ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ಆ‌ರ್‌ಡಿ ಸಂಖ್ಯೆ ತಿದ್ದುಪಡಿಗೆ ಅವಕಾಶ

Published 8 ಮೇ 2024, 15:38 IST
Last Updated 8 ಮೇ 2024, 15:38 IST
ಅಕ್ಷರ ಗಾತ್ರ

ಬೆಂಗಳೂರು; ಸಿಇಟಿ-2024ರ ಆನ್‌ಲೈನ್‌ ಅರ್ಜಿಯಲ್ಲಿ ಕಂದಾಯ ದಾಖಲೆ (ಆ‌ರ್‌ಡಿ) ಸಂಖ್ಯೆ ಹಾಗೂ ಇನ್ನಿತರ ಕ್ಲೇಮುಗಳ ತಿದ್ದುಪಡಿಗೆ ಮೇ 9ರ ಬೆಳಿಗ್ಗೆ 11ರಿಂದ ಮೇ 15ರ ರಾತ್ರಿ 11.59 ರವರೆಗೆ ಅಂತಿಮ ಅವಕಾಶ ನೀಡಲಾಗಿದೆ. 

ಅರ್ಹತಾ ಕಂಡಿಕೆ, ಪ್ರವರ್ಗ ಮೀಸಲಾತಿ, ವಾರ್ಷಿಕ ಆದಾಯ, ಹೈದರಾಬಾದ್ ಕರ್ನಾಟಕ ಮೀಸಲಾತಿ 371(ಜೆ), ಕನ್ನಡ ಮಾಧ್ಯಮ, ಗ್ರಾಮೀಣ ಮಾಧ್ಯಮ, ವಿಶೇಷ ಪ್ರವರ್ಗಕ್ಕೆ ಸೇರಿದಂತೆ ತಾವು ಸಲ್ಲಿಸಿರುವ ಅರ್ಜಿಯಲ್ಲಿ ಮಾಡಿರುವ ಕ್ಲೇಮುಗಳನ್ನು ಅಭ್ಯರ್ಥಿಗಳು ಪರಿಶೀಲಿಸಿ, ಅಗತ್ಯವಿದ್ದರೆ ತಿದ್ದುಪಡಿ ಮಾಡಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಅಭ್ಯರ್ಥಿಗಳು ಎಚ್ಚರದಿಂದ ಸರಿಯಾದ ಆರ್‌ಡಿ ಸಂಖ್ಯೆಯನ್ನು ಆನ್‌ಲೈನ್ ಅರ್ಜಿಯಲ್ಲಿ ದಾಖಲಿಸಬೇಕು. ಆರ್‌ಡಿ ಸಂಬಂಧಿತ ಎಲ್ಲಾ ಪ್ರಮಾಣ ಪತ್ರಗಳಿಗೆ ಇದು ಅನ್ವಯಿಸಲಿದ್ದು, ಆರ್‌ಡಿ ಸಂಖ್ಯೆ ತಾಳೆಯಾಗದಿದ್ದಲ್ಲಿ, ಸಂಬಂಧಿಸಿದ ಮೀಸಲಾತಿಯ ಅರ್ಹತೆ ಲಭ್ಯವಾಗುವುದಿಲ್ಲ. ವೈದ್ಯಕೀಯ, ದಂತ ವೈದ್ಯಕೀಯ ಪ್ರವೇಶಾತಿಗೆ ಅನ್ವಯಿಸುವಂತೆ ಅಲ್ಪಸಂಖ್ಯಾತ ಮೀಸಲಾತಿಗಳನ್ನೂ ಸಹ ಕ್ಲೇಮ್ ಮಾಡಬಹುದು ಎಂದು  ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT