿ ಭಗವಂತ ವರುಣನನ್ನು ಕರುಣಿಸುವನು’ ಎಂದರು.

‘ಸಾಮಾನ್ಯವಾಗಿ ಎಲ್ಲ ದೇವಸ್ಥಾನ ಗಳಲ್ಲಿ 12 ವರ್ಷಕ್ಕೊಮ್ಮೆ ಬ್ರಹ್ಮಕಶಲ ನಡೆಯುತ್ತದೆ. ಆದರೆ ಆಚಾರ್ಯರೇ ಶ್ರೀಕೃಷ್ಣನನ್ನು ಇಲ್ಲಿ ಪ್ರತಿಷ್ಠಾಪಿಸಿರುವು ದರಿಂದ ಆ ನಿಯಮ ಉಡುಪಿಯ ಕೃಷ್ಣ ಮಠಕ್ಕೆ ಅನ್ವಯಿಸುವುದಿಲ್ಲ. ಇಲ್ಲಿ ಭಗ ವಂತ ಗಟ್ಟಿಯಾಗಿ ನೆಲೆಸಿದ್ದಾನೆ’ ಎಂದರು.

ಸೋದೆ ವಾದಿರಾಜ ಮಠದ ವಿದ್ಯಾ ವಲ್ಲಭ ಸ್ವಾಮೀಜಿ ಅವರು ಮಾತನಾಡಿ, ‘ದೇವರಿಗೆ ನೂರಾರು ರೂಪಗಳು ಇದ್ದರೂ ಕಲಿಯುಗಕ್ಕೆ ಹತ್ತಿರವಾದ ಭಗ ವಂತನ ರೂಪ ಎಂದರೆ ಅದು ಶ್ರೀಕೃಷ್ಣ. ಅಹಂಕಾರ, ಕಾಮ, ಕ್ರೋಧಗಳನ್ನು ದಮನ ಮಾಡಿದರೆ ದೇವರ ಆಗಮನ ಸಾಧ್ಯವಾಗುತ್ತದೆ’ ಎಂದರು.

ಕಾಪು ಶಾಸಕ ವಿನಯ ಕುಮಾರ ಸೊರಕೆ ಅವರು ಮಾತನಾಡಿ, ‘ಪೇಜಾ ವರ ಸ್ವಾಮೀಜಿ ಅವರು ದೇಶದಲ್ಲಿಯೇ ಪ್ರಮುಖ ಯತಿಗಳಾಗಿದ್ದಾರೆ. ಅವರ ಪ್ರತಿ ಪರ್ಯಾಯವೂ ವಿಶಿಷ್ಟ, ಅಲ್ಲದೆ ಒಂದೊಂದು ಪರ್ಯಾಯದಲ್ಲಿಯೂ ಅಮೂಲ್ಯ ಕೊಡುಗೆಯನ್ನು ಮಠಕ್ಕೆ ನೀಡಿರುವ ಅವರು ಈ ಬಾರಿ ಸುತ್ತು ಪೌಳಿ ನವೀಕರಣ ಮತ್ತು ಬ್ರಹ್ಮಕಲ ಶೋತ್ಸವ ಮಾಡಿದ್ದಾರೆ’ ಎಂದರು.

ಪೇಜಾವರ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ಪ್ರಯಾಗ ಮಧ್ವ ಮಠದ  ವಿದ್ಯಾತ್ಮತೀರ್ಥ ಸ್ವಾಮೀಜಿ, ವಿದ್ವಾಂಸ ಹಿರಣ್ಯ ವೆಂಕಟೇಶ ಭಟ್‌ ಇದ್ದರು.

**

ದಂಡತೀರ್ಥದ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಕುಂಜಾರುಗಿರಿ ಕೂಡ ಧಾರ್ಮಿಕ ಕ್ಷೇತ್ರವಾಗಿ ಪ್ರಗತಿ ಹೊಂದುತ್ತಿದೆ.
-ವಿನಯ ಕುಮಾರ್ ಸೊರಕೆ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT