ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಜತೆ ಫೇಸ್‌ಬುಕ್‌ಖಾತೆ ಜೋಡಣೆಗೆ ನಕಾರ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಫೇಸ್‌ಬುಕ್‌ ಬಳಕೆದಾರರ ಖಾತೆಗಳನ್ನು ಮೊಬೈಲ್‌ ಸಂಖ್ಯೆಯೊಂದಿಗೆ ಜೋಡಿಸುವಂತೆ ಪಾಕಿಸ್ತಾನ ಸರ್ಕಾರ ಮಾಡಿದ ಮನವಿಯನ್ನು ಫೇಸ್‌ಬುಕ್‌ ನಿರಾಕರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಫೇಸ್‌ಬುಕ್‌ ಖಾತೆಗಳನ್ನು ಬಳಕೆದಾರರ ಮೊಬೈಲ್‌ ಸಂಖ್ಯೆಯೊಂದಿಗೆ ಜೋಡಿಸಬೇಕು ಎಂದು ಪಾಕಿಸ್ತಾನ ಸಲಹೆ ನೀಡಿತ್ತು. ಆದರೆ ಇ–ಮೇಲ್‌ ಜತೆಗೆ ಫೇಸ್‌ಬುಕ್‌ ಖಾತೆ ಜೋಡಿಸುವುದು ಹೆಚ್ಚು ಸುಲಭ ಎಂದು ಫೇಸ್‌ಬುಕ್‌ ಭಾವಿಸಿದೆ’ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ದ್ವೇಷ ಹರಡಲು ನಕಲಿ ಫೇಸ್‌ಬುಕ್‌ ಖಾತೆಗಳನ್ನು ಬಳಸುವುದನ್ನು ಪತ್ತೆ ಮಾಡಲು ಸರ್ಕಾರಕ್ಕೆ ನೆರವಾಗಲಿ ಎನ್ನುವ ಉದ್ದೇಶದಿಂದ ಈ ಸಲಹೆ ನೀಡಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.  ಈ ಸಲಹೆ ‘ಅಸಾಧ್ಯ’ ಎಂದು ಫೇಸ್‌ಬುಕ್‌ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.  ಆದರೆ ಬಳಕೆದಾರರು ದ್ವೇಷ ಹರಡುವುದನ್ನು ತಡೆಗಟ್ಟಲು ಫೇಸ್‌ಬುಕ್‌ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT