ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು, ವಿಮಾ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

ಸಂಕ್ಷಿಪ್ತ ಸುದ್ದಿ
Last Updated 26 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಾಗೂ ರದ್ದುಗೊಂಡಿರುವ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಗೆ ದಾರಿ ಮಾಡಿಕೊಡುವ ಎರಡು ಸುಗ್ರೀವಾಜ್ಞೆಗಳಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಶುಕ್ರವಾರ ಅಂಕಿತ ಹಾಕಿದರು.
ವಿಮೆ ಹಾಗೂ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಸುಧಾರಣಾ ಕ್ರಮಗಳನ್ನು ತರುವುದಕ್ಕಾಗಿ ಸರ್ಕಾರವು ಈ ಸುಗ್ರೀವಾಜ್ಞೆಗಳನ್ನು ಹೊರಡಿಸಲು ನಿರ್ಧರಿಸಿತ್ತು. ಡಿ.೨೪ರಂದು ಸಂಪುಟವು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿತ್ತು.

ಹೆಚ್ಚುವರಿ ಪರಿಹಾರ ವಿತರಣೆಗೆ ಸೂಚನೆ
ನವದೆಹಲಿ (ಪಿಟಿಐ): 
೧೯೮೪ರಲ್ಲಿ ನಡೆದ ಸಿಖ್‌ ಹತ್ಯಾಕಾಂಡ ಸಂತ್ರಸ್ತರಿಗೆ  ಹೆಚ್ಚುವರಿಯಾಗಿ ಘೋಷಿಸಿರುವ ತಲಾ ರೂ೫ ಲಕ್ಷ ಪರಿಹಾರವನ್ನು ಕೂಡಲೇ ವಿತರಿಸಲು ಕ್ರಮ ತೆಗೆದುಕೊಳ್ಳುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಗೃಹಸಚಿವ ರಾಜನಾಥ್‌ ಸಿಂಗ್‌ ಸೂಚನೆ ನೀಡಿದ್ದಾರೆ. 
ವಿತರಣೆ: ರಾಜನಾಥ್‌ ಸಿಂಗ್‌ ಅವರು  ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ೧೭ ಸಂತ್ರಸ್ತರಿಗೆ  ತಲಾ ರೂ ೫ ಲಕ್ಷ ರೂಪಾಯಿಯ ಚೆಕ್‌ ವಿತರಣೆ ಮಾಡಿದರು.

ತಾಜ್‌ಮಹಲ್‌ ವೀಕ್ಷಣೆಗೆ ಆನ್‌ಲೈನ್‌ ಬುಕಿಂಗ್‌
ಆಗ್ರಾ (ಐಎಎನ್‌ಎಸ್‌):
ವಿಶ್ವ ಪ್ರಸಿದ್ಧ ತಾಜ್‌ಮಹಲ್‌ ವೀಕ್ಷಣೆಗೆ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆ ಶನಿವಾರದಿಂದ ಜಾರಿಗೆ ಬರಲಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ. ಆಸಕ್ತರು ask.irctc.co. ಮೂಲಕ ಟಿಕೆಟ್‌ ಬುಕ್‌ ಮಾಡಬಹುದು.

‘ಒಂದೇ ದರ್ಜೆ ಒಂದೇ ಪಿಂಚಣಿ’
ಪಣಜಿ (ಪಿಟಿಐ):
ಮುಂಬರುವ ಬಜೆಟ್‌ ಒಳಗಾಗಿ ರಕ್ಷಣಾ ಪಡೆಗಳಲ್ಲಿ ‘ಒಂದೇ ದರ್ಜೆ ಒಂದೇ ಪಿಂಚಣಿ’ ನಿಯಮವನ್ನು ಜಾರಿ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ತಿಳಿಸಿದರು.

ಸಚಿವ ಮಜೀಠಿಯಾ ವಿಚಾರಣೆ
ಜಲಂಧರ (ಐಎ­ಎನ್‌ಎಸ್‌):
ಬಹುಕೋಟಿ ರಾಸಾ­ಯನಿಕ ಔಷಧ ಹಗರಣಕ್ಕೆ ಸಂಬಂ­ಧಿಸಿ­ದಂತೆ ಪಂಜಾಬ್‌ ಸಚಿವ ಬಿಕ್ರಮ್‌ ಸಿಂಗ್‌ ಮಜೀಠಿಯಾ ಅವರನ್ನು ಜಾರಿ ನಿರ್ದೇಶ­ನಾಲ­ಯದ ಅಧಿಕಾರಿಗಳು ಶುಕ್ರವಾರ ವಿಚಾರಣೆ­ಗೊಳ­ಪ­ಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT