ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ಆಟಿಸಂ’ ಜಾಗೃತಿ ದಿನಾಚರಣೆ

ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ: ಚಿಕಿತ್ಸೆಗೆ ವೈದ್ಯರ ಕೊರತೆ
Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್‌ಎಸ್‌): ದೇಶ­ದಲ್ಲಿ ‘ಆಟಿಸಂ’ ಕಾಯಿ­ಲೆಗೆ ಬಲಿ­ಯಾ­­ಗು­­ತ್ತಿ­­­­ರುವವರ ಸಂಖ್ಯೆ ದಿನ­ದಿಂದ ದಿನಕ್ಕೆ ಹೆಚ್ಚು­­­ತ್ತಿದ್ದು, ಈ ರೋಗಕ್ಕೆ ಚಿಕಿತ್ಸೆ ನೀಡಲು ಪರಿಣತ ವೈದ್ಯರ ಕೊರತೆ­ ಇದೆ. ಜತೆಗೆ ಈ ಕಾಯಿಲೆ­ಯನ್ನು ಹಲವರು ‘ಬುದ್ದಿ­­ಮಾಂದ್ಯ’ ಎಂದು ತಪ್ಪಾಗಿ ಪರಿಗಣಿಸುತ್ತಿ­ದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ 40 ಲಕ್ಷಕ್ಕಿಂತಲೂ ಅಧಿಕ ‘ಆಟಿಸಂ’ ರೋಗಿಗಳಿದ್ದಾರೆ. ಹಾಗಿದ್ದೂ ಈ ಕಾಯಿಲೆಯ ಬಗೆಗಿನ ಅರಿವು ಮಾತ್ರ ತುಂಬ ಕಡಿಮೆ ಇದೆ’ ಎಂದು ಅವರು ಹೇಳಿದ್ದಾರೆ.

‘ಆಟಿಸಂ ಕಾಯಿಲೆಗೆ ಸರಿಯಾದ ಚಿಕಿತ್ಸೆ­ಯನ್ನು ನೀಡುವ ವೈದ್ಯರು ಕೇವಲ ಬೆರಳೆಣಿ­ಕೆಯಷ್ಟಿದ್ದಾರೆ. ಈಗ ಆಟಿಸಂ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ತಜ್ಞ ವೈದ್ಯರ ಅವಶ್ಯಕತೆ ಇದೆ’ ಎಂದು  ಅಂಗ­ವಿಕಲರ ಕೇಂದ್ರ ‘ಉಡಾನ್‌’ನ ನಿರ್ದೇ­ಶಕ ಅರುಣ ಮುಖರ್ಜಿ ಹೇಳುತ್ತಾರೆ.
2001ರಲ್ಲಿ ಕೇಂದ್ರ ಸರ್ಕಾರ ಆಟಿಸಂ ಕಾಯಿಲೆಯನ್ನು ಗುರ್ತಿಸಿದೆ.

‘ಬಹು­ತೇ­ಕರು ಆಟಿಸಂ ಅನ್ನು ಮಾನಸಿಕ ಕಾಯಿಲೆ ಎಂದೇ ಪರಿಗಣಿಸು­ತ್ತಾರೆ. ಈ ದೃಷ್ಟಿ­­ಕೋನ ಬದಲಾಗ­ಬೇಕಿದೆ. ಈ ಅಜ್ಞಾ­ನ­­ದಿಂದ ಪಾಲಕರು ಈ ಕಾಯಿ­ಲೆಯ ಚಿಕಿತ್ಸೆಗೆ ಬೇಕಾಗಿರು­ವಷ್ಟು ಮಹ­ತ್ವವನ್ನು ನೀಡುವುದೇ ಇಲ್ಲ’ ಎಂದು  ‘ತಮನ’ ಆಟಿಸಂ ಕೇಂದ್ರ ಮತ್ತು ಸ್ಕೂಲ್‌ ಆಫ್‌ ಹೋಪ್‌ನ ಪ್ರಾಂಶು­­ಪಾಲ­ರಾದ ಉಷಾ ವರ್ಮಾ ಅಭಿಪ್ರಾಯ­ಪಡು­ತ್ತಾರೆ.

‘ಆಟಿಸಂಗೆ ಬಹುಶಿಸ್ತೀಯ ವಿಧಾನದ ಮೂಲಕ  ಚಿಕಿತ್ಸೆ ನೀಡಲಾಗುತ್ತದೆ. ಈ ಕಾಯಿ­ಲೆ­ಗಳಲ್ಲಿ ಹಲವು ಹಂತಗಳಿವೆ. ಆದ್ದರಿ­ಂದ ರೋಗ ಯಾವ ಹಂತದಲ್ಲಿದೆ ಎಂಬು­ದನ್ನು ಆಧರಿಸಿ ಅದಕ್ಕೆ ಚಿಕಿತ್ಸೆ­ಯನ್ನು ನೀಡಲಾಗುತ್ತದೆ’ ಎಂದು ಫೊರ್ಟಿಸ್‌ ಆಸ್ಪತ್ರೆಯ ಮಾನಸಿಕ ಆರೋಗ್ಯ ಮತ್ತು ವರ್ತನಾ ವಿಜ್ಞಾನ ವಿಭಾ­ಗದ ನಿರ್ದೇಶಕ ಸಮೀರ್‌ ಪಾರಿಖ್‌ ವಿವರಿಸುತ್ತಾರೆ.

‘ಆಟಿ­ಸಂಗೆ ತುತ್ತಾದವರು ಇತರ ಜನ­­ರೊ­­­ಡನೆ ಸಂವಹಿಸುವುದು ಮತ್ತು ಸಂವಾ­­­ದಿ­ಸುವುದು ಕಷ್ಟವಾಗು­ತ್ತದೆ. ಆಟಿಸಂಗೆ ತುತ್ತಾದವರು ಇತರ ಜನ­­ರೊ­ಡನೆ ಸಂವಹಿಸುವುದು ಮತ್ತು ಸಂವಾ­ದಿಸುವುದು ಕಷ್ಟವಾಗು­ತ್ತದೆ’ ಎಂದು  ಪಾರಿಖ್‌ ಹೇಳುತ್ತಾರೆ.

ಏನಿದು ಆಟಿಸಂ..?
ಆಟಿಸಂ ಮಿದುಳಿನ ಕಾರ್ಯದ ಮೇಲೆ ಪರಿಣಾಮ ಬೀರುವ ಕಾಯಿಲೆ. ಇದ­­ರಿಂದ ದೇಹದ ವಿವಿಧ ಜ್ಞಾನಗ್ರಂಥಿಗಳು ನೀಡುವ ಮಾಹಿತಿಯನ್ನು ಸಂಸ್ಕ­ರಿ­ಸುವ ಮಿದುಳಿನ ಕ್ರಿಯೆಗೆ ಅಡ್ಡಿಯುಂಟಾಗುತ್ತದೆ. ಗಿರಕಿ ಹೊಡೆ­ಯು­ವುದು, ಕೈಗಳನ್ನು ಜೋರಾಗಿ ತಿರುಗಿಸು­ವುದು, ತಮ್ಮ­ಷ್ಟಕ್ಕೆ ತಾವೇ ಮಾತನಾಡಿ­ಕೊಳ್ಳು­ವುದು, ನಿರಂತರ­ವಾಗಿ ಜಿಗಿಯುವುದು, ಅತಿ­ಯಾದ ಕ್ರಿಯಾ­­ಶೀಲತೆ ಮತ್ತು ಚಂಚ­ಲತೆ ಈ ರೋಗದ ಲಕ್ಷಣ­­ಗಳು. ಇದು ಅವರ ಮಾತು, ಭಾಷೆ, ಸಾಮಾ­ಜಿಕ ಸಂವಹನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT