ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಅನ್ನು 28 ರನ್ಗಳಿಂದ ಸೋಲಿಸಿತು.
ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈ ಮೊದಲು ಬ್ಯಾಟ್ ಮಾಡಿತು.
ನಿಗದಿತ 20 ಓವರ್ಗಳಲ್ಲಿ ಚೆನ್ನೈ 9 ವಿಕೆಟ್ ಕಳೆದುಕೊಂಡು 167 ರನ್ ಪೇರಿಸಿತು. ಆದರೆ ಪಂಜಾಬ್ ತಂಡ 9 ವಿಕೆಟ್ ಕಳೆದುಕೊಂಡು 139 ರನ್ ಮಾತ್ರ ಗಳಿಸಿತು.