ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬರ್ ಕಪ್ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್‌: ಜಪಾನ್‌ಗೆ ಮಣಿದ ಭಾರತ 

Published 2 ಮೇ 2024, 16:26 IST
Last Updated 2 ಮೇ 2024, 16:26 IST
ಅಕ್ಷರ ಗಾತ್ರ

ಚೆಂಗ್ಡು (ಚೀನಾ): ಯುವ ಮತ್ತು ಅನನುಭವಿ ಆಟಗಾರ್ತಿಯರಿದ್ದ ಭಾರತ ತಂಡ ಉಬರ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಗುರುವಾರ ಪ್ರಬಲ ಜಪಾನ್ ಎದುರು 0-3 ಅಂತರದಲ್ಲಿ ಸೋಲನುಭವಿಸಿತು.  

ಅನುಭವಿ ಪಿ.ವಿ.ಸಿಂಧು ಅವರ ಗೈರುಹಾಜರಿಯಲ್ಲಿ, ಗುಂಪು ಹಂತದಲ್ಲಿ ಕೆನಡ ಮತ್ತು ಸಿಂಗಪುರ ವಿರುದ್ಧ ಎರಡು ಗೆಲುವುಗಳೊಂದಿಗೆ ಭಾರತ ನಾಕೌಟ್‌ಗೆ ಅರ್ಹತೆ ಪಡೆದಿತ್ತು. ಆದರೆ ಗುಂಪು ಹಂತದ ಅಂತಿಮ ಲೀಗ್ ಪಂದ್ಯದಲ್ಲಿ ಬಲಿಷ್ಠ ಚೀನಾ ವಿರುದ್ಧ 0-5 ಸೋಲು ಅನುಭವಿಸಿತ್ತು. 

ಗುರುವಾರ ನಡೆದ ಪಂದ್ಯದಲ್ಲಿ ಭಾರತ, ಜಪಾನ್ ವಿರುದ್ಧ ಹೋರಾಟ ನಡೆಸಿತು. ಅಶ್ಮಿತಾ ಚಾಲಿಹಾ ಮತ್ತು ಇಶಾರಾಣಿ ಬರೂವಾ ತಮ್ಮ ಸಿಂಗಲ್ಸ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು.  

67 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ 53ನೇ ಕ್ರಮಾಂಕದ ಅಶ್ಮಿತಾ, 11ನೇ ಕ್ರಮಾಂಕದ ಆಟಗಾರ್ತಿ ಅಯಾ ಒಹೊರಿ ಎದುರು 10-21, 22-20, 15-21 ಅಂತರದಲ್ಲಿ ಸೋಲನುಭವಿಸಿದರು. 

83ನೇ ಕ್ರಮಾಂಕದ ಇಶಾರಾಣಿ, ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ನೊಜೊಮಿ ಒಕುಹರಾ ವಿರುದ್ಧ 15-21, 12-21 ಅಂತರದಲ್ಲಿ ಸೋತರು.

ರಾಷ್ಟ್ರೀಯ ಚಾಂಪಿಯನ್ ಪ್ರಿಯಾ ಕೊಂಜೆಂಗ್ಬಾಮ್ ಮತ್ತು ಶ್ರುತಿ ಮಿಶ್ರಾ ಅವರು ವಿಶ್ವದ ನಾಲ್ಕನೇ ಕ್ರಮಾಂಕದ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿಡಾ ವಿರುದ್ಧ 8-21, 9-21 ಅಂತರದಲ್ಲಿ ಸೋಲನುಭವಿಸಿದರು.

ಉಬರ್ ಕಪ್‌ನಲ್ಲಿ ಭಾರತ 1957, 2014 ಮತ್ತು 2016ರಲ್ಲಿ ಸೆಮಿಫೈನಲ್ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT