ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮ ಜತೆ ಚಾಯ್‌ ಪೆ ಚರ್ಚಾ!

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಹೈದರಾಬಾದ್‌ ಹೌಸ್‌­ನಲ್ಲಿ ಗಂಭೀರವಾದ ಮಾತುಕತೆ ಆರಂಭಕ್ಕೂ ಮುನ್ನ  ಕೆಲ ಕ್ಷಣಗಳನ್ನು ಲೋಕಾಭಿರಾಮವಾಗಿ ಕಳೆದರು.

ಪ್ರತಿಷ್ಠಿತ ಹೈದರಾಬಾದ್‌ ಭವನದ  ಹುಲ್ಲು ಹಾಸಿನ ಮೇಲೆ ಉಭಯ ನಾಯಕರು ಅತ್ಯಂತ ಸಲುಗೆ ಹಾಗೂ ಸ್ನೇಹದಿಂದ  ಹೆಜ್ಜೆ ಹಾಕಿದರು.

ಹುಲ್ಲುಹಾಸಿನ ಮೇಲೆ ಕೆಲ ನಿಮಿಷ ಗಳ ಕಾಲ ಅಡ್ಡಾಡಿ ನಂತರ ಅಲ್ಲಿಯೇ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಜಾಗಕ್ಕೆ ತೆರಳಿದರು. ಅತ್ಯಂತ ಸುಂದರ ಕಲಾತ್ಮಕ ಕೆತ್ತನೆ­ಗಳನ್ನು ಹೊಂದಿದ ಬೆಳ್ಳಿಯ ಜಗ್‌ನಲ್ಲಿದ್ದ ಚಹಾವನ್ನು  ಮೋದಿ  ತಮ್ಮ ಕೈಯಾರೆ ಕಪ್‌ಗೆ ಸುರಿದು ಒಬಾಮ ಅವರಿಗೆ ನೀಡಿದರು.

ನಂತರ ಚಹಾ ಸವಿಯುತ್ತಾ ಪರಸ್ಪರ ಮಾತುಕತೆ ನಡೆಸಿದರು. ಅಧಿಕೃತ ಮಾತುಕತೆಗೆ ಮುನ್ನ ಅವರು ಹೀಗೆ ಲೋಕಾಭಿರಾಮವಾಗಿ ಕೆಲ ಕ್ಷಣಗಳನ್ನು ಕಳೆದದ್ದು ಇಬ್ಬರೂ ನಾಯಕರ ನಡುವೆ ಹೆಚ್ಚುತ್ತಿರುವ ಆಪ್ತತೆಯನ್ನು ಪ್ರತಿಬಿಂಬಿ­ಸುತ್ತದೆ ಎಂಬ ವಿಶ್ಲೇಷಣೆಗಳು ಕೇಳಿ­ಬರುತ್ತಿವೆ. ಲೋಕಸಭಾ ಚುನಾವಣೆ ವೇಳೆ ಮೋದಿ ಆರಂಭಿಸಿದ್ದ ‘ಚಾಯ್‌ ಪೆ ಚರ್ಚಾ’ ಎಲ್ಲರ ಗಮನ ಸೆಳೆದಿತ್ತು.

ಟೆಲಿಗ್ರಾಂ ಪ್ರತಿ ಕೊಡುಗೆ
ಸಂವಿಧಾನ ಕರಡು ರಚನಾ ಸಮಿತಿಗೆ ಅಮೆರಿಕ ಮೊದಲ ಬಾರಿಗೆ ಕಳಿಸಿದ್ದ ಟಿಲಿಗ್ರಾಂ ಪ್ರತಿಯನ್ನು ಮೋದಿ, ಒಬಾಮ ಅವರಿಗೆ ಕಾಣಿಕೆಯಾಗಿ ನೀಡಿದರು.  ಪರಸ್ಪರ ವಿಶ್ವಾಸದ ದ್ಯೋತಕ­ವಾಗಿ ಅಮೆರಿಕ ಕಳಿಸಿದ್ದ ಈ ಟೆಲಿ­ಗ್ರಾಂ ಅನ್ನು 1946ರ ಡಿಸೆಂಬರ್‌ 9ರಂದು  ಸಂವಿಧಾನ ಕರಡು ರಚನಾ ಸಮಿತಿ ಸಭೆಯಲ್ಲಿ ಓದಿ ಹೇಳಲಾಗಿತ್ತು.

ಶಿಷ್ಟಾಚಾರ ಬದಿಗಿಟ್ಟ ಮೋದಿ!: ಸ್ವತಃ ಪ್ರಧಾನಿ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ಗಣರಾ­ಜ್ಯೋತ್ಸ­ವದ ಮುಖ್ಯ ಅತಿಥಿ ಒಬಾಮ ಅವರನ್ನು ಸ್ವಾಗತಿಸುವ ಮೂಲಕ ಶಿಷ್ಟಾ­ಚಾರವನ್ನು ಬದಿಗಿಟ್ಟ ಪ್ರಸಂಗ ನಡೆಯಿತು.

ಭಾನುವಾರ ಇಲ್ಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಬಾಮ ಅವರನ್ನು ಮೋದಿ ಖುದ್ದಾಗಿ ಬರ ಮಾಡಿಕೊಂಡರು. ಉಭಯ ನಾಯ­ಕರು ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿ­ಕೊಂಡರು. ಮೋದಿ ಶಿಷ್ಟಾಚಾರ ಮುರಿಯುತ್ತಿ ರುವ ಮೊದಲ ಪ್ರಧಾನಿ ಅಲ್ಲ. ಇದಕ್ಕೂ ಮೊದಲು 2010ರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಹಾಗೂ ಗುರುಶರಣ್‌ ಕೌರ್‌ ಅವರು ಖುದ್ದಾಗಿ ಒಬಾಮ ದಂಪತಿಯನ್ನು ಬರಮಾಡಿ ಕೊಂಡಿದ್ದರು.

ಮೋದಿಗೆ ಬಾಲಿವುಡ್‌ ತಾರೆಯ ಸ್ವಾಗತ!: ಕಳೆದ ವರ್ಷ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಮ್ಯಾಡಿಸನ್‌ ಸ್ಕ್ವೆರ್‌ ಗಾರ್ಡನ್‌ನಲ್ಲಿ ನೆರೆದಿದ್ದ ಸಾವಿರಾರು ಭಾರತೀಯ ಅಭಿಮಾನಿಗಳಿಗೆ ಥೇಟ್‌ ಬಾಲಿ­ವುಡ್‌ ತಾರೆ­ಯಂತೆ ಶುಭ­ಕೋರಿದ್ದರು ಎಂದು ಒಬಾಮ ಹಾಸ್ಯ ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT