ಬೀದರ್: ಬಯಲಾಟ ಕಲಾವಿದ ಗುಂಡ್ಲವದ್ದಿಗೇರಿ ತಿಮ್ಮಾರೆಡ್ಡಿ ಅವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2015ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ ಹಾಗೂ 10 ಜನ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಕಲಬುರ್ಗಿ ಕೇಂದ್ರೀಯ ವಿ.ವಿ ಕುಲಪತಿ ಡಾ.ಎಚ್್.ಎಂ. ಮಹೇಶ್ವರಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪಾರ್ತಿಸುಬ್ಬ ಪ್ರಶಸ್ತಿ ₹1ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು, ವಾರ್ಷಿಕ ಗೌರವ ಪ್ರಶಸ್ತಿ ತಲಾ ₹50 ಸಾವಿರ ನಗದು ಒಳಗೊಂಡಿದೆ.

‘ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ತಿಮ್ಮಾರೆಡ್ಡಿ ಅವರು ಆರು ದಶಕಗಳಿಂದ ಬಯಲಾಟ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಕಲಾಸೇವೆ ಗುರುತಿಸಿ ಪಾರ್ತಿಸುಬ್ಬ ಪ್ರಶಸ್ತಿ ನೀಡಲಾಗಿದೆ’ ಎಂದು ಅಕಾಡೆಮಿಯ ಅಧ್ಯಕ್ಷ ಬೆಳಗಲ್ಲು ವೀರಣ್ಣ ತಿಳಿಸಿದರು.

ವಾರ್ಷಿಕ ಗೌರವ ಪ್ರಶಸ್ತಿ ಸ್ವೀಕರಿಸಿದ ಕಲಾವಿದರು: ಕಂದಾವರ ರಘುರಾಮ ಶೆಟ್ಟಿ– ಯಕ್ಷಗಾನ ಪ್ರಸಂಗಕರ್ತ (ನೂಜಾಡಿ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ), ಹಡಿನಬಾಳ ಶ್ರೀಪಾದ ಹೆಗಡೆ– ಯಕ್ಷಗಾನ ಕಲಾವಿದ (ಕೊಂಡಾಕುಳಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ), ಬೊಟ್ಟಿಕೇರೆ ಪುರುಷೋತ್ತಮ ಪೂಂಜಾ–ಭಾಗವತರು ತೆಂಕುತಿಟ್ಟು (ಹಸೈಗೋಳಿ, ಮಂಗಳೂರು ಜಿಲ್ಲೆ), ಮೇಗರವಳ್ಳಿ ರಾಮನಾಯಕ– ಯಕ್ಷಗಾನ ಪ್ರಸಾಧನ ಕಲಾವಿದ (ಮೇಗರವಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ), ಅವ್ವಪ್ಪ ಸಣ್ಣಪ್ಪ ಅಳ್ಳಿಚಂಡಿ– ಶ್ರೀಕೃಷ್ಣ ಪಾರಿಜಾತ (ಬ್ಯಾಲ್ಯಾಳ, ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ), ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ–ಸಣ್ಣಾಟ (ಧುಳಗನವಾಡಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ), ಗೌರಮ್ಮ –ತೊಗಲುಗೊಂಬೆಯಾಟ (ಮರಸುಕೊಪ್ಪಲು, ಆಲೂರು ತಾಲ್ಲೂಕು, ಹಾಸನ ಜಿಲ್ಲೆ), ಎಸ್. ಸೊಲ್ಲಮ್ಮ–ಬಯಲಾಟ (ಕೂಡ್ಲಿಗಿ, ಬಳ್ಳಾರಿ ಜಿಲ್ಲೆ), ಸಣ್ಣತಿಮ್ಮಯ್ಯ– ಮೂಡಲಪಾಯ ಯಕ್ಷಗಾನ (ತೋಟಮಡಗಲು, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ), ಎ.ಕೆ. ಮಾರಯ್ಯ –ಬಯಲಾಟ ಮದ್ದಳೆಗಾರರು (ಬೆಳಗಟ್ಟ, ಚಿತ್ರದುರ್ಗ ಜಿಲ್ಲೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.