ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗಾಗಿ ‘ಬಾಕ್ಸರ್‌ ನೆರಳು’

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಟೋಕಿಯೊ: ಒಂಟಿ ಮಹಿಳೆಯರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಇಲ್ಲಿಯ ಕಂಪನಿಯೊಂದು ಉಪಕರಣವನ್ನು ಪರಿಚಯಿಸಿದೆ. ಮನೆಗಳ ಕಿಟಕಿ ಪರದೆಯ ಹಿಂದೆ ದೃಢಕಾಯ ವ್ಯಕ್ತಿಯ ನೆರಳು ಮೂಡಿಸುವ ಉಪಕರಣ ಇದಾಗಿದೆ.

ನೆರಳನ್ನು ನೋಡಿದಾಕ್ಷಣ ಮನೆಯಲ್ಲಿ ದೃಢಕಾಯದ ಪುರುಷ ಇರಬಹುದು ಎಂದುಕೊಂಡು ದುಷ್ಕರ್ಮಿಗಳು ಮನೆಯನ್ನು ಪ್ರವೇಶಿಸದಂತೆ ತಡೆಯುವ ಉಪಾಯ ಈ ಉಪಕರಣದ್ದು.

‘ಸ್ಮಾರ್ಟ್‌ಫೋನ್‌ ಮೂಲಕ ಸಂಪರ್ಕ ಕಲ್ಪಿಸಬಹುದಾದ ಈ ಉಪಕರಣ, ಪ್ರಾಜೆಕ್ಟರ್‌ ಮೂಲಕ ಕಿಟಕಿ ಪರದೆಯ ಹಿಂದೆ ನೆರಳನ್ನು ಮೂಡಿಸುತ್ತದೆ’ ಎಂದು ಕಂಪನಿ ಹೇಳಿದೆ.

‘ವ್ಯಕ್ತಿಯು ಬಾಕ್ಸಿಂಗ್‌, ಕರಾಟೆ ಅಭ್ಯಾಸ ಮಾಡುತ್ತಿರುವುದು ಸೇರಿದಂತೆ ವಿವಿಧ ಚಟುವಟಿಕೆ ನಡೆಸುವ ನೆರಳುಗಳ ವಿಡಿಯೊವನ್ನು ಆಯ್ಕೆ ಮಾಡುವ ಅವಕಾಶ ಇದರಲ್ಲಿ ಕಲ್ಪಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಜನರ ಪ್ರತಿಕ್ರಿಯೆ ನೋಡಿಕೊಂಡು, ಈ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಿದ್ದೇವೆ’ ಎಂದು ಕಂಪನಿಯ ಅಧಿಕಾರಿ ಕೈಯಿಚಿ ನಕಮುರ ಹೇಳಿದ್ದಾರೆ.

‘ಒಂದೇ ರೀತಿಯ ನೆರಳುಗಳನ್ನು ಪ್ರತಿದಿನ ಕಂಡರೆ ದುಷ್ಕರ್ಮಿಗಳಿಗೆ ಆ ಮನೆಯಲ್ಲಿ ಒಂಟಿ ಮಹಿಳೆ ಇದ್ದಾರೆ ಎಂಬುದು ಸುಲಭವಾಗಿ ತಿಳಿದು ಹೋಗಬಹುದು ಅದಕ್ಕಾಗಿ ಬೇರೆ ಬೇರೆ ರೀತಿಯ ವಿಡಿಯೊಗಳನ್ನು ಬಿಡುಗಡೆ ಮಾಡಲಿದ್ದೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT