ಉದ್ಯಮಿ ಆನಂದ್ ಅಹುಜಾ ಅವರನ್ನು ವಿವಾಹವಾದ ಬಳಿಕ ನಟಿ ಸೋನಂ ಕಪೂರ್ ತಮ್ಮ ಹೆಸರಿನ ಮುಂದೆ ಪತಿಯ ಹೆಸರನ್ನು ಸೇರಿಸಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.
ಮಹಿಳಾವಾದಿಯಾಗಿ, ಗಂಡನ ಹೆಸರನ್ನು ತನ್ನ ಹೆಸರಿನ ಮುಂದೆ ಸೇರಿಸಿಕೊಂಡಿದ್ದು ತಪ್ಪು ಎಂಬ ಟ್ರೋಲಿಗರ ಮಾತಿಗೆ, ‘ಹೆಸರು ಸೇರಿಸಿಕೊಳ್ಳುವುದು ಅಥವಾ ಬದಲಾಯಿಸಿಕೊಳ್ಳುವುದು ನನ್ನ ಆಯ್ಕೆ’ ಎಂದು ಸೋನಂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘ನಾನು ಈ ಮೊದಲೇ ನಿರ್ಧಾರ ಮಾಡಿದ್ದೆ. ಇದು ನನ್ನ ಆಯ್ಕೆ. ಜನರಿಗೆ ಮಹಿಳಾವಾದದ ಬಗ್ಗೆ ಅರಿವಿಲ್ಲದಿದ್ದರೆ ಆನ್ಲೈನ್ನಲ್ಲಿ ಮಹಿಳಾವಾದದ ಬಗ್ಗೆ ತಿಳಿದುಕೊಳ್ಳಲಿ’ ಎಂದೂ ಅವರು ಹೇಳಿದ್ದಾರೆ.
‘ನಾನು ಮಹಿಳಾವಾದಿಯೇ. ನಾನು ಬಯಸಿದಾಗ ನನ್ನ ಹೆಸರನ್ನು ಬದಲಾಯಿಸಿಕೊಳ್ಳುವ ಹಕ್ಕು ನನಗೆ ಇದೆ. ಕಪೂರ್ ಎಂಬುದು ನನ್ನ ತಂದೆ ಸರ್ನೇಮ್. ನಾನೂ ಎರಡನ್ನೂ ನನ್ನ ಹೆಸರಿನ ಮುಂದೆ ಇಟ್ಟುಕೊಳ್ಳಲು ಬಯಸುತ್ತೇನೆ’ ಎಂದಿದ್ದಾರೆ.
ಈ ವಿವಾದದ ಬೆನ್ನಲ್ಲೇ ಸೋನಂ ಗಂಡ ಆನಂದ್, ಇನ್ಸ್ಟಾಗ್ರಾಂ ಖಾತೆಯ ತನ್ನ ಹೆಸರನ್ನು ಆನಂದ್ ಎಸ್ ಅಹುಜಾ ಎಂದು ಬದಲಾಯಿಸಿಕೊಂಡಿದ್ದಾರೆ. ‘ಎಸ್’ ಎಂಬುದು ಸೋನಂ ಹೆಸರನ್ನು ಸೂಚಿಸುತ್ತಿದೆ ಎನ್ನಲಾಗಿದೆ.