ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಚಿಯಲ್ಲಿ ಬಾಂಬ್‌ ಸ್ಫೋಟ

Last Updated 27 ಮಾರ್ಚ್ 2015, 7:27 IST
ಅಕ್ಷರ ಗಾತ್ರ

ಕರಾಚಿ (ಐಎಎನ್‌ಎಸ್‌): ಪಾಕಿಸ್ತಾನದ ಕರಾಚಿಯಲ್ಲಿ ಶುಕ್ರವಾರ ಸಂಭವಿಸಿರುವ ಬಾಂಬ್‌ ಸ್ಫೋಟದಲ್ಲಿ ಇಬ್ಬರು ಮೃತಪಟ್ಟು, 12 ಮಂದಿ ಗಾಯಗೊಂಡಿದ್ದಾರೆ.

ಖೈದಾಬಾದ್‌ ಪ್ರದೇಶದ ಮುರ್ಘಿಖಾನ ಬಸ್‌ ನಿಲ್ದಾಣದ ಬಳಿ ಬೈಕ್‌ವೊಂದರಲ್ಲಿ ಸ್ಫೋಟಕ ಇರಿಸಲಾಗಿತ್ತು. ಘಟನೆಯಲ್ಲಿ ಗಾಯಗೊಂಡ ಹೆಚ್ಚಿನವರು ಪೊಲೀಸ್‌ ಸಿಬ್ಬಂದಿ ಎಂದು ‘ಡಾನ್‌’ ವರದಿ ಮಾಡಿದೆ.

ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಸುಮಾರು 50 ಮಂದಿ ಪೊಲೀಸರು ಬಸ್‌ನಲ್ಲಿದ್ದರು. ಗಾಯಗೊಂಡವರನ್ನು ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈವರೆಗೂ ಯಾವ ಭಯೋತ್ಪಾದಕ ಸಂಘಟನೆಯೂ ಸ್ಫೋಟದ ಹೊಣೆ ಹೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT