ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥ ಶಿಕ್ಷಕಿ!

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಶಾಲಾ ಸಮವಸ್ತ್ರ ಧರಿಸದ ಕಾರಣಕ್ಕೆ ಶಿಕ್ಷಕಿಯೊಬ್ಬರು ಐದನೇ ತರಗತಿಯ ವಿದ್ಯಾರ್ಥಿನಿಯನ್ನು ಗಂಡು ಮಕ್ಕಳ ಶೌಚಾಲಯದಲ್ಲಿ ನಿಲ್ಲಿಸಿದ್ದರೆಂದು ಪೋಷಕರು ದೂರು ನೀಡಿರುವ ಸುದ್ದಿ ವರದಿಯಾಗಿದೆ (ಪ್ರ.ವಾ., ಆ. 12). ಇದು ನೋವಿನ ಸಂಗತಿ. ಮಕ್ಕಳಲ್ಲಿ ಶಿಸ್ತು ಮೂಡಿಸಲು ಇಷ್ಟು ಕಠಿಣವಾಗಿ ವರ್ತಿಸಬೇಕೇ?

ಅದರಲ್ಲೂ ಶಿಕ್ಷಕಿ ಈ ರೀತಿ ವರ್ತಿಸಿರುವುದು ಸರಿಯಲ್ಲ. ಅವರು ಕ್ಷಮೆಗೆ ಅರ್ಹರೇ ಅಲ್ಲ. ಮೊದಲು ಇಂಥ ಶಿಕ್ಷಕರ ಮೆದುಳು ತೊಳೆಯುವ ಕೆಲಸ ಆಗಬೇಕು. ಇಂಥವರು ಮಕ್ಕಳಿಗೆ ಏನನ್ನು ಕಲಿಸಬಲ್ಲರು?

ಶಿಕ್ಷಕ ವೃತ್ತಿ ಅರಸುವ ಮಂದಿಗೆ ನಾವು ನೀಡುತ್ತಿರುವ ತರಬೇತಿ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ಇಂತಹ ನಿದರ್ಶನಗಳು ಎತ್ತಿ ತೋರಿಸುತ್ತವೆ. ಮಕ್ಕಳು ಒಂದು ದಿನ ಸಮವಸ್ತ್ರ ತೊಡದಿದ್ದರೆ ಆಕಾಶ ಕಳಚಿ ಬೀಳುವುದೇ? ಮಕ್ಕಳನ್ನು ಈ ರೀತಿ ಕೆಟ್ಟದಾಗಿ ಶಿಕ್ಷಿಸುವುದಕ್ಕಿಂತ ಪೋಷಕರಿಗೆ ತಿಳಿ ಹೇಳುವುದು ಉತ್ತಮ.

–ಕೆ.ಎನ್‌. ಮಂಜುನಾಥ ಗೌಡ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT