ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಾತ್ತ ಚಿಂತನೆಯಿಂದ ಮಾನವನ ವಿಕಾಸ

ಕಾರ್ಕಳದಲ್ಲಿ ಗಾಂಧಿ ಜಯಂತಿ: ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯ
Last Updated 3 ಅಕ್ಟೋಬರ್ 2015, 5:27 IST
ಅಕ್ಷರ ಗಾತ್ರ

ಕಾರ್ಕಳ: ಉದಾತ್ತ ಚಿಂತನೆಗಳನ್ನು ನಮ್ಮದಾಗಿಸಿಕೊಂಡಾಗ ಮಾನವನ ವಿಕಾಸ. ಅದು ಸಾಧ್ಯವಾಗಲು ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ಓದಿ, ಎಲ್ಲಾ ಕಡೆಯಿಂದಲೂ ಬರುವ ಉತ್ತಮ ವಿಚಾರಗಳನ್ನು ನಮ್ಮದಾಗಿಸಿಕೊಳ್ಳ ಬೇಕು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇ ಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ನಗರದ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ಗಾಂಧಿ ಜಯಂತಿ ಹಾಗೂ ೪೨ನೇ ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರವನ್ನು ಉದ್ಘಾಟಿಸಿ ’ಯುವಶಕ್ತಿಯ ರಹಸ್ಯ: ಸ್ವಾಮೀ ವಿವೇಕಾನಂದರ ವಿಶ್ಲೇಷಣೆ’ ಕುರಿತು ಉಪನ್ಯಾಸ ನೀಡಿದ ಅವರು, ಜೀವನವನ್ನು ಅದ್ಭುತ ಸವಾಲು ಎಂದು ಪರಿಗಣಿಸಿ, ಸವಾಲಾಗಿ ತೆಗೆದುಕೊಂಡು ಅದು ಹೂವಿನ ಹಾಸಿಗೆ ಎಂದು ನಿರ್ಲಕ್ಷಿಸದೆ ನಿರಂತರ ಹೋರಾಟ ಎಂದು ಪರಿಗಣಿಸಬೇಕು.

ಬದುಕು ಮಳ್ಳಿನ ಹಾಸಿಗೆಯೂ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಜೀವನದಲ್ಲಿ ಸೋತು ಕೆಳಕ್ಕೆ ಬಿದ್ದಾಗ ಅದರ ಕಾರಣವನ್ನು ಪತ್ತೆಹಚ್ಚಿ, ಅದ ರಿಂದ ಮೇಲೆದ್ದು ಸೋಲುಗಳ ನಡುವೆ ಉತ್ಸಾಹ ಬತ್ತದಂತೆ ನೋಡಿಕೊಳ್ಳ ಬೇಕು. ಗೆಲುವಿನ ಉತ್ಸುಕತೆ, ಸೋಲಿನ ಹತಾಶೆಯ ಮೆಟ್ಟಲಿನ ಮೇಲೆ ಇರುವಂತೆ ನೋಡಬೇಕು. ಜೀವನವೆಂಬ ಭವ್ಯ ಕಟ್ಟಡದ ಅಡಿಪಾಯವೇ ಯೌವನ. ಈ ವಯಸ್ಸಿನಲ್ಲಿ ನಮ್ಮ ಜೀವನ ಪ್ರಕೃತಿ ದತ್ತವಾದ ಲಕ್ಷಣಗಳನ್ನು ಮರೆಯ ಬಾರದು. ಪ್ರಕೃತಿದತ್ತವಾದ ಸ್ತ್ರೀತ್ವವನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ದೊಡ್ಡ ಹೊಡೆತ ಬೀಳುವ ಅಪಾಯವಿದೆ ಎಂದರು.

ಯೇಳಜಿತ ಸಿದ್ಧಿವಿನಾಯಕ ಸಾಂಸ್ಕೃ ತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಅವರ ಪುಸ್ತಕ ‘ಶ್ರದ್ಧಾ ಮೇಧಾ’ ವನ್ನು ಅನಾವರಣಗೊಳಿಸಲಾಯಿತು. ಕಾಲೇಜು ಆಡಳಿತ ಮಂಡಳಿ ಸದಸ್ಯ ಪ್ರೊ.ಎಂ.ರಾಮಚಂದ್ರ, ಪದವಿ ಕಾಲೇ ಜಿನ ಪ್ರಾಂಶುಪಾಲ ಡಾ.ಪಿ.ವೆಂಕಟ್ರಮಣ ಗೌಡ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್.ಸಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಪುರಾಣಿಕ್ ಉಪಸ್ಥಿತರಿದ್ದರು.

ಶಿಬಿರದ ಸಂಯೋಜಕರಾದ ಡಾ.ದೇವಿದಾಸ್ ನಾಯಕ್ ಸ್ವಾಗತಿಸಿ ದರು. ಕಾರ್ಯದರ್ಶಿ ಸಂತೋಷ್ ವಂದಿಸಿದರು. ವಿದ್ಯಾರ್ಥಿನಿ ಅನ್ನಪೂರ್ಣ ನಿರೂಪಿಸಿದರು. ಯೇಳಜಿತ ಸಿದ್ಧಿವಿನಾಯಕ ಸಾಂಸ್ಕೃ ತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ‘ಯುವಜನತೆಗೆ ಗೀತೆಯ ಸಂದೇಶ ಗಳು’ ಎಂಬ ಕುರಿತು, ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ  ’ಬುದ್ಧ- ಬಸವ-ಗಾಂಧಿ, ಅಸೀಮ ಚಿಂತನೆಗಳು’ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT