ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎವರೆಸ್ಟ್‌ ಹಾದಿಯಲ್ಲಿ ದುರಂತ

ಏಳು ಪರ್ವತಾರೋಹಿಗಳು ನಾಪತ್ತೆ
Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ವಿಶ್ವದ ಅತ್ಯಂತ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌­ನಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಹಿಮಕುಸಿತದಲ್ಲಿ ಕನಿಷ್ಠ 13 ಶೆರ್ಪಾ ಚಾರಣ ಮಾರ್ಗ­ದರ್ಶಿಗಳು ಸಾವನ್ನ­ಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.

ಇತ್ತೀಚಿಗಿನ ದಿನಗಳಲ್ಲಿ ಇಲ್ಲಿ ನಡೆದ ಅತ್ಯಂತ ಭೀಕರ ದುರಂತ ಇದಾಗಿದೆ. ಸುಮಾರು 5,800 ಮೀಟರ್‌ ಎತ್ತ­ರದ ‘ಪಾಪ್‌ಕಾರ್ನ್‌ ಫೀಲ್ಡ್‌’ ಎಂದು ಕರೆಯುವ ಪ್ರದೇಶದಲ್ಲಿ ಬೆಳಿಗ್ಗೆ 6.45 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.

‘೧೩ ಮೃತದೇಹಗಳನ್ನು ಮೂಲ ಶಿಬಿರಕ್ಕೆ ತರಲಾಗಿದೆ. ಗಾಯ­ಗೊಂಡ ಮೂವರು ಪರ್ವತಾ­ರೋಹಿ­ಗಳನ್ನು ಕಠ್ಮಂ­ಡು­ವಿಗೆ  ಕರೆದೊ­ಯ್ಯ­ಲಾಗಿದೆ. ಇನ್ನೂ 7 ಪರ್ವ­ತಾ­ರೋಹಿ­ಗಳು ನಾಪತ್ತೆ­ಯಾ­­ಗಿ­ದ್ದಾರೆ’ ಎಂದು ನೇಪಾಳಿ ಪ್ರವಾ­ಸೋ­ದ್ಯಮ ಸಚಿವಾಲಯದ ಪರ್ವ­ತಾ­ರೋ­ಹಣ ವಿಭಾಗದ ಮೂಲಗಳು ತಿಳಿಸಿವೆ.

‘ಸುಮಾರು 15  ಪರ್ವತಾರೋಹಿ­ಗಳು ಮತ್ತು ಶೆರ್ಪಾ ಮಾರ್ಗದರ್ಶಿಗಳ ಗುಂಪು ಮೌಂಟ್‌ ಎವರೆಸ್ಟ್‌ನ ಮೂಲ ಶಿಬಿರದಿಂದ  ಒಂದನೇ ಶಿಬಿರಕ್ಕೆ ತೆರ­ಳು­ತ್ತಿ­ದ್ದಾಗ ಹಿಮಕುಸಿತ ಸಂಭವಿಸಿದೆ’ ಎಂದು ಪರ್ವತಾ­ರೋಹಣ ವಿಭಾಗದ ಅಧಿಕಾರಿ ತಿಲಕ್‌ ಪಾಂಡೆ ಹೇಳಿದ್ದಾರೆ.

ಸ್ಥಳದಲ್ಲಿ ಸುಮಾರು 100 ಶೆರ್ಪಾ ಮಾರ್ಗ­ದರ್ಶಿ­ಗಳು ಮತ್ತು ಪರ್ವತಾ­ರೋಹಿ­ಗಳು ಸಿಕ್ಕಿಹಾಕಿಕೊಂಡಿ­ದ್ದಾರೆ. ‘ಕೆಲವು ಪರ್ವ­ತಾ­ರೋಹಿ­ಗಳನ್ನು ರಕ್ಷಿಸ­­ಲಾಗಿದೆ. ಆದರೆ, ಇನ್ನೂ ಅನೇಕರು ನಾಪತ್ತೆ­ಯಾಗಿ­ದ್ದಾರೆ’ ಎಂದು ನೇಪಾಳ ಪ್ರವಾಸೋ­ದ್ಯಮ ಇಲಾಖೆ ವಕ್ತಾರರು ತಿಳಿಸಿ­ದ್ದಾರೆ.

‘ಸ್ಥಳೀಯ ಮಾರ್ಗದರ್ಶಕರು ನಸು­ಕಿನಲ್ಲಿ ಹಗ್ಗಗಳನ್ನು ಕಟ್ಟಿ ಪರ್ವಾತಾ­ರೋಹಣಕ್ಕೆ ದಾರಿ ರೂಪಿಸುತ್ತಿದ್ದಾಗ ಹಿಮಕುಸಿತ ಸಂಭವಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನೇಪಾಳ ಸೇನಾಪಡೆ, ಸಶಸ್ತ್ರ ಪೊಲೀಸ್‌ ಪಡೆಯ ಸಹಯೋಗ­ದೊಂದಿಗೆ ಹಿಮಾಲಯ ರಕ್ಷಣಾ ದಳ, ಸ್ಥಳೀಯ ಮಾರ್ಗದರ್ಶಕರು ಪರಿ
ಹಾರ ಕಾರ್ಯ ಕೈಗೊಂಡಿ­­ದ್ದಾರೆ’ ಎಂದು ಟ್ರೆಕ್ಕಿಂಗ್‌ ಅಸೋ­ಸಿ­­­ಯೇಶನ್‌ ತಿಳಿಸಿದೆ.

ಏಪ್ರಿಲ್‌–ಮೇ ತಿಂಗಳಿನಲ್ಲಿ ಪರ್ವತಾ­ರೋಹಿ­­ಗಳ ಸಂಖ್ಯೆ ಹೆಚ್ಚಿರುವ ಸಂದರ್ಭ­ದ­ಲ್ಲಿಯೇ ಈ ಅವಘಡ ನಡೆದಿದೆ.  ೮,೮೪೮ ಮೀಟರ್‌ ಎತ್ತರದ ಎವರೆಸ್ಟ್‌ ಏರಲು ಈಗಾಗಲೇ ಮೂಲ ಶಿಬಿರಕ್ಕೆ ನೂರಾರು ಮಂದಿ ಲಗ್ಗೆ ಇಟ್ಟಿ­ದ್ದಾರೆ. ‘ಮುಂದಿನ 2 ತಿಂಗ­ಳಲ್ಲಿ 334 ವಿದೇಶಿಯರಿಗೆ ಎವ­ರೆಸ್ಟ್‌ ಏರಲು ಅನು­ಮತಿ ನೀಡಲಾ­ಗಿದೆ. ಇವರಿಗೆ 400 ಶೆರ್ಪಾ­ಗಳು  ನೆರವು ನೀಡಲಿದ್ದಾರೆ’ ಎಂದು ಪರ್ವತಾ­ರೋ­ಹಣ ವಿಭಾಗದ ಅಧಿ­ಕಾರಿ ದೀಪೇಂದ್ರ ಪೌಡೆಲ್‌ ಹೇಳಿದ್ದಾರೆ.

ಎಡ್ಮಂಡ್‌ ಹಿಲರಿ ಹಾಗೂ ತೇನ್‌­ಸಿಂಗ್‌ ನೊರ್ಗೆ, ೧೯೫೩ರಲ್ಲಿ    ಮೊದಲ ಬಾರಿ ಎವರೆಸ್ಟ್‌  ಏರಿ ದಾಖಲೆ ಮಾಡಿ­ದ್ದರು. ಅಲ್ಲಿಂದ ಈವರೆಗೆ ಸುಮಾರು ೪,೦೦೦ ಮಂದಿ ಎವರೆಸ್ಟ್‌ ಏರಿದ್ದಾರೆ. 1970ರ ಉತ್ತರಾರ್ಧದವರೆಗೆ  ಪ್ರತಿ ವರ್ಷ ಬೆರಳೆಣಿಕೆ­ಯಷ್ಟು ಜನ ಎವ­ರೆಸ್ಟ್‌ ಏರಿದ್ದರು. 1993­ರಲ್ಲಿ ಮೊದಲ ಬಾರಿ ಈ ಸಂಖ್ಯೆ 100ಕ್ಕೆ ಏರಿತ್ತು. 2004ರ ಹೊತ್ತಿಗೆ  300ಕ್ಕೂ ಹೆಚ್ಚು ಮಂದಿ ಮೌಂಟ್‌ ಎವರೆಸ್ಟ್‌ ಏರಿದ್ದರು. 2012ರಲ್ಲಿ ಯಶಸ್ವಿ ಪರ್ವತಾರೋಹಿ­ಗಳ ಸಂಖ್ಯೆ 500ಕ್ಕೂ ಹೆಚ್ಚಿತ್ತು.

ಕರಾಳ ನೆನಪು
ಈವರೆಗೆ ೨೫೦ಕ್ಕೂ ಹೆಚ್ಚು ಪರ್ವ­ತಾ­ರೋಹಿಗಳು ಮೃತಪಟ್ಟಿದ್ದಾರೆ. 1996ರಲ್ಲಿ 15 ಹಾಗೂ 2006­ರಲ್ಲಿ ೧೨ ಮಂದಿ ಬಲಿಯಾಗಿದ್ದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT