ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃತೀಯ ಲಿಂಗ: ಕೋರ್ಟ್‌ ತೀರ್ಪಿಗೆ ವಿಶ್ವಸಂಸ್ಥೆ ಸ್ವಾಗತ

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ(ಪಿಟಿಐ):  ಲೈಂಗಿಕ ಅಲ್ಪ­ಸಂಖ್ಯಾತರನ್ನು ಮೂರನೇ ಲಿಂಗದವರು ಎಂದು ಗುರುತಿಸಿ ಭಾರತದ ಸುಪ್ರೀಂ­ಕೋರ್ಟ್‌ ನೀಡಿ­ರುವ ತೀರ್ಪು ‘ಐತಿಹಾಸಿಕ’­­ವಾದುದು ಎಂದು ವಿಶ್ವಸಂಸ್ಥೆ ಶ್ಲಾಘಿಸಿದೆ. ಅಲ್ಲದೇ, ಈ ತೀರ್ಪಿನಿಂದ ಲೈಂಗಿಕ ಅಲ್ಪಸಂಖ್ಯಾತರು ಉದ್ಯೋಗ ಮತ್ತು ಸಾರ್ವಜನಿಕ ಸೇವಾ­ವಲಯವನ್ನು ಪ್ರವೇಶಿಸಲು ಸಹಾಯಕಾರಿಯಾಗಿದೆ ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಅವರ ವಕ್ತಾರರಾದ ಸ್ಟಿಫಾನ್ ಡುಜಾರಿಕ್‌, ‘ಭಾರತದ ಲೈಂಗಿಕ ಅಲ್ಪ­ಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿ­ಯುವ ಈ ತೀರ್ಪು ಐತಿಹಾಸಿಕವಾದುದು ಇದನ್ನು ನಾವು ಸ್ವಾಗತಿಸುತ್ತೇವೆ’ ಎಂದು ಹೇಳಿದ್ದಾರೆ.

‘ಲೈಂಗಿಕ ಅಲ್ಪಸಂಖ್ಯಾತರ ಸ್ಥಿತಿಗತಿ­ಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ತೀರ್ಪು ಸಹಾಯಕಾರಿಯಾಗಲಿದೆ’ ಎಂದು ಡುಜಾರಿಕ್‌ ಹೇಳಿದ್ದಾರೆ.

ಲಂಡನ್‌ ವರದಿ: ಲೈಂಗಿಕ ಅಲ್ಪ­ಸಂಖ್ಯಾತರ ಹಕ್ಕುಗಳನ್ನು ಅಂಗೀಕರಿ­ಸಿರುವ ಭಾರತದ ಸುಪ್ರೀಂ­ಕೋರ್ಟ್‌ಗೆ ಧನ್ಯ­ವಾದ. ಇದರಿಂದ ಲಕ್ಷಾಂತರ ಜನರ ಬದುಕಿನಲ್ಲಿ ಬದಲಾವಣೆ ಆಗಲಿದೆ ಎಂದು  ಮಾನವಹಕ್ಕುಗಳ ಹೋರಾಟ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಹೇಳಿದೆ.

ಹಲವಾರು ವರ್ಷಗಳಿಂದ ದಮನ­ಕ್ಕೊಳ­ಗಾದ ಜನರ ಬದುಕಿನಲ್ಲಿ ಬದ­ಲಾ­ವಣೆ ತರಲು ಈ ತೀರ್ಪು ನೆರವಾ­ಗುತ್ತದೆ ಎಂದು  ಅಮ್ನೆಸ್ಟಿ ಇಂಟರ್‌­ನ್ಯಾಷನಲ್‌ನ ಭಾರತಕ್ಕೆ ಸಂಬಂಧಿಸಿದ ಯೋಜನಾ ನಿರ್ದೇಶಕ ಶಶಿಕುಮಾರ್‌ ವೆಲಾತ್‌ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT