ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿತ್ರಸಂತೆ’ಯಲ್ಲಿ ಕಲೆಯ ಬಲೆ

Last Updated 8 ಸೆಪ್ಟೆಂಬರ್ 2017, 5:02 IST
ಅಕ್ಷರ ಗಾತ್ರ

ಗದಗ: ನಗರದ ಹಾತಲಗೇರಿ ರಸ್ತೆಯಲ್ಲಿ ಇರುವ ಸಾಯಿಬಾಬಾ ಮಂದಿರದ ಆವ ರಣದಲ್ಲಿ ಗುರುವಾರ ಬೆಳಿಗ್ಗೆ ಕುಂಚ ಪ್ರಪಂಚ ಸೃಷ್ಟಿಯಾಗಿತ್ತು. ಮಳೆಗಾಗಿ ಕಾಯುತ್ತಾ ಕುಳಿತಿರುವ ರೈತ, ಬರದಿಂದ ತತ್ತರಿಸಿದ ಅನ್ನದಾತನ ಪರಿಸ್ಥಿತಿ, ಮೀನು ಹಿಡಿಯಲು ಧ್ಯಾನ ಸ್ಥಿತಿಯಲ್ಲಿ ಕುಳಿತ ಮಿಂಚುಳ್ಳಿ, ನಿಸರ್ಗದ ರಮಣೀಯತೆ ನಡುವೆ ಹರಿಯುತ್ತಿರುವ ನದಿ, ನೋಟು ರದ್ದತಿಯಿಂದ ಜನರು ಅನುಭವಿಸಿದ ಸಂಕಷ್ಟ, ಹೀಗೆ ನೂರು ಬಣ್ಣ, ಭಾವದಲ್ಲಿ ಅದ್ದಿ ತೆಗೆದಿದ್ದ ಚಿತ್ರಗಳು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು.

ದೇವಸ್ಥಾನಕ್ಕೆ ಬಂದಿದ್ದ ಭಕ್ತರು ‘ಚಿತ್ರಸಂತೆ’ಯ ದೃಶ್ಯಕಾವ್ಯಕ್ಕೆ ಮಾರು ಹೋಗಿ, ಕಲಾವಿದರ ಬಳಿ ತೆರಳಿ ಕಲಾ ಕೃತಿಗಳ ಬೆಲೆ ವಿಚಾರಿಸಿ, ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಶಾಲೆ, ಕಾಲೇಜು ವಿದ್ಯಾರ್ಥಿಗಳು ತಮ್ಮ ಮೊಬೈಲ್‌ಗಳಲ್ಲಿ ಚಿತ್ರಸಂತೆಯಲ್ಲಿ ಕಂಡು ಚಿತ್ರಗಳನ್ನು ಚಿತ್ರ­ ಸೆರೆಹಿಡಿಯುವುದರಲ್ಲಿ, ಸೆಲ್ಫಿ ತೆಗೆಯುವು ದರಲ್ಲಿ ತಲ್ಲೀನರಾಗಿದ್ದರು.

