ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

GIF ಫೈಲ್‌ ರಚಿಸುವುದು ಹೇಗೆ?

Last Updated 1 ಜೂನ್ 2017, 14:31 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳು ಎಲ್ಲರ ಕೈಯೊಳಗಾಡುತ್ತಿರುವ ಈ ದಿನಗಳಲ್ಲಿ ಚಿತ್ರಗಳನ್ನು ತೆಗೆಯುವುದು, ವಿಡಿಯೊ ರೆಕಾರ್ಡ್‌ ಮಾಡುವುದು ಹಲವರ ಸಾಮಾನ್ಯ ಅಭ್ಯಾಸವಾಗಿದೆ. ಯಾವುದೇ ಸಂದರ್ಭವನ್ನು ತಮ್ಮ ಡಿವೈಸ್‌ನಲ್ಲಿ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುವುದು ಈಗ ಹಲವರ ರೂಢಿ.

ಡಿವೈಸ್ ಕ್ಯಾಪ್ಚರ್‌ ಮಾಡಿದ ಫಾರ್ಮಾಟ್‌ನಲ್ಲೇ ಚಿತ್ರ, ವಿಡಿಯೊಗಳನ್ನು ಹಂಚಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಆ ಫಾರ್ಮಾಟ್‌ಗಳಿಗೆ ಬದಲಾಗಿ, ಹೊಸ ಫಾರ್ಮಾಟ್‌ಗಳ ಮೂಲಕ ಫೋಟೊ, ವಿಡಿಯೊ ಫೈಲ್‌ಗಳನ್ನು ಹಂಚಿಕೊಳ್ಳಬಹುದು. ಅಂತಹ ಒಂದು ಭಿನ್ನವಾದ ಫಾರ್ಮಾಟ್‌ GIF ಫೈಲ್‌.

ಚಿತ್ರ ಅಥವಾ ವಿಡಿಯೊ ಫೈಲ್‌ಗಳನ್ನು ಸ್ಲೈಡ್‌ಷೋನಂತೆ ಅಥವಾ ಮತ್ತೆ ಮತ್ತೆ ಷೋ ಆಗುವ ವಿಡಿಯೊದಂತೆ ಪರಿವರ್ತಿಸುವ ಫಾರ್ಮಾಟ್‌ GIF (Graphics Interchange Format). ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೂಲಕ ಬಂದ GIF ಫಾರ್ಮಾಟ್‌ನ ಫೈಲ್‌ಗಳನ್ನು ಹಲವರು ನೋಡಿರಬಹುದು,  ಆ ಫೈಲ್‌ಗಳನ್ನು ಹಲವರಿಗೆ ಫಾರ್ವರ್ಡ್‌ ಮಾಡಿರಲೂಬಹುದು. ಆದರೆ, ನೀವೇ GIF ಫೈಲ್‌ ರಚಿಸಿ ಅದನ್ನು ಹಂಚಿಕೊಳ್ಳುವ ಖುಷಿಯೇ ಬೇರೆ.

GIF ಫೈಲ್‌ ರಚಿಸಲು ಹಲವು ಆನ್‌ಲೈನ್‌ ಜಾಲತಾಣಗಳು ಇವೆ. imgflip.com ಜಾಲತಾಣದ ಮೂಲಕ GIF ಫೈಲ್‌ ರಚಿಸುವ ವಿಧಾನವನ್ನು ಈ ವಾರ ತಿಳಿಯೋಣ. ಮೊದಲು  imgflip.com ಜಾಲತಾಣಕ್ಕೆ ಭೇಟಿಕೊಡಿ. ಅಲ್ಲಿ ಕಾಣುವ Create ಎಂಬಲ್ಲಿ ಕ್ಲಿಕ್ಕಿಸಿ. ಇಲ್ಲಿ ಕಾಣುವ Make a GIF ಎಂಬಲ್ಲಿ ಕ್ಲಿಕ್ಕಿಸಿ. ಈಗ ತೆರೆದುಕೊಳ್ಳುವ ಪುಟದಲ್ಲಿ Video to GIF ಮತ್ತು Images to GIF ಎಂಬ ಆಯ್ಕೆಗಳು ಕಾಣುತ್ತವೆ.

ವಿಡಿಯೊ ಫೈಲ್‌ಗಳನ್ನು GIF ಫಾರ್ಮಾಟ್‌ ಮಾಡಲು Video to GIF ಎಂಬಲ್ಲಿ ಕ್ಲಿಕ್ಕಿಸಿ. ಇಲ್ಲಿರುವ Upload Video ಮೇಲೆ ಕ್ಲಿಕ್‌ ಮಾಡಿ ನಿಮ್ಮ ಡಿವೈಸ್‌ನಲ್ಲಿರುವ ವಿಡಿಯೊ ಫೈಲ್‌ ಆಯ್ಕೆ ಮಾಡಿಕೊಳ್ಳಿ. ಈ ವಿಡಿಯೊ ಫೈಲ್‌ನಲ್ಲಿ ಯಾವ ಭಾಗ GIF ಆಗಬೇಕೆಂದು ಎಡಿಟ್‌ ಮಾಡಿಕೊಳ್ಳಿ. ಬಳಿಕ Generate GIF ಎಂಬಲ್ಲಿ ಕ್ಲಿಕ್ಕಿಸಿದರೆ GIF ಫೈಲ್‌ ಸಿದ್ಧಗೊಳ್ಳುತ್ತದೆ.

ಈ ಫೈಲ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಅಥವಾ ನೇರವಾಗಿ ಅಲ್ಲಿಂದಲೇ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬಹುದು. ಚಿತ್ರಗಳ ಮೂಲಕ GIF ರಚಿಸಲು ಪಕ್ಕದಲ್ಲೇ ಕಾಣುವ Images to GIF ಆಯ್ಕೆ ಮಾಡಿಕೊಂಡು Upload Images ಮೇಲೆ ಕ್ಲಿಕ್‌ ಮಾಡಿ.

ಮಗೆ ಬೇಕಾದ ಚಿತ್ರಗಳನ್ನು ಆರಿಸಿ ಆ ಚಿತ್ರಗಳು ಯಾವ ವೇಗದಲ್ಲಿ ಸ್ಲೈಡ್‌ ಆಗಬೇಕೆಂಬುದನ್ನು ಸೆಟ್‌ ಮಾಡಿ. ಬಳಿಕ Generate GIF ಮೇಲೆ ಕ್ಲಿಕ್ಕಿಸಿ. ನೀವು ಬಯಸಿದ ಚಿತ್ರ, ವಿಡಿಯೊ ಫೈಲ್‌ಗಳನ್ನು GIF ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT