ಪರಿವೀಕ್ಷಣೆಗೆ

ಹಕ್ಕಿಜ್ವರ: ರಾಜ್ಯಕ್ಕೆ ಇಂದು ಕೇಂದ್ರ ತಂಡ

ಹಕ್ಕಿಜ್ವರ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ತಂಡ ನೀಡುವ ಸಲಹೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಪಶು ಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ ಎಂದರು.

ಬೆಂಗಳೂರು: ಹಕ್ಕಿಜ್ವರ ಕಾಣಿಸಿಕೊಂಡ ಕಾರಣ ಪರಿವೀಕ್ಷಣೆಗೆ ಕೇಂದ್ರ ತಂಡ ಗುರುವಾರ ನಗರಕ್ಕೆ ಬರಲಿದೆ ಎಂದು ಪಶು ಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ ತಿಳಿಸಿದರು.

ಉತ್ತರ ತಾಲ್ಲೂಕಿನ ಥಣಿಸಂದ್ರ ಬಳಿಯ ದಾಸರಹಳ್ಳಿಯ ಕೆ.ಜಿ.ಎನ್‌. ಕೋಳಿ ಮಾಂಸದ ಅಂಗಡಿಯಲ್ಲಿ ಹಕ್ಕಿಜ್ವರ (ಎಚ್‌5ಎನ್‌1) ಕಾಣಿಸಿಕೊಂಡ ಕಾರಣ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಕ್ಕಿಜ್ವರ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ತಂಡ ನೀಡುವ ಸಲಹೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಕೋಳಿ ಫಾರಂನಿಂದ ಹಕ್ಕಿಜ್ವರ ಹರಡಿರುವ ಸಾಧ್ಯತೆ ಇಲ್ಲ. ಕೋಳಿ ಮಾಂಸದ ಅಂಗಡಿಯಿಂದ ಹರಡಿರುವ ಶಂಕೆ ಇದೆ. ಹೀಗಾಗಿ, ಶಂಕಿತ ಎರಡು ಅಂಗಡಿಗಳನ್ನು ಮುಚ್ಚಲಾಗಿದೆ. ಹಕ್ಕಿಜ್ವರ ಎಲ್ಲಿಂದ ಬಂದಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ಆದರೆ, ಕೋಳಿ ಮಾಂಸ ತಿನ್ನುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇಠ್‌ ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಪ್ರತಿ 10 ಕಿ.ಮೀ. ವ್ಯಾಪ್ತಿಯಲ್ಲಿ 100 ಸಿಬ್ಬಂದಿಯನ್ನು ಸರ್ವೇಕ್ಷಣೆಗೆ ನೇಮಿಸಲಾಗಿದೆ. ಡಿ. 15ರ ನಂತರ ಕೋಳಿಗಳು ಸತ್ತರೆ ಗಮನಕ್ಕೆ ತರುವಂತೆ ತಿಳಿಸಲಾಗಿದೆ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಜೆಡಿಎಸ್ ಕಾನೂನು ಘಟಕದ ಸದಸ್ಯರ ಪ್ರತಿಭಟನೆ

ಕಾಂಗ್ರೆಸ್‌ ಕೈಗೊಂಬೆಗಳಂತೆ ವರ್ತಿಸುತ್ತಿರುವ ಚುನಾವಣಾ ಅಧಿಕಾರಿಗಳ ವರ್ಗಾವಣೆಗೆ ಪಟ್ಟು
ಜೆಡಿಎಸ್ ಕಾನೂನು ಘಟಕದ ಸದಸ್ಯರ ಪ್ರತಿಭಟನೆ

21 Apr, 2018
ಬಾದಾಮಿಯಿಂದ ಸ್ಪರ್ಧೆ; ಹೈಕಮಾಂಡ್‌ ನಿರ್ಧಾರ ಅಂತಿಮ: ಸಿದ್ದರಾಮಯ್ಯ

‘ಅತಂತ್ರ ವಿಧಾನಸಭೆಗಾಗಿ ಜೆಡಿಎಸ್ ಕಾಯುತ್ತಿದೆ’
ಬಾದಾಮಿಯಿಂದ ಸ್ಪರ್ಧೆ; ಹೈಕಮಾಂಡ್‌ ನಿರ್ಧಾರ ಅಂತಿಮ: ಸಿದ್ದರಾಮಯ್ಯ

21 Apr, 2018
ಚಳ್ಳಕೆರೆಯಲ್ಲಿ ನಿಖಿಲ್ ಗೌಡ ರೋಡ್ ಶೋ

ಜೆಡಿಎಸ್ ಅಭ್ಯರ್ಥಿ ರವೀಶ್ ಪರ ಪ್ರಚಾರ, ನಾಮಪತ್ರ ಸಲ್ಲಿಕೆಗೆ ಸಾಥ್
ಚಳ್ಳಕೆರೆಯಲ್ಲಿ ನಿಖಿಲ್ ಗೌಡ ರೋಡ್ ಶೋ

21 Apr, 2018
ಬೇಳೂರು ಗೋಪಾಲಕೃಷ್ಣ  ಕಾಂಗ್ರೆಸ್ ಸೇರ್ಪಡೆ

ಕೈತಪ್ಪಿರುವ ಬಿಜೆಪಿ ಟಿಕೆಟ್‌
ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆ

21 Apr, 2018
ಬಿಜೆಪಿ ತೊರೆಯಲು ಬೆಳಮಗಿ ನಿರ್ಧಾರ

‘ಯಡಿಯೂರಪ್ಪ ನನಗೆ ಮೋಸ ಮಾಡಿದ್ದಾರೆ, ಕತ್ತು ಕೊಯ್ದಿದ್ದಾರೆ’
ಬಿಜೆಪಿ ತೊರೆಯಲು ಬೆಳಮಗಿ ನಿರ್ಧಾರ

21 Apr, 2018