ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪಾ ಕೋಲಾ ನಿವಾಸಿಗಳಿಗೆ ನೀರು, ವಿದ್ಯುತ್‌ ಸಂಪರ್ಕ ಕಡಿತ

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮೂರು ದಿನ ಕ್ಯಾಂಪಾ ಕೋಲಾ ನಿವಾಸಿಗಳ ಪ್ರತಿರೋಧ ಎದುರಿಸಿದ್ದ ಬೃಹತ್‌ ಮುಂಬೈ ಮಹಾನಗರ ಪಾಲಿಕೆ ಸಿಬ್ಬಂದಿ ಸೋಮವಾರ ನಿರಾಳವಾಗಿ  ವರ್ಲಿ ಪ್ರದೇಶದ ವಿವಾದಿತ ವಸತಿ ಸಂಕೀರ್ಣ ಪ್ರವೇಶಿಸಿದರು.

12 ತಂಡಗಳಲ್ಲಿ ಬಂದ ಪಾಲಿಕೆ ಸಿಬ್ಬಂದಿ ಸಂಜೆಯವರೆಗೂ ಕ್ಯಾಂಪಾ ಕೋಲಾದ 96  ಅಕ್ರಮ ಫ್ಲ್ಯಾಟ್‌ಗಳ ನೀರು, ವಿದ್ಯುತ್‌ ಹಾಗೂ ಅಡುಗೆ ಅನಿಲ ಸಂಪರ್ಕ ಕಡಿತಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಭರವಸೆಯ ಹಿನ್ನೆಲೆಯಲ್ಲಿ  ವಸತಿ ಸಂಕೀರ್ಣ ನಿವಾಸಿಗಳು ಪಾಲಿಕೆ ಸಿಬ್ಬಂದಿಗೆ ಸಹಕಾರ ನೀಡಿದರು.

ಮೂರು ದಿನಗಳಿಂದ ಪಾಲಿಕೆ ಸಿಬ್ಬಂದಿ ಹಾಗೂ ನಿವಾಸಿಗಳ ಮಧ್ಯೆ ನಡೆಯುತ್ತಿದ್ದ ಸಂಘರ್ಷದಿಂದ ರಣರಂಗವಾಗಿದ್ದ  ವರ್ಲಿ ಪ್ರದೇಶ  ಸಹಜ ಸ್ಥಿತಿಗೆ ಮರಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT