ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬೀಳುತ್ತಿದೆ; ಮರದ ಕೆಳಗೆ ವಾಹನ ನಿಲ್ಲಿಸಬೇಡಿ, ಎಚ್ಚರಿಕೆಯಿಂದ ಸಂಚರಿಸಿ: ಬೆಂಗಳೂರು ಸಂಚಾರ ಪೊಲೀಸ್‌

Last Updated 20 ಆಗಸ್ಟ್ 2017, 9:19 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ವಾರದಲ್ಲಿ ಮಳೆಯ ಅಬ್ಬರಕ್ಕೆ ತತ್ತರಿಸಿರುವ ಬೆಂಗಳೂರಿನ ಜನರು ವಾಹನಗಳನ್ನು ನಿಲ್ಲಿಸುವ ಮತ್ತು ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ.

ನಗರದಲ್ಲಿ ಶನಿವಾರ ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು, ಪರಿಣಾಮ 11ಕ್ಕೂ ಹೆಚ್ಚುಕಡೆ ಮರಗಳು ನೆಲಕ್ಕುರುಳಿವೆ. ಮರಗಳು ವಾಹನಗಳ ಮೇಲೆ ಬಿದ್ದು ಹಲವು ಕಾರು, ಬೈಕ್‌ಗಳು ಹಾನಿಗೊಳಗಾಗಿವೆ. ಮಳೆಗೆ ರಸ್ತೆಗಳೂ ಹಾಳಾಗಿದ್ದು, ಗುಂಡಿಗಳು ನಿರ್ಮಾಣವಾಗಿವೆ.

ಮಳೆ ಬೀಳುವ ವೇಳೆ ಮರಗಳು ವಾಹನಗಳ ಮೇಲೆ ಬಿದ್ದು ಹಾನಿಯಾಗುವುದನ್ನು ತಪ್ಪಿಸುವ ಮತ್ತು ಸಂಚಾರ ವೇಳೆ ಜನರು ಮತ್ತು ವಾಹನಗಳಿಗೆ ಸಂಭವಿಸಬಹುದಾದ ಅಪಾಯದಿಂದ ಪಾರಾಗಲು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ.

‘ಮಳೆ ಬೀಳುತ್ತಿದೆ. ವಾಹನಗಳನ್ನು ಮರಗಳ ಕೆಳಗೆ ನಿಲ್ಲಿಸಬೇಡಿ. ತೇವದಿಂದ ಕೂಡಿದ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಸಂಚರಿಸಿ’ ಎಂದು ಸಂಚಾರ ಪೊಲೀಸ್‌ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT