ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷಗಳಲ್ಲಿ ₹71,941 ಕೋಟಿ ಅಘೋಷಿತ ಆದಾಯ ಪತ್ತೆ: ಸುಪ್ರೀಂಗೆ ಕೇಂದ್ರ ಸರ್ಕಾರ ಮಾಹಿತಿ

Last Updated 23 ಜುಲೈ 2017, 9:45 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಆದಾಯ ತೆರಿಗೆ ಇಲಾಖೆ ಮೂರು ವರ್ಷಗಳಿಂದ ನಡೆಸಿರುವ ಪರಿಶೀಲನೆ ಹಾಗೂ ಜಪ್ತಿಯಿಂದ ₹71,941 ಕೋಟಿ ಅಘೋಷಿತ ಆದಾಯ ಪತ್ತೆಯಾಗಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನೋಟು ಅಪಮೌಲ್ಯೀಕರಣದ ನಂತರ 2016ರ ನವೆಂಬರ್‌ 6ರಿಂದ 2017ರ ಜನವರಿ 10ರ ವರೆಗೂ ₹5,400 ಕೋಟಿ ಅಘೋಷಿತ ಆದಾಯ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು 303.367 ಕೆ.ಜಿ. ಚಿನ್ನ ಜಪ್ತಿ ಮಾಡಿರುವುದಾಗಿ ಹಣಕಾಸು ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.

ಜಪ್ತಿ ಮಾಡಲಾಗಿರುವ ₹2890 ಕೋಟಿ ಮೌಲ್ಯದ ಅಘೋಷಿತ ಆಸ್ತಿಯೂ ಒಳಗೊಂಡಿದೆ. 2014ರ ಏಪ್ರಿಲ್‌ 1ರಿಂದ 2017ರ ಫೆಬ್ರುವರಿ 28ರ ವರೆಗೂ ಆದಾಯ ತೆರಿಗೆ ಇಲಾಖೆ ನಡೆಸಿರುವ 15 ಸಾವಿರ ಪರಿಶೀಲನೆಯಲ್ಲಿ ₹33,000 ಕೋಟಿ ಅಘೋಷಿತ ಆದಾಯ ಪತ್ತೆಯಾಗಿರುವುದಾಗಿ ತಿಳಿಸಿದೆ.
ಈವರೆಗೆ ಒಟ್ಟು ₹513 ಕೋಟಿ ಮೌಲ್ಯದ ನಗದು ಜಪ್ತಿ ಮಾಡಲಾಗಿದ್ದು, ಇದರಲ್ಲಿ ₹110 ಕೋಟಿ ಹೊಸ ನೋಟುಗಳನ್ನು ಒಳಗೊಂಡಿದೆ.

ತನಿಖೆ ವೇಳೆ ಸಂಗ್ರಹಿಸಿದ್ದ ಅಘೋಷಿದ ಹಣದ ಮಾಹಿತಿ ತಿರುಚಲು ಪ್ರಯತ್ನಿಸಿರುವ 400 ಪ್ರಕರಣಗಳನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT