ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು–ನುಡಿ ಬಿಂಬಿಸುವ ಛಾಯಾಚಿತ್ರ ಪದ್ರರ್ಶನ

Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟದ ಭೌಗೋಳಿಕ ಪ್ರದೇಶ ಉತ್ತರಕ್ಕೆ ಒಂದು ಬಗೆಯಾದರೆ, ದಕ್ಷಿಣದ್ದು ಮತ್ತೊಂದು ಬಗೆ. ನಾಡಿನ ಕೋಟೆಗಳಾಗಲಿ, ಅಗಣಿತ ಜಲಧಾರೆಗಳಾಗಲಿ, ಪ್ರಾಣಿ ಪ್ರಪಂಚವಾಗಲಿ, ಜನರ ಜೀವನ ವಿಧಾನವಾಗಲಿ ಕಂಡಷ್ಟೂ ಖುಷಿ. ನೆನೆದಷ್ಟೂ ಮನಸ್ಸಿಗೆ ಮುದ ಕೊಡುತ್ತವೆ.

ನಾಡಿನ ವೈವಿಧ್ಯ ಬದುಕು, ಸಂಸ್ಕೃತಿ, ಪರಿಸರ ಸೌಂದರ್ಯ ಛಾಯಚಿತ್ರಗಳ ಮೂಲಕ ಇಲ್ಲಿ ಅನಾವರಣಗೊಂಡಿದೆ. ಕರ್ನಾಟಕ ರಾಜ್ಯೋತ್ಸವ ಆಚರಣೆಯ ಪ್ರಯುಕ್ತ ಬೆಂಗಳೂರು ಮೆಟ್ರೊ ನಿಗಮವು ಕನ್ನಡ ಗೊತ್ತಿಲ್ಲ ಡಾಟ್‌ ಕಾಮ್‌ ಜಾಲತಾಣದ ಸಹಯೋಗದಲ್ಲಿ ಛಾಯಚಿತ್ರ ಪದರ್ಶನ ಆಯೋಜಿಸಿದೆ.

ಕರ್ನಾಟಕದ ಸೊಗಡನ್ನು ಕಟ್ಟಿಕೊಡುವ ಚಿತ್ರಗಳಿಗೆ ಇಲ್ಲಿ ವೇದಿಕೆ ಒದಗಿಸಲಾಗಿದೆ. 13 ಛಾಯಾಗ್ರಾಹಕರು ತಮ್ಮ ಛಾಯಾಚಿತ್ರಗಳನ್ನು ಪ್ರದರ್ಶಿಸುತ್ತಿದ್ದು, ನವೆಂಬರ್‌ 15ರವರೆಗೆ ಪ್ರದರ್ಶನ ಇರಲಿದೆ.

‘ಉತ್ತರ ಕರ್ನಾಟಕ ಮತ್ತು ದಕ್ಷಿಣದ ಛಾಯಾಗ್ರಾಹಕರ ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ಪರಿಸರದಲ್ಲಿ ಜನರು ತಾದಾತ್ಮ್ಯ ಹೊಂದುವ ಬಗೆ, ಅಪರೂಪದ ಪಕ್ಷಿಗಳು, ಕಾಡಿನ ನಡುವಿನ ಸುಂದರ ಜಲಪಾತಗಳ ಛಾಯಚಿತ್ರಗಳನ್ನು ಒಂದು ಕಡೆ ನೋಡಬಹುದಾಗಿದೆ. ಇವುಗಳನ್ನು ಜನರಿಗೆ ತಲುಪಿಸಲು ಖುಷಿ ಆಗುತ್ತದೆ’ ಎನ್ನುತ್ತಾರೆ ಛಾಯಾಗ್ರಾಹಕ ನವೀನ್‌ ಕುಮಾರ್‌. 

ಆಲೆಮನೆಯಲ್ಲಿ ಬೆಲ್ಲ ಹದಮಾಡುತ್ತಿರುವುದು, ಸಂತೆಯ ನಡುವೆ ನಿಂತ ಬಾಲಕ ಕತ್ತಿ ಹರಿತ ಮಾಡುತ್ತಿರುವುದು, ಜಲಪಾತದ ದೃಶ್ಯ, ಗ್ರಾಮೀಣ ಭಾಗದ ಜನರು ಸಂಕ್ರಾಂತಿ ಪ್ರಯುಕ್ತ ಜಾನುವಾರುಗಳನ್ನು ಕಿಚಾಯಿಸುತ್ತಿರುವ ದೃಶ್ಯಗಳನ್ನು ನವೀನ್‌ ಸಹಜವಾಗಿ ತಮ್ಮ ಛಾಯಾಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ.

ಛಾಯಾಗ್ರಾಹಕರಿಗೆ ಮತ್ತು ಪ್ರೇಕ್ಷಕರಿಗೆ ಇದೊಂದು ಉತ್ತಮ ಅವಕಾಶ. ಪ್ರತಿಯೊಬ್ಬರ ದೃಷ್ಟಿಕೋನ ಭಿನ್ನವಾಗಿರುತ್ತದೆ ಎನ್ನುವ ಅಶೋಕ್‌ ಮನ್ಸೂರ್‌ ವಿಜಯಪುರದ ಅಜರ್‌ ಮಹಲ್‌, ಗೋಕಾಕ್‌ ಜಲಪಾತ, ಕರಾವಳಿ ಕರ್ನಾಟಕ, ಚಿತ್ರದುರ್ಗದ ಕೋಟೆ, ಪಶ್ಚಿಮ ಘಟ್ಟ ಪ್ರದೇಶ, ಕಾಳಿ ನದಿಯ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.  

‘ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಜನರ ಜೀವನ ಶೈಲಿ, ಅಲೆಮಾರಿ ಜನರ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಉತ್ತರ ಕರ್ನಾಟಕ ಕಲಾವಿದರು ಇಲ್ಲಿ ಮೊದಲ ಬಾರಿಗೆ ಪ್ರದರ್ಶನ ನೀಡುತ್ತಿದ್ದೇವೆ. ತುಂಬಾ ಖುಷಿ ಆಗುತ್ತಿದೆ’ ಎನ್ನುತ್ತಾರೆ ಶಂಕರ್‌ ಪತ್ತಾರ್‌.

ಸ್ಥಳ: ವಿಸ್ಮಯ ಗ್ಯಾಲರಿ, ರಂಗೋಲಿ ಮೆಟ್ರೊ ಕಲಾ ಕೇಂದ್ರ, ಎಂ. ಜಿ ರಸ್ತೆ, ಬೆಂಗಳೂರು–01

ದಿನಾಂಕ: ನವೆಂವರ್‌ 15ರವರೆಗೆ, ಬೆಳಿಗ್ಗೆ 11ರಿಂದ ಸಂಜೆ 7.30ರವರೆಗೆ.

**

ಜಲವರ್ಣದಲ್ಲಿ ಕನ್ನಡಿಗರ ಭಾವಬಿಂಬ

62ನೇ ಕರ್ನಾಟಕ ರಾಜ್ಯೋತ್ಸವದ  ಪ್ರಯುಕ್ತ, ಕಲಾವಿದ ಬಾಲಾಜಿ ಮರಗೊಂಡ ಅವರು ಕನ್ನಡದ  44 ಪ್ರಖ್ಯಾತ ವ್ಯಕ್ತಿಗಳ ಭಾವಚಿತ್ರವನ್ನು ಜಲವರ್ಣದಲ್ಲಿ ಬಿಡಿಸಿದ್ದಾರೆ.

ಕನ್ನಡಕ್ಕೆ ಕೊಡುಗೆ ನೀಡಿರುವ ಹವಲಾರು ಸಾಹಿತಿಗಳು, ಸಿನಿಮಾ ನಟರು, ರಾಜಕಾರಣಿಗಳು, ಕ್ರಿಕೆಟ್‌ ಆಟಗಾರರು, ಪರಿಸರವಾದಿಗಳು, ಸೈನ್ಯಾಧಿಕಾರಿ ಮುಂತಾದವರ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದು.

ಕುವೆಂಪು, ದ.ರಾ ಬೇಂದ್ರೆ, ಶಿವರಾಮ ಕಾರಂತ, ವಿ.ಕೃ ಗೋಕಾಕ್‌, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಯು. ಆರ್‌.ಅನಂತಮೂರ್ತಿ, ಗಿರೀಶ್‌  ಕಾರ್ನಾಡ್‌, ಚಂದ್ರಶೇಖರ ಕಂಬಾರ, ಹೆಚ್‌.ಡಿ ದೇವೇಗೌಡ,  ಬಸವಣ್ಣ, ಪುಟ್ಟಣ್ಣ ಕಣಗಾಲ್‌, ಕಲ್ಪನಾ ಮುಂತಾದವರ ಜಲವರ್ಣ ಭಾವಚಿತ್ರಗಳನ್ನು ಕಲಾವಿದ ಬಾಲಾಜಿ ಚಿತ್ರಿಸಿದ್ದಾರೆ.

ಸ್ಥಳ: ಬೆಳಕು ಗ್ಯಾಲರಿ, ರಂಗೋಲಿ ಮೆಟ್ರೊ ಕಲಾ ಕೇಂದ್ರ, ಎಂ.ಜಿ ರಸ್ತೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT