ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವ ಡಾಕ್ಟರೇಟ್‌ ಪಡೆದ ನಡಾಲ್‌

Last Updated 5 ಮೇ 2015, 8:52 IST
ಅಕ್ಷರ ಗಾತ್ರ

ಮ್ಯಾಡ್ರೀಡ್‌ (ಐಎಎನ್ಎಸ್): ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಟೆನಿಸ್‌ ತಾರೆ ರಫೇಲ್‌ ನಡಾಲ್ ಅವರಿಗೆ ಯುರೋಪಿನ ಮ್ಯಾಡ್ರಿಡ್‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ. ನೂರಾರು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪದವಿ ಸ್ವೀರಿಸುವ ಮುನ್ನ ನಡಾಲ್‌, ತಮ್ಮ ಜೀವನ ಹಾಗೂ ವೃತ್ತಿ ಜೀವನ ಅವನ್ನು ಅರ್ಥೈಸಿಕೊಳ್ಳಲು ‘ಮೌಲ್ಯಗಳು ಹಾಗೂ ಕುಟುಂಬ’ ಮೂಲಭೂತ ಅಂಶಗಳು ಎಂದು ಒತ್ತಿಹೇಳಿದ್ದರು ಎಂದು ಇಎಫ್‌ಇ ವರದಿ ಮಾಡಿದೆ.

ಯುರೋಪಿಯನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್  ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಉನ್ನತ ಗೌರವ  ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಸ್ಪೇನಿನ ಈ ಆಟಗಾರ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT