ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೇಶಪೂರ್ವಕ ಸುಸ್ತಿದಾರರ ವ್ಯಾಖ್ಯೆ ಬದಲು: ಆರ್‌ಬಿಐ

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸಾಲ ಬಾಕಿ ಉಳಿಸಿಕೊಳ್ಳುವ ಕಂಪೆನಿಗಳ ನಿರ್ದೇಶಕ­ರನ್ನು ತನ್ನ ಪರಿಧಿಯೊಳಗೆ ತರುವ ಸಲು­ವಾಗಿ ‘ಉದ್ದೇಶಪೂರ್ವಕ ಸುಸ್ತಿದಾರ’ರ  ವ್ಯಾಖ್ಯೆಯನ್ನು ಮಾರ್ಪಾಡು ಮಾಡು­ತ್ತಿ­ರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ರಘುರಾಮ್ ರಾಜನ್‌ ಪ್ರಕಟಿಸಿದ್ದಾರೆ.

‘ಎಲ್ಲಾ ನಿರ್ದೇಶಕರನ್ನೂ ಉದ್ದೇಶ­ಪೂರ್ವಕ ಸುಸ್ತಿದಾರರೆಂದು ಘೋಷಿಸ­ಬಹುದೇ ಎಂಬುದರ ಕುರಿತು ಕಲ್ಕತ್ತಾ ಹೈಕೋರ್ಟ್‌ ಕೆಲವು ಪ್ರಶ್ನೆಗಳನ್ನು ಮುಂದಿ­ಟ್ಟಿದೆ. ಅದರ ಕುರಿತು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಉದ್ದೇಶ­ಪೂರ್ವಕವಾಗಿ ಸುಸ್ತಿ ಉಳಿಸಿಕೊಂಡು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾದವರ ಅಥವಾ ಆ ಚಟುವಟಿಕೆಯಲ್ಲಿ ತೊಡ­ಗಿರುವ ನಿರ್ದೇಶಕರು ಶಿಕ್ಷಾರ್ಹರು ಎಂದು ವ್ಯಾಖ್ಯಾನವನ್ನು ಬದಲಿಸುವ ಪ್ರಕ್ರಿಯೆಯೂ ನಡೆದಿದೆ’ ಎಂದು ರಾಜನ್‌ ತಿಳಿಸಿದ್ದಾರೆ.

ಪ್ರಸ್ತುತ ವ್ಯಾಖ್ಯಾನದ ಪ್ರಕಾರ, ಉದ್ದೇಶಪೂರ್ವಕ ಸುಸ್ತಿದಾರನು, ತಾನು ತೆಗೆದುಕೊಂಡ ಹಣವನ್ನು ಅದೇ ಉದ್ದೇ­ಶಕ್ಕೆ ಬಳಸದವನು ಅಥವಾ  ಹಣ­ವನ್ನು ಬೇರೆ ಉದ್ದೇಶಕ್ಕೆ ಬಳಸಿ­ದಾಗ ಅಥವಾ ಬ್ಯಾಂಕ್‌ನ ಗಮನಕ್ಕೆ ತಾರದೆಯೇ ಸಾಲ ತೆಗೆದುಕೊಳ್ಳಲು ಅಡವಿಟ್ಟ ಸಂಪತ್ತನ್ನು ನಾಶಪಡಿಸಿ, ಸುಸ್ಥಿ ಮರುಪಾವತಿ ಮಾಡದೆ ಉಳಿಸಿಕೊಳ್ಳು­ವವನಾಗಿದ್ದಾನೆ. ಮರುಪಾವತಿಗೆ ನಿರಾ­ಕ­ರಿ­ಸುವ ಮತ್ತು ಇಡೀ ಮರುಪಾವತಿ ಪ್ರಕ್ರಿಯೆಗೆ ಅಡಚಣೆ ಉಂಟುಮಾಡುವ ಅಸಹಕಾರಿ ಸುಸ್ತಿದಾರರನ್ನು ಎದುರಿ­ಸಲು ಮಾರ್ಗ­ದರ್ಶಿಯನ್ನು ರಚಿಸಲಾ­ಗಿದೆ ಎಂದು ರಾಜನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT