ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಅತ್ಯಧಿಕ ಕಾಲೇಜುಗಳು: ವರದಿ

Published 26 ಜನವರಿ 2024, 15:11 IST
Last Updated 26 ಜನವರಿ 2024, 15:11 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶವು ದೇಶದಲ್ಲಿಯೇ ಅತ್ಯಧಿಕ ಸಂಖ್ಯೆಯ ಕಾಲೇಜುಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಇದರ ನಂತರ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ಇವೆ. ಪ್ರತಿ ಲಕ್ಷ ಜನಸಂಖ್ಯೆಗೆ ಅತಿ ಹೆಚ್ಚು ಕಾಲೇಜುಗಳಿರುವುದು ಕೂಡ ಕರ್ನಾಟಕದಲ್ಲಿಯೇ. 

ಕೇಂದ್ರ ಶಿಕ್ಷಣ ಇಲಾಖೆಯು ಗುರುವಾರ ತಡರಾತ್ರಿ ಬಿಡುಗಡೆ ಮಾಡಿರುವ 2021–22ರ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ (ಎಐಎಸ್‌ಎಚ್‌ಇ) ವರದಿಯಲ್ಲಿ ಈ ಮಾಹಿತಿ ಇದೆ.

ನಂತರದ 4ರಿಂದ 10 ಸ್ಥಾನಗಳಲ್ಲಿ ಕ್ರಮವಾಗಿ ರಾಜಸ್ಥಾನ, ತಮಿಳುನಾಡು, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಗುಜರಾತ್‌, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿವೆ. ಈ ರಾಜ್ಯಗಳಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಕನಿಷ್ಠ 30 ಅಥವಾ ಅದಕ್ಕೂ ಹೆಚ್ಚು ಕಾಲೇಜುಗಳಿವೆ. ಕರ್ನಾಟಕದಲ್ಲಿ ಅತ್ಯಧಿಕ ಅಂದರೆ ಪ್ರತಿ ಲಕ್ಷ ಜನಸಂಖ್ಯೆಗೆ 66 ಕಾಲೇಜುಗಳಿವೆ ಎಂದು ವರದಿ ಉಲ್ಲೇಖಿಸಿದೆ.

ಉತ್ತರ ಪ್ರದೇಶದಲ್ಲಿ 8,375 ಕಾಲೇಜುಗಳಿದ್ದು, ಕಳೆದ ಬಾರಿ 8,114 ಕಾಲೇಜುಗಳನ್ನು ಹೊಂದಿತ್ತು. ಈ ರಾಜ್ಯದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 30 ಕಾಲೇಜುಗಳಿವೆ. ಮಹಾರಾಷ್ಟ್ರದಲ್ಲಿ 4,692, ಕರ್ನಾಟಕದಲ್ಲಿ 4,430, ರಾಜಸ್ಥಾನದಲ್ಲಿ 3,934, ತಮಿಳುನಾಡಿನಲ್ಲಿ 2,829 ಕಾಲೇಜುಗಳಿವೆ.

ಮಾನ್ಯತೆ ಪಡೆದಿರುವ 328 ವಿಶ್ವವಿದ್ಯಾಲಯಗಳ 45,473 ಕಾಲೇಜುಗಳು ಎಐಎಸ್‌ಎಚ್‌ಇ ಅಡಿಯಲ್ಲಿ ನೋಂದಣಿ ಆಗಿವೆ. ಈ ಪೈಕಿ 42,825 ಕಾಲೇಜುಗಳು 2021–22ರ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿವೆ. ಪ್ರತಿಕ್ರಿಯಿಸಿರುವ ಕಾಲೇಜುಗಳ ಪೈಕಿ 14,197 ಕಾಲೇಜುಗಳು ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸುತ್ತಿವೆ ಮತ್ತು ಅಲ್ಲಿ 1,063 ವಿದ್ಯಾರ್ಥಿಗಳು ಪಿಎಚ್‌.ಡಿಗಾಗಿ ನೋಂದಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮುಖ್ಯಾಂಶಗಳು

  • ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ವರದಿ

  • ಕರ್ನಾಟಕದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 66 ಕಾಲೇಜುಗಳು

  • ಸಮೀಕ್ಷೆಗೆ ಒಳಪಟ್ಟ 42,825 ಕಾಲೇಜುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT