ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿಗೆ ವಿಫಲ: ಮೇಯರ್‌

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಆಡ­ಳಿತದ ಅವಧಿಯಲ್ಲಿ ನಗರ­­ವನ್ನು ಕಸಮುಕ್ತ­ಗೊಳಿ­ಸು­ವುದೇ ಪ್ರಮುಖ ಗುರಿ­ಯಾಗಿತ್ತು. ಆದರೆ, ಅದನ್ನು ಈಡೇ­ರಿಸಲು ಸಾಧ್ಯ­ವಾಗಲಿಲ್ಲ’
–ಅಧಿಕಾರದಿಂದ ನಿರ್ಗ­ಮಿ­ಸು­ತ್ತಿರುವ ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಮಂಗಳ­ವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತಿದು. ‘ನಗರವನ್ನು ಕಸಮುಕ್ತ ಮಾಡದಿದ್ದರೂ ಆ ನಿಟ್ಟಿ­ನಲ್ಲಿ ಸಾಕಷ್ಟು ಪ್ರಯತ್ನ ಆಗಿದೆ. ಕಸ ಸಂಸ್ಕರಣೆಗೆ ಸಂಬಂಧಿಸಿದಂತೆ ನಾಲ್ಕು ಘಟಕಗಳ ಸ್ಥಾಪನೆಗೆ ಈಗಾ­ಗಲೇ ಒಪ್ಪಿಗೆ ದೊರೆತಿದೆ. ಅವುಗಳು ಕಾರ್ಯಾ­ರಂಭ ಮಾಡಿದರೆ ಕಸದ ಸಮಸ್ಯೆ ತಗ್ಗಲಿದೆ’ ಎಂದು ವಿವರಿಸಿದರು.

‘ಬಿಬಿಎಂಪಿ ಸದಸ್ಯನಾಗಿ ನಮಗೆ ಇನ್ನೂ ಏಳು ತಿಂಗಳ ಕಾಲಾವಕಾಶ ಇದೆ. ಕಸ ಸಂಸ್ಕರಣೆ ಯೋಜ­ನೆ­ಗಳು ಅನುಷ್ಠಾನಗೊಳ್ಳಲು ಸಾಧ್ಯವಾದ ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದರು.

‘ಕೆ.ಆರ್‌. ಮಾರುಕಟ್ಟೆಯಲ್ಲಿ ಸತತ 37 ಸೋಮ­­ವಾರ ಸ್ವಚ್ಛತಾ ಆಂದೋಲನ ನಡೆಸ­ಲಾ­ಗಿದೆ. ಮಾರುಕಟ್ಟೆಯಲ್ಲಿ ಸ್ವಚ್ಛ ವಾತಾವರಣ ನಿರ್ಮಾಣ­­ವಾಗಿದೆ’ ಎಂದು ಹೆಮ್ಮೆಯಿಂದ ಹೇಳಿದರು. ‘ಮಂಡೂರಿನ ಮುಖಂಡರು ಗ್ರಾಮ­ದಲ್ಲಿ ವಾಸ್ತವ್ಯ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದ­­ರಿಂದ ನಾನು ಅಲ್ಲಿ ರಾತ್ರಿ ತಂಗಲು ಹೋಗಲಿಲ್ಲ’ ಎಂದು ತಿಳಿಸಿದರು. ‘ಮಂಡೂರಿನ ಕಸದ ಸಮಸ್ಯೆ­ಯನ್ನು ಬಗೆಹರಿಸುವುದು ದೋಸೆ ತಿರುವಿ ಹಾಕಿ­ದಷ್ಟು ಸುಲಭವೇನೂ ಅಲ್ಲ. ಆದರೆ. ಡಿಸೆಂಬರ್‌ 1ರಿಂದ ಅಲ್ಲಿಗೆ ಕಸ ಒಯ್ಯುವುದನ್ನು ನಿಲ್ಲಿಸ­ಲಾಗು­ತ್ತದೆ’ ಎಂದು ಹೇಳಿದರು. ಅದರ ಹೊಣೆಯನ್ನು ನೀವೇ  ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಬಿಬಿ­ಎಂಪಿ ಸದಸ್ಯನಾಗಿ ನಾನೂ ಜವಾಬ್ದಾರಿ ಹೊರುವೆ’ ಎಂದು ಉತ್ತರಿಸಿದರು.

‘ಮೈಸೂರು ಮತ್ತು ಗೂಡ್ಸ್‌ಶೆಡ್‌ ರಸ್ತೆಗಳ ವಿಸ್ತರಣೆ ಮಾಡಿದ್ದು, ಸಿಎನ್‌ಆರ್‌ ರಾವ್‌ ಜಂಕ್ಷನ್‌ ಸಂಚಾ­ರಕ್ಕೆ ಮುಕ್ತಗೊಳಿಸಿದ್ದು ನನ್ನ ಆಡಳಿತಾ­ವಧಿ­ಯಲ್ಲಿ ಆಗಿರುವ ಸಾಧನೆಗಳು’ ಎಂದ ಅವರು, ‘ನಮ್ಮ ಬೆಂಗಳೂರು ನನ್ನ ಕೊಡುಗೆ’ಯಿಂದ ಬಿಬಿಎಂಪಿಗೆ ₨ 85 ಕೋಟಿ ಹಣ ಉಳಿಸಿದ ತೃಪ್ತಿ­ಯಿದೆ’ ಎಂದೂ ಹೇಳಿದರು.

‘ಬೆಂಗಳೂರಿಗೆ ಒಬ್ಬ ಮೇಯರ್‌ ಸಾಕು. ಆದರೆ, ಮೇಯರ್‌ಗೆ ಹೆಚ್ಚಿನ ಕಾಲಾವಧಿ ಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಮಂಡನೆಯಾಗದ ಆಡಳಿತ ವರದಿ: ವಿಷಾದ
ಬಿಬಿಎಂಪಿ ಆಡಳಿತದ ಲೋಪ–ದೋಷಗಳ ಮೇಲೆ ಬೆಳಕು ಚೆಲ್ಲುವಂತಹ ಆಡಳಿತ ವರದಿ­ಯನ್ನು ಮಂಡಿಸಲು ಆಗದಿರುವುದಕ್ಕೆ ಮೇಯರ್‌ ಹಾಗೂ ಉಪ ಮೇಯರ್‌ ಇಬ್ಬರೂ ವಿಷಾದ ವ್ಯಕ್ತಪಡಿಸಿದರು.

ಆಡಳಿತ ವರದಿ ಮಂಡಿಸುವುದು ಕೆಎಂಸಿ ಕಾಯ್ದೆಯ ಸೆಕ್ಷನ್‌ 61 (3)ರ ಪ್ರಕಾರ ಉಪ ಮೇಯರ್‌ ಅವರ ಹೊಣೆ. ಆದರೆ, ಉಪ ಮೇಯರ್‌ ಎನ್‌.ಇಂದಿರಾ ತಮ್ಮ ಅವಧಿಯಲ್ಲಿ ಆಡ­ಳಿತ ವರದಿಯನ್ನು ಮಂಡನೆ ಮಾಡಲಿಲ್ಲ.

‘ಆಡಳಿತ ವರದಿಯನ್ನು ಮಂಡಿಸಲು ಅನು­ಮತಿ ನೀಡುವಂತೆ ಮೇಯರ್‌ ಅವರಿಗೆ ಪತ್ರ ಬರೆದಿದ್ದೆ’ ಎಂದು ಇಂದಿರಾ ಹೇಳಿದರು.
‘ವರದಿಯನ್ನು ಸಿದ್ಧಗೊಳಿಸುವಂತೆ ಅಧಿಕಾರಿ­ಗಳಿಗೆ ಸೂಚನೆ ನೀಡಲಾಗಿತ್ತು. ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಕರ್ತವ್ಯದ ಮೇಲೆ ಅಧಿ­ಕಾರಿ­ಗಳು ನಿಯೋಜನೆಗೊಂಡ ಕಾರಣ ವರದಿ ಸಿದ್ಧಪಡಿಸುವುದು ವಿಳಂಬವಾಯಿತು.

ಈಗ ವರದಿ ಸಿದ್ಧವಾಗಿದ್ದರೂ ಕಳೆದ ಒಂದು ವಾರ­ದಿಂದ ಹಬ್ಬ ಇರುವ ಕಾರಣ ಅದನ್ನು ಮುದ್ರಿ­ಸುವುದು ಸಾಧ್ಯವಾಗಲಿಲ್ಲ’ ಎಂದು ಮೇಯರ್‌ ವಿವರಿಸಿದರು. ಹಲವು ವರ್ಷಗಳಿಂದ ಒಮ್ಮೆಯೂ ಆಡಳಿತ ವರದಿ ಮಂಡನೆಯಾಗಿಲ್ಲ. 2006ರಿಂದ 2008ರ ಅವಧಿಯಲ್ಲಿ ನಡೆದ ಸಾರ್ವಜನಿಕ ಕಾಮ­ಗಾರಿಗಳಲ್ಲಿ ಹಲವು ಅವ್ಯವಹಾರಗಳು ನಡೆದ ಆರೋಪಗಳಿದ್ದು, ವರದಿ ಅವುಗಳ ಮೇಲೆ ಬೆಳಕು ಚೆಲ್ಲಲಿದೆ ಎಂಬುದು ಬಿಬಿ­ಎಂಪಿಯ ಹಲವು ಸದಸ್ಯರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT