ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಗೀರಥ ಮಹರ್ಷಿ ಪ್ರಯತ್ನ ಮಾದರಿ’

Last Updated 23 ಏಪ್ರಿಲ್ 2018, 12:30 IST
ಅಕ್ಷರ ಗಾತ್ರ

ಸಿಂಧನೂರು: ‘ಛಲವಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ’ ಎಂದು ಉಪ್ಪಾರ ಸಮಾಜದ ಮುಖಂಡ ಎಚ್.ವಿ.ಗುಡಿ ಹೇಳಿದರು.

ನಗರದ ಉಪ್ಪಾರವಾಡಿಯ ವೆಂಕಟೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಉಪ್ಪಾರ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ  ಜಯಂತಿ  ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು. ‘ಭಗೀರಥ ಮಹರ್ಷಿ ಗಂಗೆಯನ್ನು ಭೂಮಿಗೆ ತರಲು ತಪಸ್ಸು ಮಾಡಿದರು. ಸತತ ಪ್ರಯತ್ನದಿಂದ ಅದು ಸಾಧ್ಯವಾಯಿತು’ ಎಂದು ಅವರು ಹೇಳಿದರು.

ಮುಖಂಡ ಉಮೇಶ ಗೋಮರ್ಸಿ ಮಾತನಾಡಿ, ‘ಭಗೀರಥ ಮಹರ್ಷಿ ಉಪ್ಪಾರ ಸಮಾಜದವರು ಎಂಬುವುದು ನಮಗೆ ಹೆಮ್ಮೆ. ಭಗೀರಥರ ಸಾಹಸ, ದೈವಭಕ್ತಿ, ಕಠಿಣ ಪರಿಶ್ರಮ, ತಪೋ ನಿಷ್ಠೆ ಸಮಾಜ ಯುವಕರಿಗೆ ಮಾದರಿ’  ಎಂದು ಹೇಳಿದರು.

ಮುಖಂಡರಾದ ಹನುಮಯ್ಯ ಕುರಕುಂದಾ, ಹನುಮೇಶ ಕುರಕಂದಾ, ಸಗರಪ್ಪ ಕಟ್ಟಿಮನಿ, ಛತ್ರಪ್ಪ, ದೇವೇಂದ್ರಪ್ಪ, ವಿಜಯಗುಡಿ, ರಾಮಣ್ಣ ಗುಂಡದ, ತಿಮ್ಮಣ್ಣ ಹೊಗಿಬಂಡಿ, ರಾಮಣ್ಣ ದೇಸಾಯಿ, ಬಸವರಾಜ ಕಟ್ಟಿಮನಿ, ಹನುಮೇಶ ಮರಕಲದಿನ್ನಿ, ಬಸವರಾಜ ಕೆ, ದೇವಪ್ಪ ಅರಳಹಳ್ಳಿ, ಹನುಮೇಶ ಗುಡಿ, ಸುರೇಶ ಗುಡಿ, ಶ್ರೀನಿವಾಸ ಹೊಗಿಬಂಡಿ, ತಿಮ್ಮಣ್ಣ, ಎಚ್.ವೆಂಕಟೇಶ ಉಪ್ಪಾರ, ದೇವರಾಜ ಕುಡತಿನಿ, ಅರುಣ, ಸುರೇಶ ಹೊಸಮನಿ, ರಂಗನಾಥ ಗೋಮರ್ಸಿ, ಧರ್ಮರಾಜ ಉಪ್ಪಾರ, ನರಸಪ್ಪ ಸಸಳ್ಳಿ, ರಾಘವೇಂದ್ರ, ಸೋಮನಾಥ, ರಮೇಶ ಕುಡತಿನಿ, ಕೃಷ್ಣ ಹೊಗಿಬಂಡಿ, ನಾಗರಾಜ ಉಪ್ಪಾರ, ಯಮನೂರ, ನರಸಿಂಹಪ್ಪ, ಗೋಪಾಲ ದೇಸಾಯಿ, ಮಂಜುನಾಥ ಉಪ್ಪಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT