ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರಿಕೆ ಸಂದೇಶ...

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಮಲೆನಾಡಿನ ಮಡಿಲು ಎಂಬಂತಿರುವ ಮೂಡಿಗೆರೆ, ಚಿಕ್ಕಮಗಳೂರು, ಸಕಲೇಶಪುರ ತಾಲ್ಲೂಕುಗಳಲ್ಲಿ ಅಂಕುಡೊಂಕಾದ ರಸ್ತೆಗಳು ಮತ್ತು ಅಪಾಯಕಾರಿ ತಿರುವುಗಳೇ ಅಧಿಕವಾಗಿವೆ. ಇದರಿಂದ ಪ್ರತಿದಿನವೂ ಒಂದಿಲ್ಲೊಂದು ರಸ್ತೆ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಈ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಬೇಕಾದ ಸೂಚನಾ ಫಲಕಗಳು ವಿರಳವಾಗಿ ಕಾಣುತ್ತವೆ.

ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ರಸ್ತೆಬದಿ ವಾಣಿಜ್ಯ ಉದ್ದೇಶಗಳಿಗಾಗಿ ತಲೆ ಎತ್ತಿರುವ ಕೆಲವು ಖಾಸಗಿ ಶಾಲೆಗಳ ಪ್ರವೇಶ ಪ್ರಕಟಣೆಗಳನ್ನೊಳಗೊಂಡ ಬೃಹತ್ ಆಕಾರದ ಫ್ಲೆಕ್ಸ್‌ಗಳು, ಕಾಫಿ ಕಾರ್ನರ್‌ಗಳ ಬ್ಯಾನರ್, ಬೋರ್ಡ್‌ಗಳು, ರಾಜಕಾರಣಿಗಳ ಕಟೌಟ್‌ಗಳು ವರ್ಣರಂಜಿತವಾಗಿ ಕಂಗೊಳಿಸುತ್ತಿವೆ. ವಾಹನ ಸವಾರರ ಗಮನ ಇತ್ತ ಹರಿಯುವುದರಿಂದ ಅಪಘಾತಗಳು ಆಗುತ್ತಿವೆ.

ಅಪಾಯಕ್ಕೆ ಆಮಂತ್ರಣ ನೀಡುವಂತಿರುವ ಇಂತಹ ಅನಧಿಕೃತ ಪ್ರಕಟಣಾ ಫಲಕಗಳಿಗೆ ಸರ್ಕಾರ ನಿಯಂತ್ರಣ ಹೇರಬೇಕು. ಜತೆಗೆ ಅಪಘಾತ ವಲಯಗಳನ್ನು ಗುರುತಿಸಿ, ಮುನ್ನೆಚ್ಚರಿಕೆಯ ಸಂದೇಶವನ್ನೊಳಗೊಂಡ  ಫಲಕಗಳನ್ನು ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT