ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತಿ ಸಂಸ್ಥೆ ಉದ್ಯೋಗ

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಉನ್ನತಿ ಸಂಸ್ಥೆಯು ಉಚಿತವಾಗಿ ಎಪ್ಪತ್ತು ದಿನಗಳ ವೃತ್ತಿ ತರಬೇತಿಯನ್ನು ನೀಡುತ್ತಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರರಷ್ಟು ಕೆಲಸ ದೊರೆಯುತ್ತಿದೆ' ಎಂದು ಸಂಸ್ಥೆಯ ಟ್ರಸ್ಟಿ ರಮೇಶ್ ಸ್ವಾಮಿ ಹೇಳಿದರು.

ಉನ್ನತಿ ಸಂಸ್ಥೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ, ರಿಟೇಲ್, ಡಾಟಾ ಬೇಸ್, ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಹೀಗೆ ಇನ್ನೂ ಮುಂತಾದ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ವರ್ಷದಲ್ಲಿ ಸುಮಾರು 2,000 ವಿದ್ಯಾರ್ಥಿಗಳು ತರಬೇತಿ ಹೊಂದುತ್ತಾರೆ. ತರಬೇತಿಯು ಎಪ್ಪತ್ತು ದಿನಗಳಾಗಿದ್ದು, ಉಚಿತ ಊಟ ಮತ್ತು ವಸತಿಯನ್ನು ಕಲ್ಪಿಸಲಾಗಿದೆ' ಎಂದರು.

`ಇಲ್ಲಿ ವಿದ್ಯಾರ್ಹತೆಯ ಮಿತಿಯಿಲ್ಲ. ಅವರವರ ಅರ್ಹತೆಯ ಆಧಾರದ ಮೇಲೆ ಅವರಿಗೆ ತರಬೇತಿ ನೀಡಲಾಗುತ್ತದೆ. ಯುವಕರಿಗೆ 18 ರಿಂದ 29 ವರ್ಷದವರೆಗೆ, ಮಹಿಳೆಯರಿಗೆ 40 ವರ್ಷದವರೆಗೆ ಅವಕಾಶವಿದೆ. ತರಬೇತಿ ಹೊಂದಿದವರಿಗೆ ಕ್ಯಾಂಪಸ್ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ನೂರರಷ್ಟು ಕೆಲಸ ಖಂಡಿತವಾಗಿ ದೊರೆಯುತ್ತದೆ' ಎಂದು ಹೇಳಿದರು.

ಉತ್ಸವ 2013 ಸಂಭ್ರಮ: ಉನ್ನತಿ ಸಂಸ್ಥೆಯು `ಉತ್ಸವ 2013 ಸಂಭ್ರಮ' ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಗಸ್ಟ್ 10 ರಿಂದ ಸೆ. 1 ರವರೆಗೆ ಆಯೋಜಿಸಿದೆ. ಯು.ಶ್ರೀನಿವಾಸ್, ಶ್ರೀಕೃಷ್ಣ ಮೋಹನ್, ರಾಮ್‌ಕುಮಾರ್ ಮೋಹನ್, ಸಂಜಯ ಸುಬ್ರಮಣಿಯನ್, ಮದುರೈ ಟಿ.ಎನ್.ಶೇಷಗೋಪಾಲನ್, ಷಣ್ಮುಗಪ್ರಿಯಾ, ಹರಿಪ್ರಿಯಾ ಮುಂತಾದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಟ ರಮೇಶ್ ಅರವಿಂದ ಅವರು ಉನ್ನತಿ ಸಂಸ್ಥೆಯ ಬ್ರ್ಯಾಂಡ್ ಅಂಬಾಸಡರ್ ಆಗಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮಾಹಿತಿಗೆ ಸಂಪರ್ಕಿಸಿ: ಉನ್ನತಿ ಸೆಂಟರ್, ಗಣೇಶ ದೇವಸ್ಥಾನದ ರಸ್ತೆ, ಸದಾನಂದನಗರ, ಎನ್‌ಜಿಇಎಫ್ (ಪೂರ್ವ), ಬೈಯಪ್ಪನಹಳ್ಳಿ, ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ. ದೂರವಾಣಿ ಸಂಖ್ಯೆ- 2538 4443 ಅಥವಾ 2538 4642.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT