ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳಿ’

Last Updated 7 ಸೆಪ್ಟೆಂಬರ್ 2017, 6:29 IST
ಅಕ್ಷರ ಗಾತ್ರ

ಗದಗ: ಹುಲಕೋಟಿ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ನಿರ್ವ ಹಣೆ ತಂತ್ರಜ್ಞಾನ ಸಂಸ್ಥೆ, ಕೃಷಿ ಇಲಾಖೆಯ ಆಶ್ರಯದಲ್ಲಿ ಸೋಮವಾರ ‘ನವಭಾರತ ಮಂಥನ: ಸಂಕಲ್ಪದಿಂದ ಸಿದ್ಧಿ’ ಕಾರ್ಯ ಕ್ರಮ ನಡೆಯಿತು.

‘ಕ್ವಿಟ್ ಇಂಡಿಯಾ ಚಳವಳಿಯ 75ನೇ ವಾರ್ಷಿಕೋತ್ಸವದ ಅಂಗವಾಗಿ ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಅನು ಷ್ಠಾನಗೊಳಿಸುತ್ತಿದೆ. ಈ ಯೋಜನೆಗಳ ಸಂಕಲ್ಪ ಸಾಕಾರಗೊಳ್ಳಬೇಕು’ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

‘ರೈತರ ಆದಾಯವನ್ನು 2022ರ ಒಳಗೆ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ, ಮಣ್ಣು ಆರೋಗ್ಯ ಕಾರ್ಯ ಕ್ರಮ, ಪ್ರಧಾನಮಂತ್ರಿ ಕೃಷಿ ಸಿಂಚನ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಸಮಗ್ರ ಕೃಷಿ ಪದ್ಧತಿ ಯೋಜನೆ, ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದರು.

‘ಪಂಚಾಯಿತಿ ಮಟ್ಟದಲ್ಲಿ ಶೀತಲೀ ಕರಣ ಘಟಕ ಹಾಗೂ ಗೋದಾಮು ನಿರ್ಮಾಣ ಮಾಡಿದರೆ, ಕೃಷಿ ಉತ್ಪನ್ನ ಗಳನ್ನು ಸಂರಕ್ಷಣೆಗೆ ಪೂರಕವಾಗುತ್ತದೆ’ ಎಂದು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಪಿ.ಬಳಿಗಾರ ಹೇಳಿದರು.

ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಸಿ.ಬಿ.ಬಾಲರಡ್ಡಿ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಸಿರಿಧಾನ್ಯಗಳ ಬೇಸಾಯ ಮತ್ತು ಪೌಷ್ಟಿಕತೆ ಕುರಿತ ಹಸ್ತಪ್ರತಿ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಾಸಣ್ಣ ಕುರಡಗಿ, ಕೃಷಿ ವಿಜ್ಞಾನ ಕೇಂದ್ರದ ಡಾ.ಎಲ್.ಜಿ.ಹಿರೇಗೌಡರ, ಎಸ್.ಎಚ್. ಆದಾಪುರ, ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ಜಿ.ಕೊರವನವರ, ಕೃಷಿ ವಿಜ್ಞಾನಿ ಡಾ.ಬಿ.ಟಿ.ರಾಯಡು, ಜಿ.ಪಂ. ಸದಸ್ಯೆ ಶಕುಂತಲಾ ಮೂಲಿಮನಿ, ಶೋಭಾ ಮೇಟಿ, ತಾ.ಪಂ. ಸದಸ್ಯೆ ಮೋಹನ ದುರಗಣ್ಣವರ, ತಾಮ್ರಗುಂಡಿ, ಶೈಲೇಂದ್ರ ಬಿರಾದಾರ, ಡಾ.ಎಸ್.ಎಸ್. ಪಾಟೀಲ, ಎಚ್.ಆರ್.ಅಮರನಾಥ, ಚಂದ್ರಪ್ರಭಾ, ಸಹದೇವ ಯರಗೊಪ್ಪ ಇದ್ದರು.

ಮಣ್ಣು, ನೀರಿನ ಸಂರಕ್ಷಣೆ, ಒಣ ಬೇಸಾಯದಲ್ಲಿ ತೋಟಗಾರಿಕೆ, ವಿವಿಧ ಬೆಳೆಗಳು, ಸಾವಯವ ಕೃಷಿ ಪರಿಕರ ಹಾಗೂ ಆಹಾರ ಪದಾರ್ಥಗಳ ಮೌಲ್ಯ ವರ್ಧನೆ ಕುರಿತ ವಸ್ತು ಪ್ರದರ್ಶನ ನಡೆ ಯಿತು. 500ಕ್ಕೂ ಹೆಚ್ಚು ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT