ಮಂಡ್ಯ

ಶಿವರಾಮೇಗೌಡರ ಮಗಳ ಮದುವೆಗೆ ಹೈಟೆಕ್‌ ಆಮಂತ್ರಣ

ಬಿಜೆಪಿ ಮುಖಂಡ ಜನಾರ್ಧನ ರೆಡ್ಡಿ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿ ಸುದ್ದಿಯಾದ ನಂತರ ನಾಗಮಂಗಲದ ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಕೂಡ ತಮ್ಮ ಮಗಳು ಕಾವ್ಯಾ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಮಂಡ್ಯ: ಬಿಜೆಪಿ ಮುಖಂಡ ಜನಾರ್ಧನ ರೆಡ್ಡಿ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿ ಸುದ್ದಿಯಾದ ನಂತರ ನಾಗಮಂಗಲದ ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಕೂಡ ತಮ್ಮ ಮಗಳು ಕಾವ್ಯಾ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಹೈಟೆಕ್‌ ವಿಡಿಯೊ ಆಮಂತ್ರಣ ಪತ್ರಿಕೆ ಮಾಡಿಸಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವಿಡಿಯೊದಲ್ಲಿ ಸಹ ಕಲಾವಿದರ ನೃತ್ಯವಿದ್ದು ಶಿವರಾಮೇಗೌಡ, ಪತ್ನಿ ಸುಧಾ, ಮಗಳು ಕಾವ್ಯಾ, ಭಾವಿ ಅಳಿಯ ರಾಜೀವ್‌ ಅವರು ಮದುವೆಗೆ ಆಮಂತ್ರಣ ನೀಡುವ ದೃಶ್ಯಗಳಿವೆ. ಡಿ.6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ನಡೆಯಲಿದ್ದು, 7ರಂದು ವಿವಾಹ ನೆರವೇರಲಿದೆ.

ಜನಾರ್ಧನ ರೆಡ್ಡಿ ಪುತ್ರಿ ವಿವಾಹದ ನಂತರ ಇನ್ನೊಂದು ವೈಭವದ ವಿವಾಹ ನಡೆಯುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಪ್ರತಿಕ್ರಿಯೆ ಪಡೆಯಲು
ಶಿವರಾಮೇಗೌಡ ಅವರು ಸಂಪರ್ಕಕ್ಕೆ ಸಿಗಲಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ಶ್ರೀರಂಗನ ಸನ್ನಿಧಿಯಲ್ಲಿ ಕಣ್ಮನ ಸೆಳೆದ ಲಕ್ಷ ದೀಪೋತ್ಸವ

ಶ್ರೀರಂಗಪಟ್ಟಣ
ಶ್ರೀರಂಗನ ಸನ್ನಿಧಿಯಲ್ಲಿ ಕಣ್ಮನ ಸೆಳೆದ ಲಕ್ಷ ದೀಪೋತ್ಸವ

16 Jan, 2018
ಎತ್ತುಗಳೇ ದೇವರು, ಕೊಟ್ಟಿಗೆಯೇ ದೇವಾಲಯ!

ಮಂಡ್ಯ
ಎತ್ತುಗಳೇ ದೇವರು, ಕೊಟ್ಟಿಗೆಯೇ ದೇವಾಲಯ!

16 Jan, 2018
ನಗರದಲ್ಲೊಂದು ವನ ಸಾಕ್ಷರತಾ ಆಂದೋಲನ

ಮಂಡ್ಯ
ನಗರದಲ್ಲೊಂದು ವನ ಸಾಕ್ಷರತಾ ಆಂದೋಲನ

15 Jan, 2018

ಕೆ.ಆರ್.ಪೇಟೆ
16ರಿಂದ ಮಕ್ಕಳ ನಾಟಕೋತ್ಸವ

ಶತಮಾನ ಶಾಲೆಯ ಮಕ್ಕಳು ಮೈಸೂರು ಪ್ರಕಾಶ್ ನಿರ್ದೇಶನ ಹಾಗೂ ಬಿ.ವಿ.ಕಾರಂತ ಸಂಗೀತ ಸಂಯೋಜನೆಯ ‘ಬೊಮ್ಮನಹಳ್ಳಿ ಕಿಂದರಿಜೋಗಿ’ ನಾಟಕವನ್ನು ಅಭಿನಯಿಸಲಿದ್ದಾರೆ.

15 Jan, 2018
ಜೆಡಿಎಸ್‌ಗೆ ಒಗ್ಗಟ್ಟಿನ ಬಲ ಅಗತ್ಯ

ಮಂಡ್ಯ
ಜೆಡಿಎಸ್‌ಗೆ ಒಗ್ಗಟ್ಟಿನ ಬಲ ಅಗತ್ಯ

14 Jan, 2018