ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ಮಾಂಸದೂಟದ ರುಚಿ

Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚಿಕನ್ ವೈಟ್ ಬಿರಿಯಾನಿ

ಸಾಮಗ್ರಿ: ಚಿಕನ್ ಅರ್ಧ ಕೆ.ಜಿ, ಸೋನಾ ಮಸೂರಿ ಅಕ್ಕಿ ಅರ್ಧ ಕೆ.ಜಿ, ಶುಂಠಿ ಪೇಸ್ಟ್ 1ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಅರ್ಧ ಕಟ್ಟು, ಪುದೀನ ಸೊಪ್ಪು ಅರ್ಧ ಕಟ್ಟು, ಮೆಂತೆ ಸೊಪ್ಪು ಅರ್ಧ ಕಟ್ಟು, ಕರಿಬೇವು 1ಕಡ್ಡಿ, ಹಸಿ ಮೆಣಸಿನಕಾಯಿ 8, ಮೊಸರು 3 ಚಮಚ, ಗೋಡಂಬಿ 6, ಕಾಳು ಮೆಣಸು 10, ಏಲಕ್ಕಿ 3, ಲವಂಗ 6, ಚಕ್ಕೆ 4 ಚಿಕ್ಕ ತುಂಡುಗಳು, ಪಲಾವ್ ಎಲೆ 2, ಗಸಗಸೆ ಕಾಲು ಚಮಚ, ಜಾಯಿಕಾಯಿ ಪತ್ರೆ, ಸೋಂಪು ಕಾಳು ಕಾಲು ಚಮಚ, ಅನಾನಸ್ ಹೂ 1, ಮರಾಠಿ ಮೊಗ್ಗು 2, ಈರುಳ್ಳಿ ದಪ್ಪ ಗಾತ್ರದ್ದು 3, ನಿಂಬೆ ಹಣ್ಣು 1, ಎಣ್ಣೆ, ತುಪ್ಪ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಒಂದು ಈರುಳ್ಳಿಯನ್ನು ಉದ್ದುದ್ದ, ಇನ್ನೊಂದನ್ನು ರಿಂಗ್ ಆಕಾರದಲ್ಲಿ, ಮತ್ತೊಂದನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಕೊತ್ತಂಬರಿ, ಪುದೀನ, ಮೆಂತೆ ಸೊಪ್ಪು, ಹಸಿಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಮತ್ತು ತುಪ್ಪವನ್ನು ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕಾಳು ಮೆಣಸು, ಲವಂಗ, ಚಕ್ಕೆ, ಏಲಕ್ಕಿ, ಅನಾನಸ್ ಹೂ, ಮರಾಠಿ ಮೊಗ್ಗು ಹಾಕಿ ಫ್ರೈ ಮಾಡಿ ನಂತರ ಕರಿಬೇವು, ಮೆಣಸಿನಕಾಯಿ, ಈರುಳ್ಳಿ, ಸೋಂಪು ಕಾಳು, ಪಲಾವ್ ಎಲೆ, ಜಾಯಿಕಾಯಿ ಪತ್ರೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಕೊತ್ತಂಬರಿ, ಮೆಂತೆ ಮತ್ತು ಪುದಿನ ಸೊಪ್ಪನ್ನು ಹಾಕಿ ನಂತರ ತೊಳೆದ ಚಿಕನ್ ಹಾಕಿ. ಮೊಸರು ಮತ್ತು ಉಪ್ಪನ್ನು ಸೇರಿಸಿ, ಸ್ವಲ್ಪ ಸಮಯ ಬೇಯಿಸಿದ ತರುವಾಯ ಒಂದಕ್ಕೆ ಎರಡರಷ್ಟು ನೀರನ್ನು ಹಾಕಿ, ತೊಳೆದ ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಕಡಿಮೆಯಿದ್ದನ್ನು ಸೇರಿಸಿ ಅಕ್ಕಿ ಬೆಯಲು ಬಿಡಿ. ಬೆಂದ ನಂತರ ಉಣಬಡಿಸುವ ಬೌಲ್‌ಗೆ ಹಾಕಿ ನಿಂಬೆರಸವನ್ನು ಬೆರೆಸಿ, ಬೇಕೆಂದರೆ ಕೊತ್ತಂಬರಿ ಬೆರೆಯಿಸಿಕೊಳ್ಳಿ.

ರೆಡ್ ಚಿಲ್ಲಿ ಚಿಕನ್ ಗ್ರೇವಿ

ಸಾಮಗ್ರಿ: ಚಿಕನ್ 1 ಕೆ.ಜಿ, ಶುಂಠಿ ಪೇಸ್ಟ್ 1ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ 1 ಕಟ್ಟು, ಪುದೀನ ಸೊಪ್ಪು ಅರ್ಧ ಕಟ್ಟು,

ಧನಿಯಾ ಪುಡಿ 3 ಚಮಚ, ಬ್ಯಾಡಗಿ ಮೆಣಸಿನಕಾಯಿ 8, ಒಣಮೆಣಸಿನ ಕಾಯಿ 6, ಅರಿಶಿನ ಪುಡಿ ಅರ್ಧ ಚಮಚ, ಪೆಪ್ಪರ್ (ಕಾಳುಮೆಣಸು) 5, ಲವಂಗ 3, ಚಕ್ಕೆ 1ಇಂಚು ಉದ್ದದ್ದು, ಈರುಳ್ಳಿ ದಪ್ಪ ಗಾತ್ರದ್ದು 2, ಟೊಮೆಟೊ ದಪ್ಪ ಗಾತ್ರದ್ದು 1, ಕಾಯಿ ಅರ್ಧ ಹೋಳು, ಸಾಸಿವೆ, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಪೆಪ್ಪರ್, ಲವಂಗ, ಚಕ್ಕೆ, ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ, ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ, ಪುದೀನ, ಕಾಯಿ, ಧನಿಯಾ ಪುಡಿಯನ್ನು ಕ್ರಮವಾಗಿ ಹಾಕಿ ಫ್ರೈ ಮಾಡಿ, ತಣ್ಣಾಗಾದ ಮೇಲೆ ರುಬ್ಬಿಟ್ಟುಕೊಳ್ಳಿ. ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಚೆನ್ನಾಗಿ ತೊಳೆದ ಚಿಕನ್‌ಅನ್ನು ಹಾಕಿ ಉಪ್ಪನ್ನು ಬೆರೆಸಿ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ. ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಬ್ರಾಯ್ಲರ್ ಕೋಳಿಯಾದರೆ ಒಂದು ವಿಷಲ್ ಹಾಕಿಸಿ (ನಾಟಿ/ಗಿರಿರಾಜ/ಫಾರ್ಮ್ ಕೋಳಿಯಾದರೆ ಹೆಚ್ಚಿಗೆ ವಿಷಲ್ ಅವಶ್ಯಕತೆಯಿದೆ). ಸ್ವಲ್ಪ ಸಮಯದ ನಂತದ ಕುಕ್ಕರ್ ಮುಚ್ಚಳ ತೆಗೆದು ಚೆನ್ನಾಗಿ ಬೇಯಿಸಿ. ಸ್ವಲ್ಪ ಕೊತ್ತಂಬರಿ ಮತ್ತು ಪುದೀನ ಸೊಪ್ಪನ್ನು ಕತ್ತರಿಸಿ ಉದುರಿಸಿ.

ಚಿಕನ್ ಗ್ರೇವಿ

ಸಾಮಗ್ರಿ: ಚಿಕನ್ 1ಕೆ.ಜಿ, ಶುಂಠಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ 1ಕಟ್ಟು, ಪುದೀನ ಸೊಪ್ಪು ಅರ್ಧ ಕಟ್ಟು,

ಧನಿಯಾ ಪುಡಿ 3 ಚಮಚ, ಖಾರದಪುಡಿ 2 ಚಮಚ, ಅರಿಶಿನ ಪುಡಿ ಅರ್ಧ ಚಮಚ, ಪೆಪ್ಪರ್ (ಕಾಳುಮೆಣಸು) 5, ಲವಂಗ 3, ಚಕ್ಕೆ 1 ಇಂಚು ಉದ್ದದ್ದು, ಈರುಳ್ಳಿ ದಪ್ಪ ಗಾತ್ರದ್ದು 2, ಟೊಮೆಟೊ ದಪ್ಪ ಗಾತ್ರದ್ದು 1, ಕಾಯಿ ಅರ್ಧ ಓಳು, ಸಾಸಿವೆ, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಈರುಳ್ಳಿ, ಕೊತ್ತಂಬರಿ, ಪುದೀನ ಸೊಪ್ಪು, ಟೊಮೆಟೊ ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ, ಧನಿಯಾಪುಡಿ, ಪೆಪ್ಪರ್, ಲವಂಗ, ಚಕ್ಕೆಗಳನ್ನು ರುಬ್ಬಿಟ್ಟುಕೊಳ್ಳಿ. ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಸಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಅದರ ಮೇಲೆ ಟೊಮೆಟೊ ಹಾಕಿ ಚಿಕನ್ ಮತ್ತು ಉಪ್ಪನ್ನು ಬೆರೆಸಿದ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ, ನಂತರ ಕೊತ್ತಂಬರಿ ಮತ್ತು ಪುದೀನ ಸೊಪ್ಪನ್ನು, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಬ್ರಾಯ್ಲರ್ ಕೋಳಿಯಾದರೆ ಒಂದು ವಿಷಲ್ ಹಾಕಿಸಿ (ನಾಟಿ/ಗಿರಿರಾಜ/ಫಾರ್ಮ್ ಕೋಳಿಯಾದರೆ ಹೆಚ್ಚಿಗೆ ವಿಷಲ್ ಅವಶ್ಯಕತೆಯಿದೆ), ಸ್ವಲ್ಪ ಸಮಯದ ನಂತದ ಕುಕ್ಕರ್ ಮುಚ್ಚಳ ತೆಗೆದು ಚೆನ್ನಾಗಿ ಬೇಯಿಸಿ. ಸ್ವಲ್ಪ ಕೊತ್ತಂಬರಿ ಮತ್ತು ಪುದೀನ ಸೊಪ್ಪನ್ನು ಕತ್ತರಿಸಿ ಉದುರಿಸಿ.

ಗ್ರೀನ್ ಚಿಲ್ಲಿ ಚಿಕನ್ ಗ್ರೇವಿ            

ಸಾಮಗ್ರಿ: ಚಿಕನ್ 1 ಕೆ.ಜಿ, ಶುಂಠಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ 1 ಕಟ್ಟು, ಪುದೀನ ಸೊಪ್ಪು 1ಕಟ್ಟು,

ಧನಿಯಾ ಪುಡಿ 3 ಚಮಚ, ಹಸಿರು ಮೆಣಸಿನಕಾಯಿ 10, ಅರಿಶಿನ ಪುಡಿ ಅರ್ಧ ಚಮಚ, ಪೆಪ್ಪರ್ (ಕಾಳುಮೆಣಸು) 5, ಲವಂಗ 3, ಚಕ್ಕೆ 1ಇಂಚು ಉದ್ದದ್ದು, ಈರುಳ್ಳಿ ದಪ್ಪ ಗಾತ್ರದ್ದು 2, ಟೊಮೆಟೊ ದಪ್ಪ ಗಾತ್ರದ್ದು 1, ಕಾಯಿ ಅರ್ಧ ಓಳು, ಸಾಸಿವೆ, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ರುಬ್ಬಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ. ಚೆನ್ನಾಗಿ ತೊಳೆದ ಚಿಕನ್‌ ಅನ್ನು ಹಾಕಿ ಉಪ್ಪನ್ನು ಬೆರೆಸಿ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ. ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಚೆನ್ನಾಗಿ ಬೇಯಿಸಿ (ನಾಟಿ/ಗಿರಿರಾಜ/ಫಾರ್ಮ್ ಕೋಳಿಯಾದರೆ ಕುಕ್ಕರ್‌ನಲ್ಲಿ ಬೇಯಿಸುವುದು ಒಳ್ಳೆಯದು).

***
ಆಹಾರ ಆರೋಗ್ಯ
ರಾಯಚೂರು, ಗುಲ್ಬರ್ಗದ ಬಿಸಿಲುರಿಗೆ, ಧಗೆಗೆ ಭುತ್ತಿಯೂಟವೇ ಮದ್ದು. ನುಚ್ಚು ಮಜ್ಜಿಗೆ ಬಿರುಬೇಸಿಗೆಯ ಊಟವಾದರೆ ಶುಂಠಿ ಬೆರೆಸಿದ ಸಜ್ಜಿಗೆ (ಝಾರಿ) ಚಳಿಗಾಲದ ಕಾಯಂ ಖಾದ್ಯ. ಆಹಾರವೇ ಔಷಧಿಯಾಗಿದ್ದ ಪಾರಂಪರಿಕ ಆಹಾರ ವೈವಿಧ್ಯವನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು.

ಚಳಿಗಾಲದ ಕೆಮ್ಮು, ಶೀತ, ತಲೆಭಾರ ಹಾಗೂ ಅಜೀರ್ಣಗಳಿಗೆ ಮನೆಮದ್ದು ಆಗಿರುವ ಕಷಾಯಗಳ ರೆಸಿಪಿ ನಿಮ್ಮ ಬಳಿ ಇದ್ದರೆ ಬರೆದು ಕಳುಹಿಸಿ. ಚಿತ್ರ, ಅಗತ್ಯದ ಸಾಮಗ್ರಿಗಳ ವಿವರ ಜೊತೆಗಿರಲಿ. ಬರಹ ಅಥವಾ ನುಡಿ ತಂತ್ರಾಂಶದಲ್ಲಿರಲಿ. ಚಿತ್ರ ಮತ್ತು ಸ್ವವಿಳಾಸ, ಸಂಪರ್ಕ ಸಂಖ್ಯೆ ನೀಡುವುದು ಕಡ್ಡಾಯ. ಬರಹದ ಫೋಟೊಪ್ರತಿಗಳನ್ನು ಸ್ವೀರಕಿಸುವುದಿಲ್ಲ.

ಇಮೇಲ್‌ ಮಾಡಬೇಕಾದ ವಿಳಾಸ: bhoomika@prajavani.co.in
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT