ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಟಪ್ರಭೆಯಲ್ಲಿ ಮೌನವಾದ ಫ್ಲೆಮಿಂಗೊ!

ನಗರ ಸಂಚಾರ
Last Updated 30 ಮೇ 2016, 9:09 IST
ಅಕ್ಷರ ಗಾತ್ರ

ಬಾಗಲಕೋಟೆ:  ಮಳೆ ಕೊರತೆ ಹಾಗೂ ಬಿರುಬಿಸಿಲಿನ ತಾಪದಿಂದಾಗಿ ಹಳೇ ಬಾಗಲಕೋಟೆ ಫಾಸಲೆಯಲ್ಲಿ ಹರಿ ಯುವ ಘಟಪ್ರಭಾ ನದಿ ಬತ್ತಿ ಹೋಗಿದೆ. ಇದರಿಂದ ಮುಂಗಾರು ಮಳೆಯ ಸ್ವಾಗತಕ್ಕೆ ಎಂಬಂತೆ ಪ್ರತಿ ವರ್ಷ ನದಿ ಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೀಡು ಬಿಡುತ್ತಿದ್ದ ಫ್ಲೆಮಿಂಗೊ (ರಾಜಹಂಸ) ಈ ಬಾರಿ ಅಷ್ಟಾಗಿ ಕಾಣಸಿಗುತ್ತಿಲ್ಲ.

ನದಿಯಲ್ಲಿ ಅಲ್ಲಲ್ಲಿ ನೀರು ನಿಂತಕಡೆ ಮಾತ್ರ ಸಣ್ಣ ಹಿಂಡುಗಳಲ್ಲಿ ಫ್ಲೆಮಿಂಗೊ ಕಾಣಸಿಗುತ್ತಿವೆ. ನೀಳ ಕಾಲುಗಳನ್ನು ನೀರಿನಲ್ಲಿ ಹುದುಗಿಕೊಂಡು ಮೀನುಗಳ ಬೇಟೆಯ ಮೋಜಿನಲ್ಲಿ ಮೈಮರೆಯು ತ್ತಿದ್ದ ಅವುಗಳ ಕಲರವ ಈ ವರ್ಷ ಕಡಿಮೆಯಾಗಿದೆ.

ಶೇ 50ರಷ್ಟು ಕಡಿಮೆ: ಗುಜರಾತ್‌ನ ಕಛ್‌ ಪ್ರದೇಶದಿಂದ ಪ್ರತಿ ವರ್ಷ ನವೆಂಬರ್–ಡಿಸೆಂಬರ್‌ನಲ್ಲಿ ಬರುವ ಫ್ಲೆಮಿಂಗೊ ಮೇ ಅಂತ್ಯದವರೆಗೂ ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕಾಣಸಿಗುತ್ತವೆ. ಹಿನ್ನೀರು ಪ್ರದೇಶ, ಕೊರ್ತಿ–ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿ ಹಾಗೂ ಅನಗ ವಾಡಿ ಸೇತುವೆಯವರೆಗೂ ಘಟಪ್ರಭಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣ ಸಿಗುವ ಈ ಪಕ್ಷಿಗಳು ಇಡೀ ಪ್ರದೇಶಕ್ಕೆ ಮೆರುಗು ನೀಡುತ್ತವೆ.

‘ಈ ಬಾರಿ ಆಲಮಟ್ಟಿ ಜಲಾಶಯದ ಹಿನ್ನೀರು ಬೇಗನೇ ಖಾಲಿಯಾ ಗಿದೆ. ಎರಡೂ ನದಿಗಳು ಬತ್ತಿವೆ. ಹಾಗಾಗಿ ಪ್ರತಿ ವರ್ಷ ಕಾಣಸಿಗುತ್ತಿದ್ದ ಫ್ಲೆಮಿಂಗೊ ಪ್ರಮಾಣ ಈ ಬಾರಿ ಶೇ 50ರಷ್ಟು ಕಡಿಮೆ ಯಾಗಿದೆ’ ಎಂದು ಮುಧೋಳ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಕಣದಾಳ ಹೇಳುತ್ತಾರೆ.

ಪಕ್ಷಿಧಾಮಕ್ಕೆ ಪ್ರಸ್ತಾವ: ‘ಮೊದಲು ಈ ಭಾಗಕ್ಕೆ ಫ್ಲೆಮಿಂಗೊ ಬರುತ್ತಿರಲಿಲ್ಲ. 2002ರಲ್ಲಿ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹಣೆ ಆರಂಭವಾಗಿ ಹಿನ್ನೀರು ನಿಲ್ಲತೊಡಗಿತು. ಆಗಿನಿಂದ ಅವುಗಳು ವಲಸೆ ಬರುವುದು ಹೆಚ್ಚಾ ಯಿತು. ಈ ಪ್ರದೇಶದ ವಾತಾವರಣ ಹಾಗೂ ಆಹಾರ ಲಭ್ಯತೆಯ ಅರಿ ವಾಗುತ್ತಿದ್ದಂತೆಯೇ ವರ್ಷ ದಿಂದ ವರ್ಷಕ್ಕೆ ಅವುಗಳ ಸಂಖ್ಯೆಯೂ ಇಮ್ಮಡಿಯಾ ಯಿತು. 2005ರ ನಂತರ ಇದು ವಿಪರೀತವಾಗಿ ಹೆಚ್ಚಳಗೊಂಡಿತು.

ಹಾಗಾಗಿ ಬಾಗಲಕೋಟೆ ತಾಲ್ಲೂಕಿನ ಮಲ್ಲಾಪುರ ಬಳಿ ಪಕ್ಷಿಧಾಮ ಸ್ಥಾಪಿಸಲು ಅರಣ್ಯ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಾರಣಾಂತರ ದಿಂದ ಅದು ವಿಳಂಬವಾಗಿದೆ’ ಎಂದು ಕಣದಾಳ ತಿಳಿಸಿದರು.

ನದಿ ಪಾತ್ರ ಹಾಗೂ ದಂಡೆಯ ಭಾಗ ಹೆಚ್ಚಾಗಿ ಎರೆ ಮಣ್ಣಿನಿಂದ ಕೂಡಿದೆ. ಅಲ್ಲಿ ಹುಳು–ಹುಪ್ಪಡಿ, ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಆಹಾರದ ಸಮೃದ್ಧಿ ಜೊತೆಗೆ ಇಲ್ಲಿನ ಭೌಗೋಳಿಕತೆಯೂ ಫ್ಲೆಮಿಂಗೊಗಳಿಗೆ ಅಚ್ಚುಮೆಚ್ಚು. ಮಣ್ಣಿನ ಅಡಿ ಹಾಗೂ ಹಿನ್ನೀರಿನ ನಡುಗಡ್ಡೆಗಳಲ್ಲಿ ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ಇದೇ ಅವಧಿಯಲ್ಲಿ ಸಂತಾನವೃದ್ಧಿಯಾಗುತ್ತದೆ. ಬೆಂಗ ಳೂರು–ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪ್ರತಿ ವರ್ಷ ಪಕ್ಷಿ ವೀಕ್ಷಕರು ಹಾಗೂ ಛಾಯಾ ಗ್ರಾಹಕರು ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಗಲಕೋಟೆಯ ಹಿನ್ನೀರು ಪ್ರದೇಶಕ್ಕೆ ಬರುತ್ತಾರೆ. ಜೊತೆಗೆ ಸ್ಥಳೀಯರು ರಜೆಯಲ್ಲಿ ಮಕ್ಕಳನ್ನು  ಪಕ್ಷಿ ವೀಕ್ಷಣೆಗೆ ಕರೆ ತರುತ್ತಾರೆ ಎಂದು ಶ್ರೀಕಾಂತ ಹೇಳುತ್ತಾರೆ.

ನದಿಯಿಂದ ನೀರು ಎತ್ತುವುದು: ‘ಬೇಸಿಗೆಯಲ್ಲಿ ಘಟಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗು ತ್ತಿದ್ದಂತೆಯೇ ಆ ಜಾಗದಲ್ಲಿ ಸ್ಥಳೀಯರು ಸೊಪ್ಪು–ತರಕಾರಿ ಬೆಳೆಯುತ್ತಾರೆ. ನದಿಯಲ್ಲಿ ಅಳಿದುಳಿದ ನೀರನ್ನು ಮೋಟಾರ್‌ಪಂಪ್ ಮೂಲಕ ಬೆಳೆಗಳಿಗೆ ಹಾಯಿಸುತ್ತಾರೆ. ಇದರಿಂದ ನದಿ ಸಂಪೂರ್ಣ ಬತ್ತಿ ಹೋಗಿ ಫ್ಲೆಮಿಂಗೊ ಪಕ್ಷಿಗಳ ಪ್ರಾಕೃತಿಕ ಆವಾಸ ಸ್ಥಾನಕ್ಕೆ ಕುತ್ತು ತರುತ್ತಿದೆ. ಜಲಚರಗಳಿಗೂ ಸಂಕಷ್ಟ ಎದುರಾಗಿ, ಸಾವಿರಾರು ಸಂಖ್ಯೆಯ ಮೀನುಗಳು ನೀರಿಲ್ಲದೇ ಸಾಯುತ್ತಿವೆ. ಇದನ್ನು ತಪ್ಪಿಸಲು ನದಿಯಿಂದ ಅಕ್ರಮ ವಾಗಿ ನೀರು ತೆಗೆಯುವುದನ್ನು ತಪ್ಪಿಸ ಬೇಕು’ ಎಂದು ಹಳೇ ಬಾಗಲಕೋಟೆ ವೆಂಕಟಪೇಟೆಯ ನಿವಾಸಿ ನಾರಾಯಣಸ್ವಾಮಿ ಒತ್ತಾಯಿಸುತ್ತಾರೆ.

ಮುಖ್ಯಾಂಶಗಳು:
* ಗುಜರಾತ್‌ನಿಂದ ವಲಸೆ ಬರುವ ಹಕ್ಕಿಗಳು

* ಅರಣ್ಯ ಇಲಾಖೆಯಿಂದ ಪಕ್ಷಿಧಾಮಕ್ಕೆ ಪ್ರಸ್ತಾವ
* ನೀರಿಲ್ಲದೆ ಜಲಚರಗಳಿಗೂ ತೊಂದರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT