ತುಮಕೂರು

ಇಂದಿರಾ ಕ್ಯಾಂಟೀನ್‌ಗೆ ವಿರೋಧ

’ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಅಂದಾಜು 2 ಎಕರೆಯಷ್ಟಿದೆ. ಮಕ್ಕಳಿಗೆ ಆಟ ಆಡಲು ಅನುಕೂಲವಾಗಿದೆ.  ಕ್ಯಾಂಟೀನ್‌ ಆರಂಭಗೊಂಡರೆ ಕಲಿಕೆಗೆ, ಆಟೋಟಕ್ಕೆ ಕಷ್ಟವಾಗುತ್ತದೆ.

ತುಮಕೂರು: ತುಮಕೂರು ಮಹಾನಗರ ಪಾಲಿಕೆಯು ನಗರದ ವಿವಿಧ ಕಡೆ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸ್ಥಳಗಳನ್ನು ಗುರುತಿಸಿ ಸರ್ಕಾರಕ್ಕೆ ಪಟ್ಟಿ ಕಳುಹಿಸಿದೆ. ಈ ಪಟ್ಟಿಯಲ್ಲಿ ಕ್ಯಾತ್ಸಂದ್ರದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 30X40 ಜಾಗ ಸಹ ಗುರುತಿಸಲಾಗಿದೆ ಎಂದು ತಿಳಿದಿದೆ.

’ಕ್ಯಾತ್ಸಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಉದ್ದೇಶ ಒಳ್ಳೆಯದೇ ಆಗಿದ್ದರೂ ಶಾಲಾ ಆವರಣದಲ್ಲಿ ಸ್ಥಾಪನೆ ಮಾಡಬಾರದು. ಬೇರೆ ಜಾಗ ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ಗ್ರಾಮಸ್ಥರ ಬೆಂಬಲವೂ ಸಿಗುತ್ತದೆ’ ಎಂದು ಕ್ಯಾತ್ಸಂದ್ರದ ಹರೀಶ್  ಹೇಳಿದರು.

’ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಅಂದಾಜು 2 ಎಕರೆಯಷ್ಟಿದೆ. ಮಕ್ಕಳಿಗೆ ಆಟ ಆಡಲು ಅನುಕೂಲವಾಗಿದೆ.  ಕ್ಯಾಂಟೀನ್‌ ಆರಂಭಗೊಂಡರೆ ಕಲಿಕೆಗೆ, ಆಟೋಟಕ್ಕೆ ಕಷ್ಟವಾಗುತ್ತದೆ. ಹೀಗಾಗಿ ಪಾಲಿಕೆ ಬೇರೆ ಕಡೆಗೆ ಜಾಗ ಗುರುತಿಸಬೇಕು’ ಎಂದು ಮನವಿ ಮಾಡಿದ್ದಾರೆ.

’ಈ ಹಿಂದೆಯೂ ಸರ್ಕಾರಿ ಶಾಲೆ ಆವರಣದ ಜಾಗವನ್ನು ಬೇರೆ ಬೇರೆ ಉದ್ದೇಶದ ಹೆಸರಿನಲ್ಲಿ ಕಬಳಿಸುವ ಪ್ರಯತ್ನ ನಡೆದಿತ್ತು. ಆಗಲೂ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರಿಂದ ಶಾಲೆ ಆವರಣ ಉಳಿದಿದೆ. ಈಗ ಪುನಾ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಜಾಗ  ಕಬಳಿಸುವ ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.

‘ಶಾಲಾ ಮುಖ್ಯ ಶಿಕ್ಷಕರಿಗೆ ಈ ಸಂಗತಿ ಗೊತ್ತಿದ್ದರೂ ಅಸಹಾಯಕರಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರು ಈ ಬಗ್ಗೆ ಪರಿಶೀಲನೆ ನಡೆಸಿ ಶಾಲೆ ಜಾಗ ಸಂರಕ್ಷಣೆಗೆ ಮುಂದಾಗಬೇಕು. ವಾರ್ಡ್ ಸದಸ್ಯರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಒತ್ತಾಯ ಮಾಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ಹೊರ ಔಷಧಿಗೆ ಚೀಟಿ ಬರೆದರೆ ಅಮಾನತು

ಮಧುಗಿರಿ
ಹೊರ ಔಷಧಿಗೆ ಚೀಟಿ ಬರೆದರೆ ಅಮಾನತು

17 Mar, 2018

ತುಮಕೂರು
ಕರ್ನಾಟಕ ಸಮಗ್ರ ಕೊಳೆಗೇರಿ ಅಭಿವೃದ್ಧಿ ಕಾಯ್ದೆಗೆ ಆಗ್ರಹ

ಕರ್ನಾಟಕ ಸಮಗ್ರ ಕೊಳೆಗೇರಿ ಅಭಿವೃದ್ಧಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕೊಳೆಗೇರಿ ಹಿತರಕ್ಷಣಾ ಸಮಿತಿ...

17 Mar, 2018
ಅಲೆದಾಟ ತಪ್ಪಿಸಿ ಪರಿಹಾರ ನೀಡಿ

ತುಮಕೂರು
ಅಲೆದಾಟ ತಪ್ಪಿಸಿ ಪರಿಹಾರ ನೀಡಿ

17 Mar, 2018

ತುಮಕೂರು
ಪರಸ್ಪರ ಮಾಲೆ ಹಾಕಿಕೊಂಡ ಶಿವಣ್ಣ, ಬಸವರಾಜ್

ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯು ಶುಕ್ರವಾರ ನಡೆಸಿದ ಸಭೆಯಲ್ಲಿ ಸಮಾಜ ಬಾಂಧವರ ಮನವಿ ಮೇರೆಗೆ ಸಮಾಜದ ಮುಖಂಡರಾದ ಜಿ.ಎಸ್. ಬಸವರಾಜ್ ಮತ್ತು...

17 Mar, 2018

ತಿಪಟೂರು
ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿ

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಿವಾಳಿಯಾಗಿದೆ. ಹಣ ಕೊಟ್ಟವರಿಗೆ ಅಧಿಕಾರ ಎಂಬಂತಾಗಿದೆ ಎಂದು ಬಿಜೆಪಿ ಮುಖಂಡರಾದ ಜಿ.ಎಸ್. ಬಸವರಾಜ್ ಆರೋಪಿಸಿದರು.

17 Mar, 2018