ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಎಲ್ಲ ಅಕಾಡೆಮಿಗಳ ವಾರ್ಷಿಕ ಪ್ರಶಸ್ತಿ ಮೊತ್ತವನ್ನು 2015–16ನೇ ಸಾಲಿನಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.
ಹೀಗಾಗಿ ಅಕಾಡೆಮಿಗಳು ನೀಡುವ ಗೌರವ ಪ್ರಶಸ್ತಿ ತಲಾ ರೂ. 50 ಸಾವಿರ, ಪುಸ್ತಕ ಪ್ರಶಸ್ತಿ ರೂ. 25 ಸಾವಿರ ಹಾಗೂ ವಾರ್ಷಿಕ ಪ್ರಶಸ್ತಿ ಮೊತ್ತ ರೂ. 25 ಸಾವಿರಕ್ಕೆ ಏರಲಿದೆ.