ನಾಗರಬಾವಿಯಿಂದ ಬೆಂಗಳೂರು ವಿವಿಯ ಒಳಗೆ ತಿರುಗಿದರೆ ಅದೆಲ್ಲವೂ ಕಾಡಿನ ಜಾಗ. ಸ್ವಲ್ಪ ವರ್ಷಗಳ ಹಿಂದೆ ಸಂಜೆಯಾದರೆ ಅಲ್ಲಿ ಓಡಾಡಲಿಕ್ಕೆ ಜನ ಹೆದರುತ್ತಿದ್ದರು. ದೊಡ್ಡದೊಂದು ರಾಜಕಾಲುವೆ ಇದೆ. ದಿನಾ ನಾನು ಓಡಾಡುವ ರಸ್ತೆಯೇ ಆದ್ದರಿಂದ ರಾಜಕಾಲುವೆ ಬಂದಾಗ ಬೆಂಗಳೂರಿನ ಕೊಳಚೆಯ ವಾಸನೆ ಮೂಗಿಗೆ ಬಡಿದು ಮೂಗು ಮುಚ್ಚಿಕೊಳ್ಳುತ್ತಿದ್ದೆ. ಹಾಗಾಗಿ ಆ ಜಾಗ ಬರುವಾಗಲೆಲ್ಲ ನನ್ನ ತಲೆಯಲ್ಲಿ ಏನೋ ವಿಷಯ ಓಡುತ್ತಲೇ ಇರುತ್ತಿತ್ತು. ಹಾಗೆ ಯೋಚಿಸುತ್ತಲೆ ಮುಂದಕ್ಕೆ ಬಂದೆ. ಒಬ್ಬ ಪುಟ್ಟ ಹುಡುಗ ಕೈಲಿ ಚೀಲ ಹಿಡಿದು ಫುಟ್ಪಾತ್ ಮೇಲೆ ನಿಂತಿದ್ದ.

ಅಲ್ಲೇ ರಸ್ತೆಯ ಮೇಲೆ ಸುಮಾರು ಮೂವತ್ತೆಂಟು ವರ್ಷದ ವ್ಯಕ್ತಿಯೊಬ್ಬರು ಒಂದು ಕೋಲನ್ನು ಹಿಡಿದು ಅಲ್ಲೊಂದು ನೀರು ಹರಿಯಲಿಕ್ಕೆ ಕಾಂಕ್ರೀಟ್ನಲ್ಲೇ ಚಿಕ್ಕ ಚಿಕ್ಕ ಜಾಗ ಮಾಡಿದ್ದರು. ಅದನ್ನು ಕೆದಕುತ್ತಾ ಸ್ವಚ್ಚ ಮಾಡುತ್ತಾ ನಿಂತಿದ್ದರು. ನಾನು ಸ್ವಲ್ಪ ದೂರ ಮುಂದೆ ಹೋಗಿಬಿಟ್ಟೆ. ಆಗ ನನಗನ್ನಿಸಿತು ಅವರು ಆ ಕೆಲಸಕ್ಕಾಗಿ ನಿಯೋಜಿಸಿದವರಲ್ಲ ಎಂದು. ತಕ್ಷಣ ವಾಪಾಸು ಬಂದು, ‘ಸರ್ ನನಗೆ ಗೊತ್ತು ನೀವು ಈ ಕೆಲಸ ಮಾಡಲಿಕ್ಕೆ ನಿಯೋಜಿಸಿದವರಲ್ಲ ಏನು ಮಾಡ್ತ ಇದೀರ’ ಎಂದು ಅವರನ್ನು ಮಾತನಾಡಿಸಿದೆ.

ಮೇಡಂ ನಾವು ಇಲ್ಲಿಗೆ 23–24 ವರ್ಷಗಳಿಂದ ವಾಕಿಂಗ್ ಬರ್ತಾ ಇದೀನಿ. ಮಳೆ ಬಂದಾಗ ನೀರು ಸುಮ್ಮನೆ ಹರಿದು ಹೊರಟು ಹೋಗುತ್ತೆ. ಅದಕ್ಕೆ ದಾರಿ ಮಾಡಿಕೊಡ್ತಾ ಇದೀನಿ ಎಂದರು. ಸ್ವತಃ ರೈತಳೇ ಆಗಿದ್ದ ನನಗೆ ಗಿಡಕ್ಕೆ ನೀರು ಹೋದರೆ ಅದು ಹಿಡಿದಿಡುತ್ತೆ ಒಳ್ಳೆಯದು ಎಂದು ಗೊತ್ತಿದ್ದರೂ ಇವರ ಉತ್ತರ ಬೇರೆ ಇರಬಹುದು ಅನ್ನಿಸಿ, ‘ಇಲ್ಲಾದರೂ ನೀರು ಇಂಗುವುದೇ, ಅಲ್ಲದರೂ ಅಷ್ಟೇ ಅಲ್ಲವೇ?’ ಅಂದೆ. ಅದಕ್ಕವರು, ‘ಈ ಜಾಗದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅಂತರ್ಜಲ ಮಟ್ಟ ಕುಸಿಯಲಿಕ್ಕೆ ನಾವೇ ಕಾರಣವೇ ಹೊರತು ಬೇರೆ ಯಾರೂ ಅಲ್ಲ. ನಾವೇ ನೀರನ್ನು ಎಲ್ಲಿಗೆ ಹರಿಯಲು ಬಿಡಬೇಕೋ ಅದನ್ನು ಪ್ಲಾನ್ ಮಾಡುತ್ತಿಲ್ಲ. ಈ ಜಾಗದಲ್ಲಿ ನಾಲ್ಕು ಕೆರೆಗಳಿದ್ದವು. ಅಲ್ಲೀಗ ಹೂಳೆತ್ತುವವರೂ ಇಲ್ಲ. ಕಡೇ ಪಕ್ಷ ಆ ಜಾಗಕ್ಕೆ ನೀರು ಸೇರಿದರೂ ಸಾಕಲ್ಲವೇ? ಅಂತರ್ಜಲ ಮಟ್ಟ ಏರಿಬಿಡುತ್ತೆ’ ಎಂದರು.

ಕೆರೆಗಳನ್ನು ಮುಚ್ಚಿ ಅದರ ಮೇಲೆ ಮನೆ ಕಟ್ಟುತ್ತಿರುವವರ ಮಧ್ಯೆ ಕೆರೆಗಳ ಲೆಕ್ಕ ಇಡುವವರು ಯಾರು? ಹೂಳೆತ್ತದೆ ಮುಚ್ಚಿ ಹೋದ ಕೆರೆಗಳೆಷ್ಟೋ ಗೊತ್ತಿರುವುದು ಯಾರಿಗೆ? ಇವರಿಗೆಂಥಾ ಕಾಳಜಿ... ಆ ವ್ಯಕ್ತಿಯ ಬಗ್ಗೆ ಕುತೂಹಲ ಅನ್ನಿಸಿ, ‘ನೀವೇನು ಮಾಡ್ತ ಇದೀರಾ?’ ಎಂದು ವಿಚಾರಿಸಿದೆ. ಅವರು ಒಬ್ಬ ಸಾಮಾಜಿಕ ಕಾರ್ಯಕರ್ತ. ಹೆಸರು ವೆಂಕಟೇಶ್ ಗೌಡ, ಬುಲೆಟ್ ವೆಂಕಟೇಶ್ ಎಂದೇ ಪರಿಚಿತರು. ಗೋವಿಂದರಾಜ ನಗರ ಕ್ಷೇತ್ರದಲ್ಲಿ ಪಕ್ಷವೊಂದರ ಉಪಾಧ್ಯಕ್ಷ ಕೂಡಾ. ರಾಜಕೀಯ ಮಾಡಿಕೊಂಡು ಇರುವವರಿಗೆ ಇಂಥಾ ಪುಟ್ಟದೊಂದು ಸಾಮಾಜಿಕ ಮತ್ತು ಪರಿಸರದ ಕಾಳಜಿ ಇದ್ದರೆ ಎಂಥಾ ದೊಡ್ಡ ಬದಲಾವಣೆ ಬಂದುಬಿಡುತ್ತದೆ ಅಲ್ಲವೇ? ಬುಲೆಟ್ ವೆಂಕಟೇಶ್ ಅವರಿಗೆ ಸಕಲ ಜೀವರಾಶಿಗಳ ಪರವಾಗಿ ಪ್ರೀತಿಯ ನಮಸ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.