ಕಾರಟಗಿ

ಕೂರಿಗೆ ಪದ್ಧತಿ ಬಿತ್ತನೆಗೆ ಸಲಹೆ

ರೈತರು ಕೂರಿಗೆ ಮೂಲಕ ಭತ್ತ ಬಿತ್ತನೆ ಮಾಡಿದರೆ ಕಡಿಮೆ ವೆಚ್ಚದಲ್ಲಿ, ಕಡಿಮೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕದಲ್ಲಿ ಅಧಿಕ ಇಳುವರಿ ಪಡೆದು, ದ್ವಿಗುಣ ಲಾಭ ಪಡೆಯಬಹುದಾಗಿದೆ.

ಕಾರಟಗಿ: ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸಾಂಪ್ರದಾಯಕ ಭತ್ತದ ನಾಡಿ ಮಾಡಲಾಗುತ್ತಿದೆ. ಅಧಿಕ ನೀರು ನಿಲ್ಲಿಸಿ, ಅಧಿಕ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ಹಾಳಾಗಿ, ಬೆಳೆಯ ಇಳುವರಿ ಕಡಿಮೆಯಾಗಲಿದೆ. ಭೂಮಿ ಬಂಜರಾಗುವ ಅಪಾಯವಿದೆ ಎಂದು ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯ ಜಿಲ್ಲಾ ಸಲಹೆಗಾರ ಎಸ್. ಬಿ. ಕೋಣೆ ಹೇಳಿದರು.

ಸಮೀಪದ ಮರ್ಲಾನಹಳ್ಳಿಯ ಶಿರಡಿ ಸಾಯಿಬಾಬ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಗುರುವಾರ ಕೃಷಿ ಇಲಾಖೆ ಹಾಗೂ ಕೃಷಿ ವಿಸ್ತರಣಾ ಕೇಂದ್ರದಿಂದ ಆಯೋಜಿಸಿದ್ದ ಕೂರಿಗೆ ಬಿತ್ತನೆಯ ಭತ್ತ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಕೂರಿಗೆ ಮೂಲಕ ಭತ್ತ ಬಿತ್ತನೆ ಮಾಡಿದರೆ ಕಡಿಮೆ ವೆಚ್ಚದಲ್ಲಿ, ಕಡಿಮೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕದಲ್ಲಿ ಅಧಿಕ ಇಳುವರಿ ಪಡೆದು, ದ್ವಿಗುಣ ಲಾಭ ಪಡೆಯಬಹುದಾಗಿದೆ. ಕಡಿಮೆ ಖರ್ಚಿನ ಸಿರಿಧಾನ್ಯ ಬೆಳೆಗಳನ್ನು, ಕೂರಿಗೆ ಬಿತ್ತನೆಯ ಭತ್ತ ಬೆಳೆದು ಮನುಷ್ಯರ ಆರೋಗ್ಯ ಕಾಪಾಡುವ ಜೊತೆಗೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಅವರು ತಿಳಿಸಿದರು.

ಸೂರ್ಯರೆಡ್ಡಿ ಅವರ ಜಮೀನಿನಲ್ಲಿ ಕೂರಿಗೆ ಬಿತ್ತನೆಯ ಭತ್ತದ ಬೆಳೆಯ ಪ್ರಾತ್ಯಕ್ಷಿಕೆಯನ್ನು ನೆರೆದ ರೈತರಿಗೆ ತೋರಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ. ಪ್ರಕಾಶರಾವ್, ವಿಶೇಷ ಎಪಿಎಂಸಿ ಸದಸ್ಯ ಕೆ.ಶ್ರೀಹರಿ, ಕೃಷಿ ವಿಜ್ಞಾನಿಗಳಾದ ಡಾ.ಜಿ.ಎನ್.ಮರೆಡ್ಡಿ, ಡಾ.ರಾಘವೇಂದ್ರ ಎಲಿಗಾರ್, ತಾಂತ್ರಿಕ ಕೃಷಿ ಅಧಿಕಾರಿ ನಿಂಗಪ್ಪ, ಕೃಷಿ ಅಧಿಕಾರಿ ರಾಮಚಂದ್ರ ಲಮಾಣಿ, ರೈತ ಅನುವುಗಾರರಾದ ತಿಮ್ಮಣ್ಣ, ವೀರೇಶ ಗದ್ದಿ, ಲಿಂಗಾರೆಡ್ಡಿ, ಆನಂದ, ಅಕ್ಬರ್, ಬಸವರಾಜ, ಪ್ರಮುಖರಾದ ಟಿ.ದೊಡ್ಡಪ್ಪ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ರೈತರ ಸಮಸ್ಯೆಗೆ ಸ್ಪಂದಿಸದ ಶಾಸಕ ತಂಗಡಗಿ: ಬಸವನಗೌಡ ಪಾಟೀಲ

ಕನಕಗಿರಿ
ರೈತರ ಸಮಸ್ಯೆಗೆ ಸ್ಪಂದಿಸದ ಶಾಸಕ ತಂಗಡಗಿ: ಬಸವನಗೌಡ ಪಾಟೀಲ

18 Apr, 2018

ಯಲಬುರ್ಗಾ
ಮತದಾರರಿಂದ ಉತ್ತಮ ಬೆಂಬಲ: ರಾಯರಡ್ಡಿ

ಯಲಬುರ್ಗಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ಬೆಂಬಲಿಸುವುದರಿಂದ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಚಿವ ಬಸವರಾಜ ರಾಯರಡ್ಡಿ...

18 Apr, 2018

ಗಂಗಾವತಿ
ತಪ್ಪಿದ ಟಿಕೆಟ್: ಎಚ್‌ಆರ್‌ಸಿ ಬೆಂಬಲಿಗರ ಪ್ರತಿಭಟನೆ

ಉದ್ಯಮಿ ಎಚ್.ಆರ್. ಚನ್ನಕೇಶವ ಅವರಿಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಂಗಳವಾರ ಅವರ ಅಭಿಮಾನಿಗಳು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ...

18 Apr, 2018

ಕುಷ್ಟಗಿ
ಅಕ್ಷಯ ತೃತೀಯ ಬಳಿಕ ನಾಮಪತ್ರ

ಕುಷ್ಟಗಿ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೆಸರುಗಳು ಅಂತಿಮಗೊಂಡಿದ್ದು ಈ ವಿಧಾನಸಭಾ ಚುನಾವಣಾ ಆಖಾಡ ನಿಧಾನವಾಗಿ ರಂಗೇರುತ್ತಿದೆ.

18 Apr, 2018
ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ

ಗಂಗಾವತಿ
ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ

17 Apr, 2018