ಚಿಟಗುಪ್ಪ

ತಾಲ್ಲೂಕು ಕೇಂದ್ರ ಆರಂಭಕ್ಕೆ ಭರದ ಸಿದ್ಧತೆ

ಚಿಟಗುಪ್ಪದ 35 ಗ್ರಾಮಗಳನ್ನು ಒಳಗೊಂಡ ಸ್ವತಂತ್ರ ತಾಲ್ಲೂಕು ಆಗಿ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.

ಚಿಟಗುಪ್ಪದಲ್ಲಿ ತಾಲ್ಲೂಕು ಪ್ರಾರಂಭೋತ್ಸವಕ್ಕೆ ಸಜ್ಜಾಗಿರುವ ತಹಶೀಲ್ದಾರ ಕಚೇರಿ

ಚಿಟಗುಪ್ಪ: ಚಿಟಗುಪ್ಪದ 35 ಗ್ರಾಮಗಳನ್ನು ಒಳಗೊಂಡ ಸ್ವತಂತ್ರ ತಾಲ್ಲೂಕು ಆಗಿ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.

ನಿಜಾಮ ಆಳ್ವಿಕೆಯ ಕಾಲದಲ್ಲಿ ಮನಿಯಾಬಾದ್ ಎಂದು ಕರೆಯಲ್ಪಡುತ್ತಿದ್ದ ಪಟ್ಟಣ ನಂತರದ ಕಾಲದಲ್ಲಿ ಚಿಟಗುಪ್ಪ ಎಂಬ ಹೆಸರಿನಿಂದ ಖ್ಯಾತಿ ಪಡೆದಿದೆ. ಜವಳಿ, ದಿನಸಿ ಇತರ ವ್ಯಾಪಾರ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದ್ದು. 60 ವರ್ಷಗಳ ಕಾಲ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ನಾಗರಿಕರು ನಡೆಸಿದ ನಿರಂತರ ಹೋರಾಟಕ್ಕೆ ಹೋರಾಟಕ್ಕೆ ಕೊನೆಗೆ ಜಯ ಲಭಿಸಿದೆ.

ಚಿಟಗುಪ್ಪದಲ್ಲಿ ವಿಶೇಷ ತಹಶೀಲ್ದಾರ್‌ ಕಚೇರಿ, ಪುರಸಭೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಮುದಾಯ ಆರೋಗ್ಯ ಕೇಂದ್ರ, ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಸಮಿತಿ, ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಹಾಗೂ ನಂತರದ ವಿದ್ಯಾರ್ಥಿ ನಿಲಯಗಳು, ಜೆಸ್ಕಾಂ ಕಚೇರಿ, ಪಶು ವೈದ್ಯಕೀಯ ಆಸ್ಪತ್ರೆ, ಸರ್ಕಾರಿ ಬಾಲಕರ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಖಾಸಗಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು,ಅಗ್ನಿ ಶಾಮಕ ಠಾಣೆ, ಭಾರತೀಯ ಸ್ಟೇಟ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಕೃಷ್ಣಾ ಪ್ರಗತಿ ಗ್ರಾಮೀಣ ಬ್ಯಾಂಕ್ ಗಳ ಶಾಖೆಗಳು ಇವೆ.

ತಾಲ್ಲೂಕು ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸಲಿರುವ ಕಟ್ಟಡಗಳ ಮಾಹಿತಿ: ತಹಶೀಲ್ದಾರ್‌ ಕಚೇರಿ– ವಿಶೇಷ ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ–ಪುರಸಭೆಯ ಹಳೆಯ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದರೆ, ಹೌಸಿಂಗ್ ಬೋರ್ಡ್‌ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ(ಬಿಇಒ) ಕಚೇರಿ ಕಾರ್ಯಾರಂಭ ಮಾಡಲಿದೆ.

ಡಿವೈಎಸ್ಪಿ ಮತ್ತು ಸಿಪಿಐ ಕಚೇರಿಗಳು ಹಳೆಯೇ ಸಿಪಿಐ ಕಚೇರಿ ಕಟ್ಟಡದಲ್ಲಿ ಆರಂಭವಾಗಿದ್ದರೆ, ಪೊಲೀಸ್‌ ಠಾಣೆ– ಸದ್ಯ ಕಾರ್ಯನಿರ್ವಹಿಸುತ್ತಿರುವ ಕಟ್ಟಡದಲ್ಲಿ ಇರಲಿದೆ. ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ– ಸಮುದಾಯ ಭವನ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ– ಪ್ರವಾಸಿ ಮಂದಿರ, ಭೂಸೇನಾ ನಿಗಮ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ – ಸಮುದಾಯ ಭವನ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ– ಸಮುದಾಯ ಭವನ, ಕೆಪಿಟಿಸಿಎಲ್ ಕಾರ್ಯಪಾಲಕ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ – ಜೆಸ್ಕಾಂ ಕಟ್ಟಡ.

ಸಾರ್ವಜನಿಕ ಆಸ್ಪತ್ರೆ ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ– ಸಮುದಾಯ ಆರೋಗ್ಯ ಕೇಂದ್ರ, ಪಶು ಸಂಗೋಪನೆ ಮತ್ತು ಪಶು ಆಸ್ಪತ್ರೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ– ಈಗಿನ ಪಶು ಆಸ್ಪತ್ರೆ ಕಟ್ಟಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ – ಚಕ್ರಧಾರಿ ಅಂಗನವಾಡಿ ಕಟ್ಟಡ, ತಾಲ್ಲೂಕು ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳ ಕಚೇರಿ–ಫಾತ್ಮಾಪುರ್ ಸಮುದಾಯ ಭವನ, ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ಕಚೇರಿ –ಖಾದಿ ಗ್ರಾಮ ಉದ್ಯೋಗ ಗೋದಾಮು, ಜಿಲ್ಲಾ ಪಂಚಾಯಿತಿ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿ –ಸಮುದಾಯ ಭವನ, ಉಪ ನೋಂದಣಾಧಿಕಾರಿಗಳ ಕಚೇರಿ – ಸಮುದಾಯ ಭವನ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ –ಸಮುದಾಯ ಭವನ, ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಕಾರ್ಯದರ್ಶಿಗಳ ಕಚೇರಿ –ಎಪಿಎಂಸಿ ಕಟ್ಟಡ, ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ–ಪುರಸಭೆ ಕಟ್ಟಡ.

ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ –ಸಮುದಾಯ ಭವನ, ಅಬಕಾರಿ ನಿರೀಕ್ಷಕರ ಕಚೇರಿ–ಸಮುದಾಯ ಭವನ, ರೇಷ್ಮೆ ವಿಸ್ತರಣಾಧಿಕಾರಿಗಳ ತಾಂತ್ರಿಕ ಸೇವಾ ಕೇಂದ್ರ ಸಮುದಾಯ ಭವನ, ಈ.ಕ.ರಾ.ರ.ಸಾರಿಗೆ ಸಂಸ್ಥೆ ವ್ಯವಸ್ಥಾಪಕರ ಕಚೇರಿ –ನೂತನ ಬಸ್ ನಿಲ್ದಾಣ ಕಟ್ಟಡ, ಅಗ್ನಿ ಶಾಮಕ ಠಾಣಾಧಿಕಾರಿಗಳ ಕಚೇರಿ– ಅಗ್ನಿ ಶಾಮಕ ಠಾಣೆ ಕಟ್ಟಡ, ಪತ್ರಾಂಕಿತ ಉಪ ಖಜಾನಾಧಿಕಾರಿಗಳ ಕಚೇರಿ–ಸಮುದಾಯ ಭವನ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಅಧಿಕಾರಿಗಳ ಕಚೇರಿ –ಸಮುದಾಯ ಭವನ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ಇಲಾಖೆ– ಸಮುದಾಯ ಭವನ, ಸಮಾಜ ಕಲ್ಯಾಣ ಇಲಾಖೆ –ಸಮುದಾಯ ಭವನಗಳು ಗೊತ್ತು ಪಡಿಸಲಾಗಿದೆ.

‘ಜನವರಿ 7ರ ವರೆಗೆ ನಾಗರಿಕರಿಂದ ಜಿಲ್ಲಾಧಿಕಾರಿ ಅವರು ಆಕ್ಷೇಪ ಸಲ್ಲಿಕೆಗೆ ಕಾಲಾವಕಾಶ ನೀಡಿದ್ದು, ಅವಧಿ ಮುಗಿದ ಒಂದು ವಾರದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ತಾಲ್ಲೂಕು ಕೇಂದ್ರ ಉದ್ಘಾಟನೆಯ ದಿನಾಂಕ ನಿಗದಿಪಡಿಸಲಿದ್ದಾರೆ’ ಎಂದು ತಹಶೀಲ್ದಾರ ಜಿಯಾವುಲ್ಲಾ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

ವೀರೇಶ್ ಕುಮಾರ್. ಎನ್. ಮಠಪತಿ

 

Comments
ಈ ವಿಭಾಗದಿಂದ ಇನ್ನಷ್ಟು

ಬೀದರ್
ಅವಿಭಕ್ತ ಕುಟುಂಬಗಳಲ್ಲಿ ಉತ್ತಮ ಸಂಸ್ಕಾರ

‘ಅವಿಭಕ್ತ ಕುಟುಂಬಗಳಲ್ಲಿ ಮಾತ್ರ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಕಾಣಸಿಗುತ್ತದೆ. ಆದ್ದರಿಂದ ಕುಟುಂಬಗಳು ವಿಘಟನೆಯಾದಂತೆ ಎಚ್ಚರ ವಹಿಸಬೇಕು’ ಎಂದು ಕಾಶಿಯ ಗಂಗಾಧರ ಭಗವತ್ಪಾದ ಶಿವಾಚಾರ್ಯ ಸ್ವಾಮೀಜಿ...

23 Mar, 2018
ಖಾನ್‌ ಸಾಹೇಬರ ‘ಕೈ’ ಬಿಡದ ಉಪ ಚುನಾವಣೆಗಳು

ಮೊದಲು ಶಾಸಕನಾದ ನೆನಪು
ಖಾನ್‌ ಸಾಹೇಬರ ‘ಕೈ’ ಬಿಡದ ಉಪ ಚುನಾವಣೆಗಳು

23 Mar, 2018

ಹುಮನಾಬಾದ್
ಕರ್ತವ್ಯಲೋಪ ಸಿಬ್ಬಂದಿ ವಿರುದ್ಧ ಕ್ರಮ

‘ಸಾರ್ವಜನಿಕರ ಕೆಲಸಗಳ ನಿರ್ವಹಣೆಯಲ್ಲಿ ಕರ್ತವ್ಯಲೋಪ ಎಸಗುವ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಪುರಸಭೆ ಸರ್ವ ಸದಸ್ಯರು ಎಚ್ಚರಿಕೆ ನೀಡಿದರು.

23 Mar, 2018

ಭಾಲ್ಕಿ
ಭಾಲ್ಕಿಗೆ ಉಚಿತ ವೈಫೈ ಸೌಲಭ್ಯ: ಖಂಡ್ರೆ

ವಿದ್ಯಾರ್ಥಿ, ಯುವಜನರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಕೈಗೊಳ್ಳಲು ಸಹಕರಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ...

22 Mar, 2018
ವಿಧಾನಸೌಧ ನೋಡಿದ್ದೇ ಶಾಸಕನಾದ ಮೇಲೆ!

ಔರಾದ್‌
ವಿಧಾನಸೌಧ ನೋಡಿದ್ದೇ ಶಾಸಕನಾದ ಮೇಲೆ!

22 Mar, 2018