ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈಗೆ ಹೊರಟಿದ್ದ ಪ್ರಯಾಣಿಕನ ವಿಚಾರಣೆ

Last Updated 19 ಸೆಪ್ಟೆಂಬರ್ 2017, 19:49 IST
ಅಕ್ಷರ ಗಾತ್ರ

ಮಂಗಳೂರು: ಲಗ್ಗೇಜು ಬ್ಯಾಗ್‌ನೊಳಗೆ ಸಂಶಯಾಸ್ಪದ ಮಾದರಿಯ ‘ಪವರ್‌ ಬ್ಯಾಂಕ್‌’ ಹೊಂದಿದ್ದ ಪ್ರಯಾಣಿಕನೊಬ್ಬನನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸಿಬ್ಬಂದಿ ಮಂಗಳವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ರಾತ್ರಿ 9.30ರ ವೇಳೆಗೆ ಮಂಗಳೂರಿನಿಂದ ಬೆಂಗಳೂರು ಮಾರ್ಗವಾಗಿ ದುಬೈಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್‌ ವಿಮಾನದಲ್ಲಿ ಈ ವ್ಯಕ್ತಿ ಸೀಟು ಕಾಯ್ದಿರಿಸಿದ್ದ. ಆತನ ಲಗ್ಗೇಜಿನೊಳಗೆ ಹೊಸ ಮಾದರಿಯ ಪವರ್‌ ಬ್ಯಾಂಕ್‌ ಇತ್ತು. ಅದರ ಬಗ್ಗೆ ಸಂಶಯಗೊಂಡ ಸಿಐಎಸ್‌ಎಫ್‌ ಸಿಬ್ಬಂದಿ ಪ್ರಯಾಣಿಕನನ್ನು ವಶಕ್ಕೆ ಪಡೆದರು.

‘ಕೇರಳ ರಾಜ್ಯದ ಈ ಪ್ರಯಾಣಿಕ ಹೊಸ ಮಾದರಿಯ ಪವರ್‌ ಬ್ಯಾಂಕ್‌ ಹೊಂದಿದ್ದ. ಆ ಮಾದರಿಯ ಕುರಿತು ಸಿಐಎಸ್‌ಎಫ್‌ ಸಿಬ್ಬಂದಿಗೆ ಶಂಕೆ ವ್ಯಕ್ತವಾಗಿತ್ತು. ಪ್ರಯಾಣಿಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಆತನ ಬಳಿ ಇರುವುದು ಸ್ಫೋಟಕವಲ್ಲ ಎಂಬುದು ಖಚಿತವಾದ ಬಳಿಕ ಬಿಡುಗಡೆ ಮಾಡಲಾಯಿತು. ಅಷ್ಟರೊಳಗೆ ಆತ ಪ್ರಯಾಣಿಸಬೇಕಿದ್ದ ವಿಮಾನ ಹೊರಟುಹೋಗಿತ್ತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT