ಶಿಕಾರಿಪುರ

ಮಯೂರವರ್ಮ ಪ್ರಶಸ್ತಿ ಘೋಷಣೆಯಾಗಲಿ: ಸರ್ಕಾರಕ್ಕೆ ಒತ್ತಾಯ

‘ಪಲ್ಲವರಿಂದ ಕನ್ನಡ ನಾಡನ್ನು ಉಳಿಸಿದ ಕೀರ್ತಿ ಮಯೂರವರ್ಮನಿಗೆ ಸಲ್ಲುತ್ತದೆ. ಅವನಂತೆ ನಾಡನ್ನು ರಕ್ಷಣೆ ಮಾಡಿದ ದೊರೆ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಜನಿಸಿದ್ದರೆ ಅಲ್ಲಿನ ಜನರು ಹಾಗೂ ಸರ್ಕಾರ ಆ ರಾಜನನ್ನು ಕೊಂಡಾಡುತ್ತಿದ್ದರು.

ಶಿಕಾರಿಪುರ: ‘ಪ್ರಥಮ ಕನ್ನಡ ಸಾಮ್ರಾಜ್ಯ ಸ್ಥಾಪಿಸಿದ ರಾಜ ಮಯೂರವರ್ಮನ ಹೆಸರಿನಲ್ಲಿ ಇಂದಿನವರೆಗೂ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಿಸದೇ ನಿರ್ಲಕ್ಷ್ಯ ತೋರಿರುವುದು ದುರಂತದ ಸಂಗತಿಯಾಗಿದೆ’ ಎಂದು ಹಿರಿಯ ಸಾಹಿತಿ ನಾ.ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ್ದ ಮಯೂರ ಕನ್ನಡ ಪ್ರತಿಭಾನ್ವೇಷಣೆ ಪರೀಕ್ಷೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪಲ್ಲವರಿಂದ ಕನ್ನಡ ನಾಡನ್ನು ಉಳಿಸಿದ ಕೀರ್ತಿ ಮಯೂರವರ್ಮನಿಗೆ ಸಲ್ಲುತ್ತದೆ. ಅವನಂತೆ ನಾಡನ್ನು ರಕ್ಷಣೆ ಮಾಡಿದ ದೊರೆ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಜನಿಸಿದ್ದರೆ ಅಲ್ಲಿನ ಜನರು ಹಾಗೂ ಸರ್ಕಾರ ಆ ರಾಜನನ್ನು ಕೊಂಡಾಡುತ್ತಿದ್ದರು. ಆದರೆ, ನಮ್ಮ ರಾಜ್ಯದಲ್ಲಿ ಮಯೂರವರ್ಮನನ್ನು ಕೊಂಡಾಡುವ ದೃಶ್ಯವೇ ಕಂಡು ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಲವು ವ್ಯಕ್ತಿಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಣೆ ಮಾಡುತ್ತಿದೆ. ಅದೇ ರೀತಿ ಕನ್ನಡ ನಾಡು ನುಡಿ ರಕ್ಷಣೆ ಮಾಡಿದ ರಾಜ ಮಯೂರವರ್ಮನ ಹೆಸರಿನಲ್ಲಿ ಕೂಡ ಪ್ರಶಸ್ತಿ ಘೋಷಿಸಬೇಕು.

ಆತ ಜನಿಸಿದ, 2000 ವರ್ಷಗಳ ಇತಿಹಾಸ ಹೊಂದಿರುವ ತಾಳಗುಂದ ಗ್ರಾಮದ ಅಭಿವೃದ್ಧಿ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಲೇಖಕ ಶಿಕಾರಿಪುರ ಕೃಷ್ಣಮೂರ್ತಿ, ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಎಂ.ನವೀನ್‌ಕುಮಾರ್‌ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಎಂಪಿಎಂ, ವಿಐಎಸ್ಎಲ್ ಉಳಿಸಲು ಬದ್ಧ’

ಭದ್ರಾವತಿ
‘ಎಂಪಿಎಂ, ವಿಐಎಸ್ಎಲ್ ಉಳಿಸಲು ಬದ್ಧ’

23 Jan, 2018

ಶಿವಮೊಗ್ಗ
ಕಾಗೋಡು ದಾರಿಯಲ್ಲಿ ಯಡಿಯೂರಪ್ಪ ನಡೆಯಲಿ: ಸಚಿನ್ ಮೀಗಾ

ನೀಡಿದ ಆಶ್ವಾಸನೆಯಂತೆ ರೈತರ ಉತ್ಪಾದನಾ ವೆಚ್ಚದ ಮೇಲೆ ಶೇ 50 ಹೆಚ್ಚಿಸಿ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಲು ಒತ್ತಡ ಹೇರಬೇಕು.

23 Jan, 2018
ಅಡಿಕೆ ಸಿಪ್ಪೆ ರಾಶಿ: ಪ್ರಯಾಣಿಕರಿಗೆ ಕಿರಿಕಿರಿ

ಶಿವಮೊಗ್ಗ
ಅಡಿಕೆ ಸಿಪ್ಪೆ ರಾಶಿ: ಪ್ರಯಾಣಿಕರಿಗೆ ಕಿರಿಕಿರಿ

22 Jan, 2018

ಶಿಕಾರಿಪುರ
ಸಾಮಾಜಿಕ ಬದಲಾವಣೆಗಾಗಿ ಅಂಬಿಗರ ಚೌಡಯ್ಯ ಶ್ರಮಿಸಿದ್ದರು: ಶಾಸಕ ಬಿ.ವೈ. ರಾಘವೇಂದ್ರ

ಅಂಬಿಗರ ಚೌಡಯ್ಯ ಜೀವನ ಕುರಿತು ಶಿಕ್ಷಕ ಕುಸ್ಕೂರು ರಾಜು ಮಾತನಾಡಿ, ‘ಅಂಬಿಗರ ಚೌಡಯ್ಯ ಕಾಯಕದ ಮಹತ್ವವನ್ನು ಸಮಾಜಕ್ಕೆ ಸಾರಿದ್ದರು. ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ...

22 Jan, 2018
ನಿಂತ ನೆಲೆ ಕೊನೆಗೂ ಅವರದೇ ಆಯಿತು!

ಶಿವಮೊಗ್ಗ
ನಿಂತ ನೆಲೆ ಕೊನೆಗೂ ಅವರದೇ ಆಯಿತು!

21 Jan, 2018