ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಹೂ ಅಕೌಂಟ್‌ನ ಎರಡು ಹಂತದ ಸುರಕ್ಷತೆ

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಈಗಿನ ಬಹುತೇಕ ಲಾಗ್‌ ಇನ್‌/ ಸೈನ್‌ ಇನ್‌ ವ್ಯವಸ್ಥೆಗಳಲ್ಲಿ ಎರಡು ಹಂತದ ಸುರಕ್ಷತೆ (ಟು–ಫ್ಯಾಕ್ಟರ್‌ ಅಥೆಂಟಿಕೇಷನ್‌) ಇರುವುದು ಸಾಮಾನ್ಯ. ಮೊದಲ ಹಂತದಲ್ಲಿ ಪಾಸ್‌ವರ್ಡ್‌ ಮೂಲಕ ಲಾಗ್‌ ಇನ್‌ / ಸೈನ್‌ ಇನ್‌ ಆದ ಬಳಿಕ ಎರಡನೇ ಹಂತದಲ್ಲಿ ಆ ಸಾಫ್ಟವೇರ್‌ನ ಆ್ಯಪ್‌ನಲ್ಲಿ ಲಾಗ್‌ ಇನ್‌ ಅಪ್ರೂವ್ ಕೇಳುತ್ತದೆ ಅಥವಾ ನಿಮ್ಮ ಮೊಬೈಲ್‌ಗೆ ಟೆಕ್ಸ್ಟ್‌ ಮೆಸೇಜ್‌ ಮೂಲಕ ಲಾಗ್‌ ಇನ್‌ ಕೋಡ್‌ ಬರುತ್ತದೆ. ಆದರೆ, ಈ ಬಗೆಯ ಎರಡು ಹಂತದ ಸುರಕ್ಷತಾ ವ್ಯವಸ್ಥೆಯನ್ನು ಯಾಹೂ ಸುಮಾರು ಎರಡು ವರ್ಷಗಳ ಹಿಂದೆಯೇ ಪರಿಚಯಿಸಿತ್ತು.

‘ಅಕೌಂಟ್ನ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ದೃಷ್ಟಿಯಿಂದ ಪಾಸ್‌ವರ್ಡ್‌ ನೆನಪಿನಲ್ಲಿ ಇಟ್ಟುಕೊಳ್ಳುವಂಥ (memorized password) ವ್ಯವಸ್ಥೆಯೇ ನಮ್ಮಲ್ಲಿಲ್ಲ’ ಎಂದು ಯಾಹೂ ಹೇಳಿಕೊಂಡಿದೆ. ಅದರ ಬದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌, ಟ್ಯಾಬ್‌ ಅಥವಾ ಇನ್ನಾವುದೇ ನಿಮ್ಮ ಡಿವೈಸ್‌ ಅನ್ನೇ ಎರಡನೇ ಹಂತದ ಲಾಗ್‌ ಇನ್‌ ವ್ಯವಸ್ಥೆಗೆ ಯಾಹೂ ಬಳಸಿಕೊಳ್ಳುತ್ತದೆ. ನಿಮ್ಮ ಡಿವೈಸ್‌ ಯಾಹೂ ಅಕೌಂಟ್‌ ಲಾಗ್‌ ಇನ್‌ಗೆ ಎರಡನೇ ಹಂತದ ಸುರಕ್ಷತೆಯ ಕೀಲಿಯಾಗಿ ಕೆಲಸ ಮಾಡುತ್ತದೆ.

ನಿಮ್ಮ ಡಿವೈಸ್‌ನಲ್ಲಿ ಯಾಹೂ ಆ್ಯಪ್‌ ಇದ್ದರೆ ನೀವು ವೆಬ್‌ ಬ್ರೌಸರ್‌ನಲ್ಲಿ ಯಾಹೂ ಅಕೌಂಟ್‌ಗೆ ಲಾಗ್‌ ಇನ್‌ ಆದಾಗ ಆ್ಯಪ್‌ ಮೂಲಕ ನಿಮಗೆ ಲಾಗ್‌ ಇನ್‌ ಅಪ್ರೂವಲ್‌ ಸಂದೇಶ ಬರುತ್ತದೆ. ಹೆಚ್ಚೂ ಕಡಿಮೆ ಫೇಸ್ಬುಕ್‌ ನ ಎರಡನೇ ಹಂತದ ಸುರಕ್ಷತಾ ವಿಧಾನದಂತೆ ಯಾಹೂ ಆ್ಯಪ್‌ ಇಲ್ಲಿ ಕೆಲಸ ಮಾಡುತ್ತದೆ.

ಮೊದಲು ಯಾಹೂ ಅಕೌಂಟ್‌ಗೆ ಲಾಗ್‌ ಇನ್‌ ಆದ ಬಳಿಕ ಸೆಟ್ಟಿಂಗ್‌ನಲ್ಲಿ ಎರಡು ಹಂತದ ಸುರಕ್ಷತಾ ವಿಧಾನದ ಆಯ್ಕೆಗಳಲ್ಲಿ See how it works ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಿ. ಬಳಿಕ Send me a notification ಎಂಬ ಆಯ್ಕೆ ಕ್ಲಿಕ್ಕಿಸಿ. ಹೀಗೆ ಸೆಟ್ಟಿಂಗ್ಸ್‌ ಆಯ್ಕೆ ಮಾಡಿಕೊಂಡ ಬಳಿಕ ನಿಮ್ಮ ಡಿವೈಸ್‌ನಲ್ಲಿರುವ ಆ್ಯಪ್‌ ಮೂಲಕ ನಿಮಗೆ ನೋಟಿಫಿಕೇಷನ್‌ಗಳು, ಅಲರ್ಟ್‌ಗಳು ಬರುತ್ತವೆ. ಹೀಗೆ ಮಾಡಿದ ಬಳಿಕ ವೆಬ್‌ ಬ್ರೌಸರ್‌ನ ಯಾಹೂ ಅಕೌಂಟ್‌ ನಲ್ಲಿ Always use Yahoo Account Key ಆಯ್ಕೆ ಮಾಡಿಕೊಳ್ಳಿ. ಈ ಆಯ್ಕೆಗಾಗಿ ನೀವು ಯಾಹೂ ಅಕೌಂಟ್‌ ಕ್ರಿಯೇಟ್‌ ಮಾಡುವ ವೇಳೆ ನೀಡಿರುವ ಮೊಬೈಲ್‌ ಸಂಖ್ಯೆಯನ್ನು ಖಚಿತ ಪಡಿಸಬೇಕಾಗುತ್ತದೆ.

ಸೆಟ್ಟಿಂಗ್ಸ್‌ನಲ್ಲಿ ಇಷ್ಟೆಲ್ಲಾ ಆಯ್ಕೆಗಳನ್ನು ಬದಲಿಸಿದ ಬಳಿಕ ನೀವು ವೆಬ್‌ ಬ್ರೌಸರ್‌ನಲ್ಲಿ ಲಾಗ್‌ ಇನ್‌ ಆಗಬೇಕಾದ ಸಂದರ್ಭದಲ್ಲೆಲ್ಲಾ ನಿಮ್ಮ ಡಿವೈಸ್ನಲ್ಲಿರುವ ಆ್ಯಪ್‌ ಮೂಲಕ ನಿಮಗೆ ಲಾಗ್‌ ಇನ್‌ ಅಲರ್ಟ್‌ ಬರುತ್ತದೆ. ನೀವು ಅಪ್ರೂವ್‌ ಕ್ಲಿಕ್‌ ಮಾಡಿದರೆ ಮಾತ್ರ ನಿಮ್ಮ ಅಕೌಂಟ್‌ಗೆ ಲಾಗ್‌ ಇನ್‌ ಆಗಲು ಸಾಧ್ಯ.

ಒಂದು ವೇಳೆ ಬೇರೆ ಯಾರಾದರೂ ನಿಮ್ಮ ಅಕೌಂಟ್‌ನ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಕದ್ದು ಲಾಗ್‌ಇನ್‌ ಆಗಲು ಪ್ರಯತ್ನಿಸಿದರೆ ತಕ್ಷಣ ನಿಮಗೆ ಲಾಗ್‌ ಇನ್‌ ಅಲರ್ಟ್‌ ಬರುತ್ತದೆ. ಯಾರೋ ನಿಮ್ಮ ಅಕೌಂಟ್‌ಗೆ ಕನ್ನ ಹಾಕುತ್ತಿದ್ದಾರೆಂಬ ಮಾಹಿತಿ ನಿಮಗೆ ತಕ್ಷಣಕ್ಕೆ ಸಿಗುತ್ತದೆ. ಆಗ ನೀವು ಲಾಗ್‌ ಇನ್‌ ಅಲರ್ಟ್‌ನಲ್ಲಿ ಅಪ್ರೂವ್‌ ಕೊಡದೆ ನಿಮ್ಮ ಪಾಸ್‌ ವರ್ಡ್‌ ಬದಲಿಸಿ ನಿಮ್ಮ ಅಕೌಂಟ್‌ ಭದ್ರಪಡಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT