ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿ ಕ್ರಷರ್‌ ಅನುಮತಿ ವಿರೋಧಿಸಿ ಪ್ರತಿಭಟನೆ ಇಂದು

Last Updated 24 ಮೇ 2016, 4:59 IST
ಅಕ್ಷರ ಗಾತ್ರ

ಉಡುಪಿ: ಕಳತ್ತೂರು ಗ್ರಾಮದಲ್ಲಿ ಜಲ್ಲಿ ಕ್ರಷರ್ ಆರಂಭಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು 28ನೇ ಕಳತ್ತೂರು ಗ್ರಾಮದ ಜಲ್ಲಿ ಕ್ರಷರ್‌ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಕ್ರಷರ್ ಆರಂಭಿಸಬಹುದು ಎಂದು ಶಿಫಾರಸು ಮಾಡಿರುವ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಅವರ ಕ್ರಮ  ಖಂಡಿಸಿ ತಹಶೀಲ್ದಾರ್ ಕಚೇರಿ ಎದುರು ಇದೇ 24ರಂದು ಪ್ರತಿಭಟನೆ ನಡೆಸಲು ಸಹ ಸಮಿತಿ ನಿರ್ಧರಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ, ವಕೀಲ ಅಶೋಕ್ ಕುಮಾರ್‌ ಶೆಟ್ಟಿ, ಕಳತ್ತೂರು ಗ್ರಾಮದ ಸರ್ವೇ ಸಂಖ್ಯೆ 26/11ರಲ್ಲಿ ಇರುವ 1 ಎಕರೆ ಪಟ್ಟಾ ಜಮೀನಿನಲ್ಲಿ ಕ್ರಷರ್ ಆರಂಭಿಸಲು ಕೆಲವರು ಮುಂದಾ ಗಿದ್ದಾರೆ. ಇದೊಂದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ಕ್ರಷರ್ ಬಂದರೆ ಇಡೀ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದರು.

ಇಲ್ಲಿ ನೂರಾರು ಕುಟುಂಬಗಳು ವಾಸವಾಗಿವೆ. ಅವರೆಲ್ಲರೂ ಕೃಷಿಯನ್ನೇ ಅವಲಂಬಿಸಿದ್ದಾರೆ. ಕ್ರಷರ್‌ನಿಂದ ಹೊರ ಹೊಮ್ಮುವ ದೂಳಿನ ಕಣಗಳಿಂದಾಗಿ ಸುತ್ತಮುತ್ತ ಕೃಷಿ ನಾಶವಾಗಲಿದೆ. ಬಂಡೆಗಳನ್ನು ಒಡೆಯಲು ಸ್ಫೋಟಕ ಗಳನ್ನು ಬಳಸಿದರೆ ಮನೆಗಳು ಸಹ ಬಿರುಕು ಬಿಡುವ ಅಪಾಯ ಇರುತ್ತದೆ. ಕ್ರಷರ್‌ನ ತ್ಯಾಜ್ಯ ಸೀತಾನದಿ ಸೇರುವು ದರಿಂದ ನೀರು ಮಲೀನವಾಗಲಿದೆ. ಈ ಭಾಗ ಜನರು ಕುಡಿಯುವ ನೀರಿಗೂ ಸೀತಾನದಿಯನ್ನೇ ಅವಲಂಬಿಸಿದ್ದಾರೆ. ನೀರು ಕಲುಷಿತವಾದರೆ ಹನಿ ನೀರಿಗೂ ಪರದಾಡಬೇಕಾಗುತ್ತದೆ. ಅಲ್ಲದೆ ನದಿ ಯಿಂದಲೇ ನೀರನ್ನು ಪಂಪ್‌ ಮಾಡಿ ಕೃಷಿ ಮಾಡುತ್ತಿದ್ದಾರೆ. ಇದಕ್ಕೂ ಕುತ್ತು ಬರ ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ಸ್ಥಳದಲ್ಲಿ ಐತಿಹಾಸಿಕ ಕಟ್ಟೀಮನೆ ದೇವಿಯ ದೇವಸ್ಥಾನವೂ ಇದೆ. ಕ್ರಷರ್‌ನಿಂದಾಗಿ ಇಲ್ಲಿ ಓಡಾಡು ವುದು ಕಷ್ಟವಾಗಬಹುದು. ಈ ಎಲ್ಲ ಸಕಾರಣಗಳನ್ನು ಪರಿಗಣಿಸಿ ಇಲ್ಲಿ ಯಾವು ದೇ ಕಾರಣಕ್ಕೂ ಕ್ರಷರ್ ಆರಂಭಿಸಲು ಅನುಮತಿ ನೀಡಬಾರದು. ಈ ಹಿಂದೆ ಜಂಟಿ ಸಮೀಕ್ಷೆಗೆ ಬಂದಾಗ ತೀವ್ರ ಹೋರಾಟ ಮಾಡಿ ಅಧಿಕಾರಿಗಳನ್ನು ವಾಪಸ್‌ ಕಳುಹಿಸಿದ್ದೆವು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇದೇ 28ರಂದು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ. ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಮೂರೂ ಗ್ರಾಮಸ್ಥರ ಮನವಿಯನ್ನು ಪರಿಗಣಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಹೋರಾಟ ಸಮಿತಿಯ ಅಧ್ಯಕ್ಷ ಮುದ್ದು ಪೂಜಾರಿ, ಸಂಘಟನಾ ಕಾರ್ಯ ದರ್ಶಿ ಮಿಥುನ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT