ಬುಡಾಪೆಸ್ಟ್ (ಪಿಟಿಐ): ಕರ್ನಾಟಕದ ಭರವಸೆಯ ಮೋಟಾರು ಸಾಹಸಿ ಅರ್ಜುನ್ ಮೈನಿ ಅವರು ಇಲ್ಲಿ ನಡೆದ ಜಿಪಿ3 ಸೀರಿಸ್ ರೇಸ್‌ನಲ್ಲಿ ಒಟ್ಟಾರೆ ಎರಡನೇ ಸ್ಥಾನ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ಅರ್ಜುನ್ ಈ ಸಾಧನೆ ಮಾಡಿದ ಭಾರತದ ಮೊದಲ ಚಾಲಕ ಎಂಬ ಗೌರವ ಪಡೆದಿದ್ದಾರೆ.

ಮೊದಲ ಲ್ಯಾಪ್‌ನ ಆರಂಭದಿಂದಲೇ ಅಮೋಘ ಚಾಲನಾ ಕೌಶಲ ಪ್ರದರ್ಶಿಸಿದ ಅರ್ಜುನ್ 1 ಗಂಟೆ 36 ನಿಮಿಷ 844 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಎಂಟನೇ ಸ್ಥಾನ ಗಳಿಸಿದರು.

ಎರಡನೇ ಲ್ಯಾಪ್‌ನಲ್ಲಿ ಅರ್ಜುನ್ ಮತ್ತು ಅಲೆಕ್ಸಾಂಡರ್ ಅಲ್ಬನ್ ಅವರ ನಡುವೆ ತುರುಸಿನ ಪೈಪೋಟಿ ಏರ್ಪ ಟ್ಟಿತ್ತು. ಇದರ ನಡುವೆಯೂ ಮಿಂಚಿನ ಸಾಮರ್ಥ್ಯ ತೋರಿದ ಅರ್ಜುನ್ ‘ಪೋಲ್ ಪೊಷಿಸನ್’ ನೊಂದಿಗೆ ಸ್ಪರ್ಧೆ ಕೊನೆಗೊಳಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.