ನಗರದ ರಾಜೀವಗಾಂಧಿ ನಗರದಲ್ಲಿ ಇರುವ ವಿಜಯ ಲಲಿತಕಲಾ ಕಾಲೇಜು ಇದೇ ಮೊದಲ ಬಾರಿಗೆ ನಗರದಲ್ಲಿ ‘ಚಿತ್ರ ಸಂತೆ’ ಆಯೋಜಿಸಿತ್ತು. ‘ಮನೆಗೊಂದು ಕಲಾಕೃತಿ ಇರಲಿ, ಮನಸ್ಸಿಗೆ ನೆಮ್ಮದಿ ತರಲಿ’ ಎಂಬ ಆಶಯದೊಂದಿಗೆ, ಕಾಲೇ ಜಿನ ವಿದ್ಯಾರ್ಥಿಗಳು ಸಾಯಿ ಮಂದಿರದ ಆವರಣದಲ್ಲಿ ಕಲಾಕೃತಿಗಳನ್ನು ಪ್ರದ ರ್ಶನಕ್ಕೆ ಇಟ್ಟಿದ್ದರು.
ತೈಲವರ್ಣ, ಜಲವರ್ಣದ ಚಿತ್ರಗಳು, ಸಮಕಾಲೀನ ಕಲಾಕೃತಿಗಳು, ಆರ್ಕಿಲಿಕ್‌ ಕ್ಯಾನ್ವಾಸ್‌ ಪೇಟಿಂಗ್‌ನ ಮನಮೋಹಕ ಕಲಾಕೃತಿಗಳು  ಗಮನ ಸೆಳೆದವು. ಪೆನ್ಸಿಲ್‌ ಸ್ಕೆಚ್‌ಗಳು, ವ್ಯಂಗ್ಯಚಿತ್ರಗಳು ಸೇರಿ ವಿವಿಧ ಪ್ರಕಾರದ 100ಕ್ಕೂ ಹೆಚ್ಚು ಕಲಾಕೃತಿ­ಗಳನ್ನು ಕಲಾಸಕ್ತರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಇದೇ ಮೊದಲ ಬಾರಿಗೆ ನಗರದಲ್ಲಿ ‘ಚಿತ್ರ ಸಂತೆ’ ಆಯೋಜಿಸಲಾಗಿತ್ತು. ಸಾರ್ವ ಜನಿಕರಿಂದ ಉತ್ತಮ ಸ್ಪಂದನೆ ಲಭಿಸಿದೆ. ಸಾಕಷ್ಟು ಜನರು ಕಲಾಕೃತಿಗಳ ಬಗ್ಗೆ ಮಾಹಿತಿ ತಿಳಿದುಕೊಂಡರು. ಕೆಲವರು ಮುಂಗಡ ಬುಕ್ಕಿಂಗ್ ಮಾಡಿಕೊಂಡು ಹೋಗಿದ್ದಾರೆ. ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 6 ಉಪನ್ಯಾಸ ಕರು ತಮ್ಮ ಕಲಾಕೃತಿಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಇದರಲ್ಲಿ ‘ಚಂದ್ರನಲ್ಲಿ ಕಂಡ ಸಾಯಿಬಾಬಾ’ ಕಲಾಕೃತಿ ₹ 15 ಸಾವಿರಕ್ಕೆ ಮಾರಾಟ ಆಯಿತು’ ಎಂದು ಚಿತ್ರಸಂತೆ ಸಂಯೋಜಕ ಬಿ.ಸಿ.ಕುತ್ನಿ ತಿಳಿಸಿದರು.

‘ಸಾವಿರಕ್ಕೂ ಹೆಚ್ಚು ಜನರು ಚಿತ್ರ ಸಂತೆಗೆ ಭೇಟಿ ನೀಡಿದ್ದಾರೆ. ಸಾಯಿಬಾಬಾ ಮಂದಿರದಲ್ಲಿ ಗುರುವಾರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ಇತ್ತು. ಹೀಗಾಗಿ ಆವರಣದಲ್ಲಿ ಇಡೀ ದಿನ ಚಿತ್ರ ಪ್ರದರ್ಶನ ಮತ್ತು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಮಧ್ಯಾಹ್ನದವರೆಗೆ ಮಾತ್ರ ಪ್ರದರ್ಶನ ನಡೆಯಿತು.

ಇದರಿಂದ ಹೆಚ್ಚು ಕಲಾಕೃತಿಗಳು ಮಾರಾಟವಾಗಲಿಲ್ಲ. ಆದರೆ, ಸಾಕಷ್ಟು ಜನರು ವಿಚಾರಿಸಿ ಕೊಂಡು ಹೋಗಿದ್ದಾರೆ. ‘ಕಲೆಯನ್ನು ಉಳಿಸಿ, ಬೆಳೆಸಲು ಹಾಗೂ ಕಲಾಕೃತಿ ಗಳಿಗೆ ಸ್ಥಳೀಯ ಮಟ್ಟದಲ್ಲೇ ಸೃಷ್ಟಿಸುವ ಉದ್ದೇಶದಿಂದ ಚಿತ್ರಸಂತೆ ಆಯೋಜಿಸ ಲಾಗಿದೆ’ ಎಂದು ವಿಜಯ ಲಲಿತಕಲಾ ಕಾಲೇಜಿನ ಪ್ರಾಚಾರ್ಯ ಸಿ.ವಿ.ಬಡಿಗೇರ ಅಭಿಪ್ರಾಯಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT