ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿಗೆ ತಂದ ಮೊಬೈಲ್‌ ನೀರಿಗೆಸೆದರು!

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ತರಗತಿಗೆ ಮೊಬೈಲ್‌ ತಂದ ಕಾರಣಕ್ಕೆ ವಿದ್ಯಾರಣ್ಯ­ಪುರದ ಶಾರದಾ ಸ್ಕೂಲ್‌ ಆಫ್‌ ಆರ್ಕಿ­ಟೆಕ್ಚರ್‌ ಶಿಕ್ಷಣ ಸಂಸ್ಥೆಯ ಮಾಲೀ­ಕರು ವಿದ್ಯಾರ್ಥಿಗಳಿಂದ ಮೊಬೈಲ್‌­ಗಳನ್ನು ಕಸಿದು­ಕೊಂಡು ನೀರಿನ ಬಕೆಟ್‌ಗೆ ಹಾಕಿದ ಘಟನೆ ಮಂಗಳ­ವಾರ ನಡೆ­ದಿದೆ. ಇದ­ರಿಂದ ಆಕ್ರೋಶ­ಗೊಂಡ ವಿದ್ಯಾರ್ಥಿಗಳು, ಮೊಬೈ­ಲ್‌­­­ಗಳನ್ನು ರಿಪೇರಿ ಮಾಡಿಸಿ­ಕೊಡುವಂತೆ ಒತ್ತಾಯಿಸಿ ಸುಮಾರು ಒಂದೂ­ವರೆ ತಾಸು ಪ್ರತಿ­ಭಟನೆ ಮಾಡಿದರು.  ಮಧ್ಯ­ಪ್ರವೇ­ಶಿಸಿದ ವಿದ್ಯಾ­ರಣ್ಯ­ಪುರ ಪೊಲೀ­ಸರು, ಪರಿಸ್ಥಿತಿಯನ್ನು ನಿಯಂತ್ರಿ­ಸಿದರು.

‘ಸಂಸ್ಥೆಯ ಮಾಲೀಕರಾದ ವೈ.ಎನ್.­ಶರ್ಮಾ ಅವರು ಮೂರು ಮೊಬೈ­ಲ್‌­­ಗಳನ್ನು ನೀರಿಗೆ ಹಾಕಿ­ದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆ ನಡೆ­­ಸಿದ ನಂತರ, ಆ ಮೊಬೈಲ್‌­ಗಳನ್ನು ರಿಪೇರಿ ಮಾಡಿಸಿ­ಕೊಡು­ವು­ದಾಗಿ ಹೇಳಿದ್ದಾರೆ. ಹೀಗಾಗಿ ಸಾಮಾನ್ಯ ಸ್ವರೂಪದ ಅಪರಾಧ (ಎನ್‌.ಸಿ)­ ಪ್ರಕರಣ ದಾಖಲಿಸಿಕೊಳ್ಳ­ಲಾ­ಗಿದೆ’ ಎಂದು ಪೊಲೀಸರು ತಿಳಿಸಿ­ದ್ದಾರೆ. ‘ವಿದ್ಯಾರ್ಥಿಗಳು ತರಗತಿ ಅವಧಿ­ಯಲ್ಲಿ ಮೊಬೈಲ್‌ ಬಳಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ತರಗತಿಗೆ ಮೊಬೈಲ್‌ ತರುವುದನ್ನು ಆ.11ರಿಂದ ನಿರ್ಬಂಧಿಸ­ಲಾ­ಗಿತ್ತು. ಆದರೂ ವಿದ್ಯಾರ್ಥಿಗಳು ಮೊಬೈಲ್‌ ಬಳಕೆ ಮಾಡು­ತ್ತಿರುವ ಬಗ್ಗೆ ಪೋಷ­ಕರೇ  ದೂರು ಕೊಟ್ಟಿದ್ದರು. ಮಂಗಳವಾರ ವಿದ್ಯಾರ್ಥಿ­ಗಳ ಬ್ಯಾಗ್‌­ಗ­ಳನ್ನು ಪರಿ­ಶೀಲಿಸಿದಾಗ ಮೂರು ಮೊಬೈಲ್‌ಗಳು ಪತ್ತೆ­­ಯಾದವು. ಹೀಗಾಗಿ ಅವು­ಗಳನ್ನು ನೀರಿಗೆ ಎಸೆದೆ’ ಎಂದು ವೈ.ಎನ್.­ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ತರಗತಿ ಅವಧಿ­ಯಲ್ಲಿ ಸಹಪಾಠಿಯ ಮೊಬೈಲ್‌ಗೆ ವಾಟ್ಸ್‌ ಆ್ಯಪ್‌ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ಆದರೆ, ಆ ಸಹ­ಪಾಠಿ ಮೊಬೈಲನ್ನು ಮನೆಯಲ್ಲೇ ಬಿಟ್ಟು ತರಗತಿಗೆ ಬಂದಿದ್ದ­ರಿಂದ ಆತನ ಪೋಷಕರು ಸಂದೇಶಗಳನ್ನು ವೀಕ್ಷಿಸಿ­ದ್ದರು. ನಂತರ ಅವರು ಈ ವಿಷಯವನ್ನು ಆಡಳಿತ ಮಂಡಳಿ ಗಮನಕ್ಕೆ ತಂದಿ­­ದ್ದರು.ಹೀಗಾಗಿ ಪ್ರತಿದಿನ ಸೆಕ್ಯುರಿಟಿ ಗಾರ್ಡ್‌ ಮೂಲಕ ತಪಾ­ಸಣೆ ಮಾಡಿಸಿ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡಲಾಗುತ್ತಿತ್ತು. ಆದರೂ ಕೆಲವರು ಸಿಬ್ಬಂದಿ ಕಣ್ತಪ್ಪಿಸಿ ಮೊಬೈಲ್‌ ತೆಗೆದುಕೊಂಡು ಬರುತ್ತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT